Asianet Suvarna News Asianet Suvarna News

2ನೇ ಟೆಸ್ಟ್‌: ವಿಂಡೀಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನ

* ವಿಂಡೀಸ್ ಎದುರು ಎರಡನೇ ಟೆಸ್ಟ್ ಪಂದ್ಯ ಗೆದ್ದ ಪಾಕಿಸ್ತಾನ

* ಎರಡನೇ ಟೆಸ್ಟ್‌ನಲ್ಲಿ ಪಾಕಿಸ್ತಾನಕ್ಕೆ 109 ರನ್‌ಗಳ ಜಯ

* 2 ಪಂದ್ಯಗಳ ಟೆಸ್ಟ್‌ ಸರಣಿಯು 1-1ರಲ್ಲಿ ಸಮ

Pakistan Cricket Team Thrashes West Indies by 109 runs in Jamaica Test kvn
Author
Jamaica, First Published Aug 25, 2021, 12:41 PM IST

ಜಮೈಕಾ(ಆ.25): ವೇಗಿ ಶಾಹಿನ್ ಅಫ್ರಿದಿ ಮಾರಕ ಬೌಲಿಂಗ್‌ ನೆರವಿನಿಂದ ವೆಸ್ಟ್‌ ಇಂಡಿಸ್ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವು 109 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯು 1-1 ಅಂತರದಲ್ಲಿ ಸಮಗೊಂಡು ಮುಕ್ತಾಯವಾಗಿದೆ. 

ಎರಡನೇ ಟೆಸ್ಟ್‌ ಪಂದ್ಯಗಳನ್ನು ಗೆಲ್ಲಲು 339 ರನ್‌ಗಳ ಗುರಿ ಪಡೆದಿದ್ದ ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 49 ರನ್‌ ಗಳಿಸಿತ್ತು. ಇದರೊಂದಿಗೆ ಕೊನೆಯ ದಿನ ಕೆರಿಬಿಯನ್ನರು ಪಂದ್ಯ ಗೆಲ್ಲಲು 280 ರನ್‌ಗಳ ಅಗತ್ಯವಿತ್ತು. ಆದರೆ ವೆಸ್ಟ್ ಇಂಡೀಸ್‌ ಕೇವಲ 219 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸರಣಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.

ಮೊದಲ ಇನಿಂಗ್ಸ್‌ನಲ್ಲಿ ಮೊನಚಾದ ದಾಳಿ ನಡೆಸುವ ಮೂಲಕ 6 ವಿಕೆಟ್ ಕಬಳಿಸಿದ್ದ ವೇಗಿ ಶಾಹಿನ್ ಅಫ್ರಿದಿ, ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆಯುವುದರೊಂದಿಗೆ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಒಟ್ಟಾರೆ 94 ರನ್‌ ನೀಡಿ 10 ವಿಕೆಟ್ ಪಡೆಯುವ ಮೂಲಕ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು. ಇನ್ನು ನೂಮನ್ ಅಲಿ 3 ಹಾಗೂ ಹಸನ್ ಅಲಿ 2 ವಿಕೆಟ್ ಕಬಳಿಸುವ ಮೂಲಕ ವಿಂಡೀಸ್ ಪತನಕ್ಕೆ ಕಾರಣರಾದರು.

ಕುತೂಹಲಘಟ್ಟದಲ್ಲಿ ಪಾಕ್‌-ವಿಂಡೀಸ್‌ 2ನೇ ಟೆಸ್ಟ್‌ ಪಂದ್ಯ..!

ಮೊದಲ ಟೆಸ್ಟ್‌ ಪಂದ್ಯವನ್ನು ವೆಸ್ಟ್ ಇಂಡಿಸ್‌ ಒಂದು ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿ 1-0 ಮುನ್ನಡೆ ಸಾಧಿಸಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ಗೆಲ್ಲುವ ಮೂಲಕ 1-1ರ ಸಮಬಲ ಸಾಧಿಸಿತು. ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ 12 ಅಂಕಗಳೊಂದಿಗೆ ವೆಸ್ಟ್‌ ಇಂಡೀಸ್‌ ಜತೆ ಜಂಟಿ ಎರಡನೇ ಸ್ಥಾನಕ್ಕೇರಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.
 

Follow Us:
Download App:
  • android
  • ios