Asianet Suvarna News Asianet Suvarna News

ಅಹಮದಾ​ಬಾ​ದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವ​ಕಪ್‌ ಪಂದ್ಯ ಆಡ​ಲ್ಲ: ಪಾಕಿಸ್ತಾನ ಹೊಸ ಕ್ಯಾತೆ..!

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಮತ್ತೆ ಪಾಕ್ ತಕರಾರು
ಫೈನಲ್‌ ಹೊರತುಪಡಿಸಿ ಮತ್ತೆ ಉಳಿದ ಪಂದ್ಯ ಅಹಮದಾಬಾದ್‌ನಲ್ಲಿ ಆಡೊಲ್ಲವೆಂದ ಪಾಕ್
ಪಿಸಿಬಿ ಅಧ್ಯಕ್ಷ ನಜಂ ಸೇಠಿ ಹೊಸ ಕ್ಯಾತೆ

Pakistan dont want to play in Ahmedabad unless World Cup final Says Najam Sethi to ICC kvn
Author
First Published Jun 8, 2023, 9:31 AM IST

ಕರಾ​ಚಿ(ಜೂ.08): ಏಷ್ಯಾ​ಕಪ್‌ ಹಾಗೂ ಐಸಿಸಿ ಏಕ​ದಿನ ವಿಶ್ವ​ಕಪ್‌ ವಿಚಾ​ರ​ದಲ್ಲಿ ಗೊಂದ​ಲ ಮತ್ತೆ ಮುಂದು​ವ​ರಿ​ದಿದ್ದು, ಅಹಮದಾಬಾದ್‌ನಲ್ಲಿ ವಿಶ್ವಕಪ್‌ ಪಂದ್ಯಗಳನ್ನು ಆಡುವುದಿಲ್ಲ ಎಂದು ಐಸಿಸಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ನಜಂ ಸೇಠಿ ಸ್ಪಷ್ಟ​ಪ​ಡಿ​ಸಿದ್ದಾರೆ ಎಂದು ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ. 

ಐಸಿಸಿ ಏಕದಿನ ವಿಶ್ವ​ಕ​ಪ್‌ನ ತನ್ನ ಪಂದ್ಯ​ಗ​ಳನ್ನು ಭಾರ​ತ​ದಿಂದ ಹೊರ​ಗಡೆ ನಡೆ​ಸಲು ಒತ್ತಾ​ಯಿ​ಸು​ವು​ದಿಲ್ಲ ಎಂಬ ಭರ​ವಸೆ ಪಡೆ​ಯಲು ಐಸಿಸಿ ಅಧಿ​ಕಾ​ರಿ​ಗಳು ಇತ್ತೀ​ಚೆಗೆ ಪಾಕ್‌ಗೆ ಭೇಟಿ ನೀಡಿ, ಪಿಸಿಬಿ ಜೊತೆ ಮಾತು​ಕತೆ ನಡೆ​ಸಿ​ದ್ದರು. ಈ ವೇಳೆ ತನ್ನ ವಿಶ್ವ​ಕಪ್‌ ಪಂದ್ಯ​ಗ​ಳನ್ನು ಕೋಲ್ಕತಾ, ಚೆನ್ನೈ ಹಾಗೂ ಬೆಂಗ​ಳೂ​ರಿ​ನಲ್ಲಿ ಆಯೋ​ಜಿ​ಸು​ವಂತೆ ಪಿಸಿಬಿ ಪಟ್ಟು ಹಿಡಿ​ದಿದ್ದು, ಪಾಕಿಸ್ತಾನ ಫೈನಲ್‌ ಪ್ರವೇಶಿಸಿದರಷ್ಟೇ ಅಹಮದಾಬಾದ್‌ನಲ್ಲಿ ಪಂದ್ಯ ಆಯೋಜಿಸಿ ಎಂದು ಒತ್ತಾ​ಯಿ​ಸಿ​ದ್ದಾಗಿ ವರ​ದಿ​ಯಾ​ಗಿ​ದೆ.

ಬಲ್ಲ ಮೂಲಗಳ ಪ್ರಕಾರ, ಭಾರತ ಕ್ರಿಕೆಟ್ ತಂಡವು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಇನ್ನು ಏಕದಿನ ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 15ರಂದು ನಡೆಯುವ ಸಾಧ್ಯತೆಯಿದ್ದು, ಈ ಪಂದ್ಯಕ್ಕೆ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಪಾಕಿಸ್ತಾನ ಹೊಸ ಕ್ಯಾತೆ ತೆಗೆದಿದೆ.

WTC Final ಟ್ರಾವಿಸ್ ಶತಕ, ಸ್ಮಿತ್ 95 ರನ್; ಆಸಿಸ್ ಬೃಹತ್ ಮೊತ್ತಕ್ಕೆ ಬಳಲಿದ ಭಾರತ!

ಕ್ರಿಕೆಟ್ ವೆಬ್‌ಸೈಟ್‌ ESPNCricinfo ಪ್ರಕಾರ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ. 10 ತಂಡಗಳು ಪಾಲ್ಗೊಳ್ಳಲಿರುವ ಈ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಬೆಂಗಳೂರು, ಚೆನ್ನೈ, ಡೆಲ್ಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಖನೌ, ಇಂದೋರ್, ರಾಜ್‌ಕೋಟ್, ಮುಂಬೈ ಹಾಗೂ ತಿರುವನಂತಪುರಂ ಸೇರಿದಂತೆ ಒಟ್ಟು ದೇಶದ 12 ನಗರಗಳಲ್ಲಿ ಪಂದ್ಯಾಟಗಳು ಜರುಗಲಿವೆ ಎಂದು ವರದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಅಕ್ಟೋಬರ್ 05ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್‌ ತಂಡಗಳು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿವೆ. 

ಜೂನ್‌18ರಿಂದ ಏಕದಿನ ವಿಶ್ವಕಪ್‌ ಅರ್ಹತಾ ಟೂರ್ನಿ

ದುಬೈ: ಜಿಂಬಾಬ್ವೆಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಅರ್ಹತಾ ಟೂರ್ನಿಯ ವೇಳಾಪಟ್ಟಿಯನ್ನು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಪ್ರಕಟಿಸಿತು. ಜೂನ್ 18ರಿಂದ ಜುಲೈ 9ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ಆತಿಥೇಯ ಜಿಂಬಾಬ್ವೆ, ವೆಸ್ಟ್‌ಇಂಡೀಸ್‌, ನೆದರ್‌ಲೆಂಡ್‌್ಸ, ನೇಪಾಳ, ಅಮೆರಿಕ, ಶ್ರೀಲಂಕಾ, ಐರ್ಲೆಂಡ್‌, ಸ್ಕಾಟ್ಲೆಂಡ್‌, ಒಮಾನ್‌ ಹಾಗೂ ಯುಎಇ ಸ್ಪರ್ಧಿಸಲಿವೆ. ಫೈನಲ್‌ ಪ್ರವೇಶಿಸುವ ತಂಡಗಳು ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.

ಯುಎಇ ವಿರುದ್ಧ ಸರಣಿ ಗೆದ್ದ ವೆಸ್ಟ್‌​ಇಂಡೀ​ಸ್‌

ಶಾರ್ಜಾ: ಯುಎಇ ವಿರು​ದ್ಧದ 2ನೇ ಏಕ​ದಿನ ಪಂದ್ಯ​ದಲ್ಲಿ 78 ರನ್‌ ಗೆಲುವು ಸಾಧಿ​ಸಿದ ವೆಸ್ಟ್‌​ಇಂಡೀಸ್‌, ಒಂದು ಪಂದ್ಯ ಬಾಕಿ ಇರು​ವಂತೆಯೇ ಸರಣಿ ವ​ಶ​ಪ​ಡಿ​ಸಿ​ಕೊಂಡಿದೆ. ಶಾರ್ಜಾ​ದಲ್ಲಿ ನಡೆದ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ ಬ್ರೆಂಡಾನ್‌ ಕಿಂಗ್‌​(64), ಜಾನ್ಸನ್‌ ಚಾರ್ಲ್ಸ್(63) ಹೋರಾ​ಟ​ದಿಂದಾಗಿ 49.5 ಓವ​ರ್‌​ಗ​ಳಲ್ಲಿ 306 ರನ್‌ಗೆ ಆಲೌ​ಟಾ​ಯಿತು. ಯುಎಇ 7 ವಿಕೆ​ಟ್‌ಗೆ 228 ರನ್‌ ಗಳಿಸಿ ಸೋಲೊ​ಪ್ಪಿ​ಕೊಂಡಿತು.

Follow Us:
Download App:
  • android
  • ios