ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಒಡತಿ ಕಾವ್ಯಾ ಮಾರನ್‌ ಸಖತ್‌ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಶುಕ್ರವಾರ ದಾಖಲಾದ ಸಖತ್‌ ಗೆಲುವು. ಅದರೆ, ಗೆಲುವಿನ ಬಳಿಕ ಕಾವ್ಯಾ ಮಾರನ್‌ ಜೊತೆ ಫೋಟೋಗೆ ನಿಂತ ಹುಡುಗಿಯ ಬಗ್ಗೆ ಕುತೂಹಲ ಆರಂಭವಾಗಿದೆ. 

ಬೆಂಗಳೂರು (ಏ. 6): ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಗೆಲುವಿನ ಹಾದಿಗೆ ಮರಳಿದೆ. ಶುಕ್ರವಾರ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ತಂಡ ಅದ್ಭುತ ಗೆಲುವು ಕಂಡಿದೆ. ತವರಿನ ಮೈದಾನದಲ್ಲಿ ನಡೆದ ಸತತ 2ನೇ ಪಂದ್ಯದಲ್ಲಿ ಗೆಲುವು ಕಾಣುವ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ಸಾಮರ್ಥ್ಯ ತೋರಿದೆ. ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಸೋಲಿನೊಂದಿಗೆ ಅಭಿಯಾನ ಆರಂಭ ಮಾಡಿತ್ತು. ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಸನ್‌ರೈಸರ್ಸ್‌ ತಂಡ 4 ರನ್‌ಗಳಿಂದ ಸೋಲು ಕಂಡಿದ್ದರೆ, ಮುಂಬೈ ಇಂಡಿಯನ್ಸ್‌ ವಿರುದ್ಧ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ 31 ರನ್‌ ಗೆಲುವು ಕಂಡಿತ್ತು. ಬಳಿಕ ಗುಜರಾತ್‌ ವಿರುದ್ಧ ಅಹಮದಾಬಾದ್‌ನಲ್ಲಿ ತಂಡ ಸೋಲು ಕಂಡಿತ್ತು. ಈಗ ಚೆನ್ನೈ ತಂಡವನ್ನು ಮಣಿಸುವ ಮೂಲಕ ತಂಡ ಗೆಲುವು ಟ್ರ್ಯಾಕ್‌ಗೆ ಬಂದಿದ್ದಕ್ಕೆ ಒಡತಿ ಕಾವ್ಯಾ ಮಾರನ್‌ ಸಖತ್‌ ಖುಷಿಯಲ್ಲಿದ್ದಾರೆ. ಅವರ ಸಂಭ್ರಮದ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದ ವೇಳೆ ಕಾವ್ಯಾ ಮಾರನ್‌ ಅವರ ಮೇಲೆ ಕ್ಯಾಮೆರಾ ನೆಟ್ಟಿರುತ್ತದೆ. ಅದಕ್ಕೆ ಕಾರಣ ಅವರ ಸೌಂದರ್ಯ. ತಮ್ಮ ರೂಪದಿಂದಲೂ ಗಮನಸೆಳೆದಿರುವ ಕಾವ್ಯಾ ಮಾರನ್‌ ಅವರ ಸಾಕಷ್ಟು ಚಿತ್ರಗಳು ವೈರಲ್‌ ಆಗಿವೆ.

ಚೆನ್ನೈ ವಿರುದ್ಧ ತಂಡದ ಗೆಲುವನ್ನು ಕಾವ್ಯಾ ಮಾರನ್‌ ಸೋಶಿಯಲ್ ಮೀಡಿಯಾದಲ್ಲೂ ಸಂಭ್ರಮದಿಂದ ಹಂಚಿಕೊಂಡಿದ್ದಾರೆ. 'ಯೆಸ್‌.. ವಿ ವನ್‌.. ವಾವ್‌..' ಎಂದು ಅವರು ಬರೆದುಕೊಂಡಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿಆರಂಭಿಕ ಆಟಗಾರ ಅಭಿಷೇಕ್‌ ವರ್ಮ ಅವರ ಬ್ಯಾಟಿಂಗ್‌ಗೂ ಕಾವ್ಯಾ ಮಾರನ್‌ ಖುಷಿಯಾಗಿದ್ದಾರೆ.

23 ವರ್ಷದ ಬ್ಯಾಟ್ಸ್‌ಮನ್‌ ಕೇವಲ 12 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ ಮೂಲಕ 37 ರನ್‌ ಸಿಡಿಸಿ ಮಿಂಚಿದ್ದರು. ಇದಕ್ಕಾಗಿ ಅವರು ಪಂದ್ಯಶ್ರೇಷ್ಠ ಆಟಗಾರ ಎನಿಸಿಕೊಂಡರು. ಪಂದ್ಯದ ಬಳಿಕ ಅಭಿಷೇಕ್‌ ಶರ್ಮ ತಮ್ಮ ತಾಯಿ ಹಾಗೂ ಸಹೋದರಿಯೊಂದಿಗೆ ಚಿತ್ರಕ್ಕೆ ಪೋಸ್‌ ನೀಡಿದರು.

SA20 League: ಸತತ ಎರಡನೇ ಬಾರಿಗೆ ಕಪ್‌ ಗೆದ್ದ ಸನ್‌ರೈಸರ್ಸ್‌..! ಖುಷಿಯಲ್ಲಿ ಸಂಭ್ರಮಿಸಿದ ಕಾವ್ಯ ಮಾರನ್

ಕಾವ್ಯಾ ಮಾರನ್‌ ಜೊತೆ ಇರುವ ಹುಡುಗಿ ಯಾರು?
ಪಂದ್ಯದ ಬಳಿಕ ಕಾವ್ಯಾ ಮಾರನ್‌ ಜೊತೆ ಒಬ್ಬಳು ಹುಡುಗಿ ಪೋಸ್‌ ನೀಡಿರುವ ಚಿತ್ರ ವೈರಲ್‌ ಆಗಿದೆ. ಈ ಹುಡುಗಿ ಯಾರು ಎನ್ನುವ ಕುತೂಹಲ ಆರಂಭವಾಗಿದೆ. ಕಾವ್ಯಾ ಮಾರನ್‌ ಜೊತೆ ಫೋಟೋಗೆ ಪೋಸ್‌ ನೀಡಿರುವ ಹುಡುಗಿ ಅಭಿಷೇಕ್‌ ಶರ್ಮ ಅವರ ಸಹೋದರಿ ಕೋಮಲ್‌ ಶರ್ಮ. ಪಂಜಾಬ್‌ ಆಟಗಾರನಾಗಿರುವ ಅಭಿಷೇಕ್‌ ಶರ್ಮಗೆ ಇಬ್ಬರು ಸಹೋದರಿಯರಿದ್ದಾರೆ. ಕೋಮಲ್‌ ಶರ್ಮ ಹಾಗೂ ಸೋನಿಯಾ ಶರ್ಮ. ಅಭಿಷೇಕ್‌ ಶರ್ಮ ಅವರ ತಾಯಿಯ ಹೆಸರು ಮಂಜು ಶರ್ಮ, ಇನ್ನು ತಂದೆ ರಾಜ್‌ ಕುಮಾರ್‌ ಶರ್ಮ ಮಾಜಿ ಕ್ರಿಕಟಿಗ. ಅಪ್ಪನ ಸ್ಫೂರ್ತಿಯಿಂದಲೇ ಅವರು ಕ್ರಿಕೆಟ್‌ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದರು.

ಮೊದಲ ಗೆಲುವು ಕಂಡ ಸನ್‌ರೈಸರ್ಸ್‌: 'ಹೋಗಲ್ಲೇ ಆ ಕಡೆ', ಕ್ಯಾಮರಾಮೆನ್ ಮೇಲೆ ಕಿಡಿ ಕಾರಿದ ಕಾವ್ಯ ಮಾರನ್..!