Asianet Suvarna News Asianet Suvarna News

ಕುತೂಹಲಘಟ್ಟದಲ್ಲಿ ಪಾಕ್‌-ವಿಂಡೀಸ್‌ 2ನೇ ಟೆಸ್ಟ್‌ ಪಂದ್ಯ..!

* ರೋಚಕಘಟ್ಟಕ್ಕೆ ತಲುಪಿದ ಪಾಕಿಸ್ತಾನ-ವಿಂಡೀಸ್ ನಡುವಿನ ಎರಡನೇ ಟೆಸ್ಟ್‌ ಪಂದ್ಯ

* ಕೊನೆಯ ದಿನ ಟೆಸ್ಟ್‌ ಗೆಲ್ಲಲು ವಿಂಡೀಸ್‌ಗೆ ಬೇಕಿದೆ 280 ರನ್‌ಗಳ ಗುರಿ

* ಟೆಸ್ಟ್‌ ಸರಣಿ ಸಮಗೊಳಿಸಲು ಪಾಕ್‌ ತಂಡಕ್ಕೆ ಬೇಕಿದೆ 9 ವಿಕೆಟ್

Pak vs WI 2nd Test West Indies Need 280 runs against Pakistan in Final Day kvn
Author
Jamaica, First Published Aug 24, 2021, 1:37 PM IST

ಜಮೈಕಾ(ಆ.24): ಪಾಕ್‌ ವೇಗಿ ಶಾಹಿನ್ ಅಫ್ರಿದಿ ಮಾರಕ ಬೌಲಿಂಗ್‌ ನೆರವಿನಿಂದ ವೆಸ್ಟ್ ಇಂಡೀಸ್‌ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ಕೊಂಚ ಮೇಲುಗೈ ಸಾಧಿಸಿದ್ದು, ಅಂತಿಮ ದಿನದಾಟ ಸಾಕಷ್ಟು ಕುತೂಹಲಘಟ್ಟ ತಲುಪಿದೆ. 

ಸಬೀನಾ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶಾಹಿನ್ ಅಫ್ರಿದಿ 51 ರನ್‌ ನೀಡಿ 6 ವಿಕೆಟ್ ಕಬಳಿಸುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರುವುದರೊಂದಿಗೆ ಆತಿಥೇಯ ವೆಸ್ಟ್‌ ಇಂಡೀಸ್ ತಂಡವನ್ನು 150 ರನ್‌ಗಳಿಗೆ ಆಲೌಟ್‌ ಮಾಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪಾಕಿಸ್ತಾನ ತಂಡವು 152 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು. ಬಳಿಕ ಎರಡನೇ ಇನಿಂಗ್ಸ್‌ ಆರಂಭಿಸಿದ ಪಾಕಿಸ್ತಾನ ತಂಡವು ಚುರುಕಾಗಿ 176/6 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ವೆಸ್ಟ್ ಇಂಡೀಸ್ ಗೆಲ್ಲಲು ಬರೋಬ್ಬರಿ 339 ರನ್‌ಗಳ ಗುರಿ ನೀಡಿತು.

Pak vs WI ಫವಾದ್ ಮತ್ತೊಂದು ಶತಕ, ಪಾಕ್‌ ಹಿಡಿತದಲ್ಲಿ ವಿಂಡೀಸ್‌

ಇನ್ನು ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 49 ರನ್‌ ಬಾರಿಸಿದ್ದು, ಇನ್ನೂ ಗೆಲ್ಲಲು 280 ರನ್‌ ಗಳಿಸಬೇಕಿದೆ. ಇನ್ನು ಪಾಕಿಸ್ತಾನ ಗೆಲ್ಲಲು ಕೊನೆಯ ದಿನದಲ್ಲಿ 9 ವಿಕೆಟ್ ಕಬಳಿಸಬೇಕಿದೆ.

ವೆಸ್ಟ್‌ ಇಂಡೀಸ್ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ವಿಂಡೀಸ್ ತಂಡವು 1 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್‌ ಪಂದ್ಯವು ಯಾವ ತಂಡದ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
 

Follow Us:
Download App:
  • android
  • ios