Asianet Suvarna News Asianet Suvarna News

Asia Cup T20: ಭಾರತದ ಸೋಲಿನ ನಂತರ ಪಾಕ್‌ನಿಂದ ಸಿಖ್ಖರನ್ನು ಕೆರಳಿಸುವ ಪ್ರಯತ್ನ..!

ಭಾನುವಾರ ನಡೆದ ಏಷ್ಯಾ ಕಪ್‌ ಸೂಪರ್ 4 ಪಂದ್ಯದಲ್ಲಿ ಭಾರತ ಪಾಕ್‌ ವಿರುದ್ಧ ಸೋಲನುಭವಿಸಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಹಲವು ಪಾಕಿಸ್ತಾನಿಖಾತೆಗಳು ಅರ್ಶ್‌ದೀಪ್‌ ಸಿಂಗ್ ಅವರನ್ನು ಖಲಿಸ್ತಾನಿ ಎಂದು ಬಿಂಬಿಸಿವೆ. 

pakistan beats india in asia cup t20 pak running propaganda and fake news that people of india hate sikhs ash
Author
First Published Sep 5, 2022, 8:23 AM IST

ಭಾನುವಾರ ರಾತ್ರಿ ನಡೆದ ಏಷ್ಯಾಕಪ್‌ನ ಸೂಪರ್-4 ಪಂದ್ಯದಲ್ಲಿ (Asia Cup Super - 4 Match) ಪಾಕಿಸ್ತಾನ (Pakistan) ತಂಡವು ಟೀಂ ಇಂಡಿಯಾವನ್ನು (India) ಸೋಲಿಸಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಜನರು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಯಾವಾಗಲೂ ಹಾಳುಮಾಡಲು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸುಳ್ಳು ಪ್ರಚಾರ ಮತ್ತು ದ್ವೇಷದ ಸುದ್ದಿಗಳನ್ನು ನಡೆಸುತ್ತಾ ಸಕ್ರಿಯರಾಗಿದ್ದಾರೆ.  ಅನೇಕ ಪಾಕಿಸ್ತಾನಿ ಟ್ವಿಟ್ಟರ್‌ ಖಾತೆಗಳು ಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ನಡೆಸುವ ಮೂಲಕ ಕ್ರಿಕೆಟ್‌ನಲ್ಲೂ ಹಗೆತನ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಅಂತಹ ಕೆಲವು ಟ್ವೀಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನ್ಶುಲ್‌ ಸಕ್ಸೇನಾ (@AskAnshul) ಹಂಚಿಕೊಂಡಿದ್ದಾರೆ. ಭಾರತದ ಪರವಾಗಿ, ವಿದೇಶಾಂಗ ವ್ಯವಹಾರಗಳ ಸುದ್ದಿ ಹಾಗೂ ಅನೇಕ ಫೇಕ್‌ ಸುದ್ದಿಗಳನ್ನು ಅವರು ಪತ್ತೆ ಹಚ್ಚುತ್ತಾರೆ. 

 ಪಾಕಿಸ್ತಾನದ ಟ್ವಿಟ್ಟರ್ ಖಾತೆಯಿಂದ ಹೇಗೆ ಸುಳ್ಳು ಪ್ರಚಾರ ನಡೆಯುತ್ತಿದೆ ನೋಡಿ..
ಕೆಲವು ನಕಲಿ ಪಾಕಿಸ್ತಾನಿ ಖಾತೆಗಳ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಅನ್ಶುಲ್‌, "ಏಷ್ಯಾ ಕಪ್ 2022 ರ ಭಾರತ vs ಪಾಕಿಸ್ತಾನದ 2 ನೇ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಆಟಗಾರ ಅರ್ಶದೀಪ್‌ ಕ್ಯಾಚ್ ಅನ್ನು ಕೈಬಿಟ್ಟರು. ಮತ್ತು ಈಗ ಪಾಕಿಸ್ತಾನದ ಖಾತೆಗಳು ಖಲಿಸ್ತಾನ್ ಪ್ರಚಾರವನ್ನು ನಡೆಸುತ್ತಿವೆ ಮತ್ತು ಅರ್ಶ್‌ದೀಪ್ ಅವರನ್ನು ಖಲಿಸ್ತಾನಿ ಎಂದು ಕರೆಯುತ್ತಿವೆ.
ಭಾರತೀಯ ಮಾಧ್ಯಮ ಚಾನೆಲ್ ಅರ್ಶ್‌ದೀಪ್ ಸಿಂಗ್ ಅವರನ್ನು ಖಲಿಸ್ತಾನಿ ಎಂದು ಕರೆಯುತ್ತಿದೆ ಎಂದು ಪಾಕಿಸ್ತಾನದ ಖಾತೆಗಳು ಪ್ರಚಾರ ಮತ್ತು ಸುಳ್ಳು ಸುದ್ದಿಗಳನ್ನು ನಡೆಸುತ್ತಿವೆ. ಭಾರತದ ಜನರು ಸಿಖ್ಖರನ್ನು ದ್ವೇಷಿಸುತ್ತಾರೆ ಎಂದು ಅವರು ಪ್ರಚಾರ ಮಾಡುತ್ತಿದ್ದಾರೆ’’ ಎಂದು ಟ್ವೀಟ್‌ ಮಾಡಿದ್ದಾರೆ. 

Asia Cup 2022 ರಿಜ್ವಾನ್‌ ಅರ್ಧಶತಕದ ಆಟ, ಪಾಕಿಸ್ತಾನಕ್ಕೆ ಗೆಲುವು

ಹಲವು ಟ್ವಿಟ್ಟರ್‌ ಖಾತೆಯ ಸ್ಕ್ರೀನ್ ಶಾಟ್‌ಗಳನ್ನು ಅನ್ಶುಲ್ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಏನು ಬರೆಯಲಾಗಿದೆ ಎಂಬುದನ್ನು ನೋಡಿ - ‘’ಭಾರತವು ಪಾಕಿಸ್ತಾನದ ವಿರುದ್ಧ ಸೋತ ನಂತರ ನ್ಯೂಸ್‌ನ ಭಾರತೀಯ ಟಿವಿ ನಿರೂಪಕ ಅರ್ಶ್‌ದೀಪ್‌ ಸಿಂಗ್ ಖಲಿಸ್ತಾನಿ ಎಂದು ಕರೆದರು. ಈ ದ್ವೇಷಿಗಳು ತಮ್ಮೊಳಗೆ ಎಷ್ಟು ವಿಷವನ್ನು ತುಂಬಿಕೊಂಡಿದ್ದಾರೆಂದು ಊಹಿಸಲು ಸಾಧ್ಯವಿಲ್ಲವೇ?’’ ಇದೇ ಟ್ವೀಟ್ ಅನ್ನು ಹಲವು ಟ್ವಿಟ್ಟರ್‌ ಖಾತೆಗಳು ಹಂಚಿಕೊಂಡಿದ್ದು, ವಿವಾದಿತೆ ಪತ್ರಕರ್ತೆ ರಾಣಾ ಆಯೂಬ್ ಅವರನ್ನೂ ಟ್ವೀಟ್‌ನಲ್ಲಿ ಟ್ಯಾಗ್ ಮಾಡಲಾಗಿದೆ. ಫೆಡರಲ್ ಪಬ್ಲಿಕ್ ಸರ್ವಿಸ್ ಕಮಿಷನ್ (@FPSC_Islamabad), M ಹಸನ್ ಸಿಯಾಲ್ (@IMHassansial) ನಂತಹ ಅನೇಕ ಖಾತೆಗಳಿಂದ ಇವುಗಳನ್ನು ಶೇರ್‌ ಮಾಡಲಾಗಿದೆ. 

ಅರ್ಶ್‌ದೀಪ್‌ ಸಿಂಗ್ ವಿರುದ್ಧ ನಕಲಿ ಖಾತೆಗಳಿಂದ ಪ್ರಚಾರವೇಕೆ..?
ಏಷ್ಯಾಕಪ್‌ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. ಟೀಂ ಇಂಡಿಯಾ ಪಾಕಿಸ್ತಾನಕ್ಕೆ 182 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್‌ ಅನ್ನು ಪಾಕಿಸ್ತಾನ ಕೊನೆಯ ಓವರ್‌ನಲ್ಲಿ ಪೂರ್ಣಗೊಳಿಸಿತು. ಅಂತಿಮ 2 ಓವರ್‌ಗಳಲ್ಲಿ ಪಾಕಿಸ್ತಾನದ ಗೆಲುವಿಗೆ 26 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಭಾರತದ ಪರ ಬೌಲಿಂಗ್‌ ಮಾಡಿದರು.ಅವರು 19 ರನ್ ನೀಡಿದ್ದರು. ಇದಕ್ಕೂ ಮುನ್ನ ಆಸಿಫ್ ಅಲಿ 18ನೇ ಓವರ್‌ನ 3ನೇ ಎಸೆತದಲ್ಲಿ ಅರ್ಷದೀಪ್ ಕ್ಯಾಚ್ ಕೈಚೆಲ್ಲಿದರು. ಆಗಿನಿಂದ ಅರ್ಶ್‌ದೀಪ್‌ ಸಿಂಗ್ ಅವರನ್ನು ವಿಲನ್ ಆಗಿ ಹಲವರು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. 

ASIA CUP 2022: ವಿರಾಟ್‌ ಸೂಪರ್‌ ಹಾಫ್‌ ಸೆಂಚುರಿ, 181 ರನ್‌ ಪೇರಿಸಿದ ಭಾರತ

ಈ ಹಿಂದೆ ಮೊಹಮ್ಮದ್ ಶಮಿ ಅವರನ್ನು ನಿಂದಿಸಲಾಗಿತ್ತು..
ಕ್ರೀಡೆಯ ನೆಪದಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಬಂಧವನ್ನು ಹಾಳು ಮಾಡಲು ಆಗಾಗ್ಗೆ ಇಂತಹ ನೀಚ ಕೃತ್ಯಗಳನ್ನು ಮಾಡುತ್ತಿದ್ದಾರೆ. 10 ತಿಂಗಳ ಹಿಂದೆ, ಟಿ20 ವಿಶ್ವಕಪ್ ಪಂದ್ಯದ ವೇಳೆ, ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಇದೇ ರೀತಿಯ ಕಳಪೆ ಪಿತೂರಿ ನಡೆದಿತ್ತು.. ಆಗಲೂ ಭಾರತದ ಸೋಲಿನ ನಂತರ ಮುಹಮ್ಮದ್ ಶಮಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದರು. ಈ ನಕಲಿ ಖಾತೆಗಳನ್ನು ಭಾರತೀಯ ಬಳಕೆದಾರರ ಹೆಸರಿನಲ್ಲಿ ಪಾಕಿಸ್ತಾನಿ ಬಳಕೆದಾರರು ಟ್ವೀಟ್‌ಗಳನ್ನು ಮಾಡಿದ್ದರು .

Follow Us:
Download App:
  • android
  • ios