ಕೊನೆಯುಸಿರೆಳೆದ ಭಾರತದ ಟೆಸ್ಟ್‌ ಕ್ರಿಕೆಟ್ ಅಂಪೈರ್ ಸತ್ಯಾಜಿ ರಾವ್

* ಭಾರತದ ಹಿರಿಯ ಅಂಪೈರ್ ಬಾದಾಮಿ ಸತ್ಯಾಜಿ ರಾವ್ ಇನ್ನಿಲ್ಲ

* 91ನೇ ವಯಸ್ಸಿಗೆ ಕೊನೆಯುಸಿರೆಳೆದ ಸತ್ಯಾಜಿ ರಾವ್

*  17 ಟೆಸ್ಟ್‌ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಕನ್ನಡದ ಅಂಪೈರ್

Indias Famous Test Cricket Umpire B Satyaji Rao dies at 91 kvn

ಬೆಂಗಳೂರು(ಸೆ.28): ಭಾರತದ ಮಾಜಿ ಟೆಸ್ಟ್‌ ಅಂಪೈರ್, ಬೆಂಗಳೂರು ಮೂಲದ ಬಾದಾಮಿ ಸತ್ಯಾಜಿ ರಾವ್(91) (B Satyaji Rao) ಕೊನೆಯುಸಿರೆಳೆದಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸತ್ಯಾಜಿ ರಾವ್ ಮಂಗಳವಾರ(ಸೆ.28) ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನಲ್ಲಿ ಅಕ್ಟೋಬರ್ 16, 1929ರಲ್ಲಿ ಜನಿಸಿದ್ದ ಸತ್ಯಾಜಿ ರಾವ್, 1956ರಿಂದ1981ರ ವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಂಪೈರ್ (Umpire) ಆಗಿ ಕಾರ್ಯ ನಿರ್ವಹಿಸಿದ್ದರು. ಬಿ. ಸತ್ಯಾಜಿ ರಾವ್ 5 ಬಾರಿ ರಣಜಿ ಟ್ರೋಫಿ (Ranji Trophy) ಫೈನಲ್‌ನಲ್ಲಿ ಅಂಪೈರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಇದಷ್ಟೇ ಅಲ್ಲದೇ ನಾಲ್ಕು ಬಾರಿ ದುಲೀಪ್‌ ಟ್ರೋಫಿ (Duleep Trophy) ಫೈನಲ್‌ನಲ್ಲೂ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು.   

E-Auction ನಲ್ಲಿ ನೀವೂ ಖರೀದಿಸಬಹುದು CA ಭವಾನಿ ದೇವಿ ಬಳಸಿದ ಖಡ್ಗ..!

ಇನ್ನು ಸತ್ಯಾಜಿ ರಾವ್ ಅಂತಾರಾಷ್ಟ್ರೀಯ ಮಟ್ಟದಲ್ಲಿ 1960ರಿಂದ 1979ರ ವರೆಗೆ 17 ಟೆಸ್ಟ್‌ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದರು. 1960ರ ಡಿಸೆಂಬರ್‌ನಲ್ಲಿ ಕೋಲ್ಕತದ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಮೊದಲ ಬಾರಿಗೆ ಟೆಸ್ಟ್ ಅಂಪೈರ್ ಆಗಿ ಪಾದಾರ್ಪಣೆ ಮಾಡಿದ್ದರು. ಇನ್ನು 1979ರಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವೆ ಕಾನ್ಪುರದಲ್ಲಿ ನಡೆದ ಆರನೇ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ಸತ್ಯಾಜಿ ರಾವ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು.  

Latest Videos
Follow Us:
Download App:
  • android
  • ios