ಅಬೂಟಾಬಾದ್‌ನಲ್ಲಿ ಗನ್ ಹಿಡ್ಕೊಂಡು ಪಾಕಿಸ್ತಾನ ಕ್ರಿಕೆಟ್ ತಂಡದ ತರಬೇತಿ, ವಿಶ್ವ ಕ್ರಿಕೆಟ್‌ಗೆ ಅಚ್ಚರಿ!
ಪಾಕಿಸ್ತಾನದ ಕ್ರಿಕೆಟ್ ತಂಡದ ಆಟಗಾರರು ಅಬೂಟಾಬಾದ್‌ನಲ್ಲಿ ಪಡೆದುಕೊಳ್ಳುತ್ತಿರುವ ತರಬೇತಿಯ ಬಗ್ಗೆ ವಿಶ್ವ ಕ್ರಿಕೆಟ್ ಅಚ್ಚರಿ ವ್ಯಕ್ತಪಡಿಸಿದೆ. ಈ ರೀತಿಯ ಟ್ರೇನಿಂಗ್ ತಂಡಕ್ಕೆ ಯಾವ ರೀತಿಯಲ್ಲಿ ಸಹಾಯ ಮಾಡಲಿದೆ ಎಂದೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಏ.6): ಅಬೂಟಾಬಾದ್ ಎನ್ನುವ ಹೆಸರು ಕೇಳಿದ ತಕ್ಷಣ ಬಿನ್ ಲಾಡೆನ್ ನೆನಪಾಗುತ್ತಾನೆ. ಯಾಕೆಂದರೆ, ಅಮೆರಿಕದ ಸೀಲ್ ಪಡೆಗಳು ಇದೇ ಸ್ಥಳದಲ್ಲಿ ಅಡಗಿದ್ದ ಬಿನ್ ಲಾಡೆನ್‌ನಲ್ಲಿ ನಟ್ಟನಡುರಾತ್ರಿಯಲ್ಲಿ ಕೊಂದು ಹಾಕಿದ್ದರು. ಈಗ ಅಬೂಟಾಬಾದ್ ಮತ್ತೊಂದು ವಿಚಾರಕ್ಕೆ ಹೈಲೈಟ್ ಆಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ವಿಶೇಷ ಅಭ್ಯಾಸವನ್ನು ಇಲ್ಲಿ ನಡೆಸುತ್ತಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ತಂಡದ ಅಭ್ಯಾಸ ಅವಧಿಯ ಚಿತ್ರಗಳು ವಿಶ್ವ ಕ್ರಿಕೆಟ್‌ಗೆ ಮಾತ್ರವಲ್ಲ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೂ ಅಚ್ಚರಿಗೆ ಕಾರಣವಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಟ್ರೇನಿಂಗ್ ಸಾಮಾನ್ಯ ರೀತಿಯದ್ದಲ್ಲ. ಅಸಾಮಾನ್ಯ ತರಬೇತಿ ಪಡ್ಡತಿಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಮಾಡುತ್ತಿದ್ದಾರೆ. ಪಾಕ್ ತಂಡದ ಕ್ರಿಕೆಟಿಗರು ಗನ್‌ಗಳನ್ನು ಬಳಸಿಕೊಂಡು ಶೂಟಿಂಗ್ ಅಭ್ಯಾಸ ಮಾಡಿದ್ದಾರೆ. ಅದರೊಂದಿಗೆ ಹಗ್ಗಜಗ್ಗಾಟ, ಕಲ್ಲುಗಳನ್ನು ಹಿಡಿದುಕೊಂಡು ರನ್ನಿಂಗ್ ಮಾಡಿ ಅಭ್ಯಾಸ ಮಾಡುತ್ತಿದ್ದಾರೆ. ಈ ಗುಡ್ಡಗಾಡು ಶೈಲಿಯ ಟ್ರೇನಿಂಗ್ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹೇಗೆ ಲಾಭವಾಗಲಿದೆ ಎನ್ನುವ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಇದು ಪಾಕ್ ತಂಡಕ್ಕೆ ಯಾವ ರೀತಿಯಲ್ಲಿ ಈ ರೀತಿಯ ತರಬೇತಿ ಸಹಾಯ ಮಾಡಲಿದೆ ಎನ್ನುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಮೌನವಾಗಿದೆ. ಅದಲ್ಲದೆ, ತಂಡ ತರಬೇತಿ ಸಂಪೂರ್ಣವಾಗಿ ರಹಸ್ಯವಾಗಿರಬೇಕು ಎಂದು ಪಿಸಿಬಿ ಬಯಸಿದೆ. ಇದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಅದರಲ್ಲೂ ಗನ್ ಫೈರಿಂಗ್ ತರಬೇತಿ ನೀಡುತ್ತಿರುವುದೇ ಕುತೂಹಲಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಮಾಧ್ಯಮಗಳು ಕೂಡ ಗನ್ ಫೈರಿಂಗ್‌ನ ತರಬೇತಿ ಕ್ರಿಕೆಟ್‌ನ ಕೌಶಲವನ್ನು ಅಭಿವೃದ್ಧಿಪಡಿಸಲು ಹೇಗೆ ನೆರವಾಗುತ್ತದೆ ಎಂದೇ ಗೊಂದಲದಲ್ಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೋಗಳಲ್ಲಿ ಪಾಕಿಸ್ತಾನದ ಆಟಗಾರನೊಬ್ಬ ಸೇನಾ ಸಿಬ್ಬಂದಿಯಿಂದ ಸ್ನೈಪರ್ ಶೂಟಿಂಗ್ ಪಾಠಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೂ ಕೆಲವು ಕ್ರಿಕೆಟಿಗರು ತಮ್ಮ ಬೆನ್ನಿನ ಮೇಲೆ ಮತ್ತೊಬ್ಬರನ್ನು ಇರಿಸಿಕೊಂಡು ಓಡುತ್ತಿರುವುದು ದಾಖಲಾಗಿದೆ.
ಸನ್‌ರೈಸರ್ಸ್ ತಂಡದ ಗೆಲುವಿನ ಬಳಿಕ ಒಡತಿ ಕಾವ್ಯಾ ಮಾರನ್ ಜೊತೆ ಪೋಸ್ ನೀಡಿದ ಹುಡುಗಿ ಯಾರು?
ಇನ್ನು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಗೊಂದಲಗಳು ಅಷ್ಟು ಬೇಗ ಮುಗಿಯೋದೇ ಇಲ್ಲ. ಕೇವಲ ಒಂದೇ ಪಂದ್ಯದ ಬಳಿಕ ಶಾಹಿನ್ ಅಫ್ರಿಧಿಯನ್ನು ಪಾಕಿಸ್ತಾನದ ಟಿ20 ತಂಡದ ನಾಯಕ ಸ್ಥಾನದಿಂದ ವಜಾ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಬಾಬರ್ ಅಜಮ್ ಅವರನ್ನೇ ನೇಮಿಸಲಾಗಿದೆ. ಲವು ಮಾಜಿ ಕ್ರಿಕೆಟಿಗರು ನಾಯಕ ಸ್ಥಾನವನ್ನು ನಿರ್ವಹಿಸಿದ ರೀತಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಸಾಕಷ್ಟು ಟೀಕಿಸಿದ್ದಾರೆ.
RR Vs RCB ಪಂದ್ಯದಲ್ಲಿ ಸಿಡಿಯುವ ಪ್ರತಿ ಸಿಕ್ಸ್‌ಗೆ ಪಿಂಕ್ ಪ್ರಾಮಿಸ್, ಮೋದಿ ಕನಸಿಗೆ ರಾಜಸ್ಥಾನ ಫ್ರಾಂಚೈಸಿ ಸಾಥ್!