Asianet Suvarna News Asianet Suvarna News

Asia Cup 2022: ವಿರಾಟ್‌ ಸೂಪರ್‌ ಹಾಫ್‌ ಸೆಂಚುರಿ, 181 ರನ್‌ ಪೇರಿಸಿದ ಭಾರತ

ಸರಿಯಾದ ಸಮಯದಲ್ಲಿ ಫಾರ್ಮ್‌ಗೆ ಬಂದಂತೆ ಕಾಣುತ್ತಿರುವ ಕಿಂಗ್‌ ಕೊಹ್ಲಿ, ಏಷ್ಯಾಕಪ್‌ನಲ್ಲಿ ಸತತ 2ನೇ ಅರ್ಧಶತಕ ಬಾರಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಕಿಂಗ್‌ ಕೊಹ್ಲಿ, ಸಿಕ್ಸರ್‌ನೊಂದಿಗೆ ತಮ್ಮ ಅರ್ಧಶತಕವನ್ನು ಪೂರೈಸಿದ್ದಾರೆ.

Asia Cup 2022 India vs Pakistan Super Four Match Virat Kohli Hits back to back fifties san
Author
First Published Sep 4, 2022, 9:16 PM IST

ದುಬೈ (ಸೆ. 4): ಕಿಂಗ್‌ ಕೊಹ್ಲಿ ಏಷ್ಯಾಕಪ್‌ ಟೂರ್ನಿಯಲ್ಲಿ ಬಾರಿಸಿದ ಸತತ 2ನೇ ಅರ್ಧಶತಕದ ನೆರವಿನಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಕ್ಕೆ 182  ರನ್‌ಗಳ ಕಠಿಣ ಗುರಿಯನ್ನು ನೀಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಮೊದಲ ವಿಕೆಟ್‌ಗೆ ರೋಹಿತ್‌ ಶರ್ಮ ಹಾಗೂ ಕೆಎಲ್‌ ರಾಹುಲ್‌ ಭರ್ಜರಿ ಆರಂಭ ನೀಡುವ ಮೂಲಕ ಪವರ್‌ ಪ್ಲೇಯಲ್ಲಿ 62 ರನ್‌ ಚಚ್ಚಿದ್ದರು. ಆ ಬಳಿಕ ಪಾಕಿಸ್ತಾನದ ಸ್ಪಿನ್ನರ್‌ಗಳು ಕೆಲ ಪ್ರಮುಖ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಭಾರತದ ಬ್ಯಾಟಿಂಗ್‌ಗೆ ನಿಯಂತ್ರಣ ಹೇರಿದರಾದರೂ ಕೊನೇ ಹಂತದಲ್ಲಿ ವಿರಾಟ್‌ ಕೊಹ್ಲಿ ತಮ್ಮ ಬ್ಯಾಟಿಂಗ್‌ ವಿರಾಟ್‌ ದರ್ಶನವನ್ನು ಮಾಡುವ ಮೂಲಕ ಭಾರತದ ದೊಡ್ಡ ಮೊತ್ತಕ್ಕೆ ಕಾರಣರಾದರು. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಹೈವೋಲ್ಟೇಜ್‌ ಕದನಲ್ಲಿ ಟಾಸ್‌ ಗೆದ್ದ ಪಾಕ್‌ ತಂಡದ ನಾಯಕ ಬಾಬರ್‌ ಅಜಮ್‌ ಬೌಲಿಂಗ್ ಆಯ್ದುಕೊಂಡರು. ವಿರಾಟ್‌ ಕೊಹ್ಲಿ (60 ರನ್‌, 44 ಎಸೆತ, 4 ಬೌಂಡರಿ, 1 ಸಿಕ್ಸರ್‌) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 7 ವಿಕೆಟ್‌ಗೆ 181 ರನ್‌ ಕಲೆಹಾಕಲು ಯಶಸ್ವಿಯಾಗಿದೆ. ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಹಾಗೂ ಸೂರ್ಯಕುಮಾರ್‌ ಯಾದವ್‌ ಅಲ್ಪ ಮೊತ್ತಕ್ಕೆ ಔಟಾಗಿದ್ದು, ಭಾರತದ ದೊಡ್ಡ ಮೊತ್ತದ ಆಸೆಗೆ ಪೆಟ್ಟು ನೀಡಿತು.
 

ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ರೋಹಿತ್‌ ಶರ್ಮ (Rohit Sharma) ಸ್ಪೋಟಕ ಅರಂಭ ನೀಡಿದರು. ನಸೀಮ್‌ ಶಾ ಎಸೆದ ಓವರ್‌ನಲ್ಲಿ ಒಂದು ಬೌಂಡರಿ ಹಾಗೂ ಮಿಡ್‌ ವಿಕೆಟ್‌ನಲ್ಲಿ ಮನಮೋಹಕ ಸಿಕ್ಸರ್‌ ಸಿಡಿಸಿದ ರೋಹಿತ್‌ ಶರ್ಮ ಗಮನಸೆಳೆದರು. ಇದರಿಂದಾಗಿ ಮೊದಲ ಓವರ್‌ನಲ್ಲಿಯೇ ಭಾರತ 11 ರನ್‌ ಬಾರಿಸಿತು. ವೇಗದ ಬೌಲಿಂಗ್‌ ಹಾಗೂ ಬೌನ್ಸ್‌ಗೆ ಪಿಚ್‌ ನೆರವೀಯುತ್ತಿದ್ದರೂ ಭಾರತದ  ಬ್ಯಾಟಿಂಗ್‌ ಅಬ್ಬರಕ್ಕೆ ಇದು ಸವಾಲಾಗಲಿಲ್ಲ. ಬಳಿಕ ನಸೀಮ್‌ ಶಾ ಎಸೆದ ಇನ್ನಿಂಗ್ಸ್‌ನ 3ನೇ ಓವರ್‌ನಲ್ಲಿ ಎಲ್‌ ರಾಹುಲ್‌ ಎರಡು ಆಕರ್ಷಕ ಸಿಕ್ಸರ್‌ ಸಿಡಿಸಿದರು.ರಾಹುಲ್‌ ಬಾರಿಸಿದ ಸಿಕ್ಸರ್‌ ಐಪಿಎಲ್‌ನಲ್ಲಿ ಅವರ ಆಟವನ್ನು ನೆನಪಿಸುವಂತಿತ್ತು. ಮರು ಓವರ್‌ ಎಸೆಯಲು ಬಂದ ಹ್ಯಾರಿಸ್‌ ರೋಹಿತ್ ಶರ್ಮ 12 ರನ್‌ ಚಚ್ಚಿದರು. ಇದರಲ್ಲಿ ಒಂದು ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿತ್ತು. ಮೊಹಮದ್‌ ನವಾಜ್‌ ಎಸೆದ 5ನೇ ಓವರ್‌ನ 2ನೇ ಎಸೆತದಲ್ಲಿ ಕೆಎಲ್‌ ರಾಹುಲ್‌ (KL Rahul) ಬೌಂಡರಿ ಸಿಡಿಸಿದಾಗ ಭಾರತ 26 ಎಸೆತಗಳಲ್ಲಿ 50 ರನ್‌ಗಳ ಗಡಿ ಮುಟ್ಟಿತು. 16 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 28 ರನ್‌ ಬಾರಿಸಿ ಅಬ್ಬರಿಸಿದ ರೋಹಿತ್‌ ಶರ್ಮ 6ನೇ ಓವರ್‌ನ ವೇಳೆ ಔಟಾದರೂ ಪವರ್‌ ಪ್ಲೇ ಮುಕ್ತಾಯದ ವೇಳೆ ಟೀಮ್‌ ಇಂಡಿಯಾ 1 ವಿಕೆಟ್‌ಗೆ 62 ರನ್‌ಗಳ ದೊಡ್ಡ ಮೊತ್ತ ಪೇರಿಸಿತ್ತು.

MS Dhoni ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್‌..!

ಆದರೆ, ರೋಹಿತ್‌ ಶರ್ಮ ಔಟಾದ ಮರು ಓವರ್‌ನಲ್ಲಿಯೇ ಕೆಎಲ್‌ ರಾಹುಲ್‌ (28ರನ್‌, 20 ಎಸೆತ, 1 ಬೌಂಡರಿ, 2 ಸಿಕ್ಸರ್‌) ಶಾದಾಬ್‌ ಖಾನ್‌ಗೆ ವಿಕಟ್‌ ನೀಡಿದರು. ಆದರೆ, ಶಾದಾಬ್‌ನ ಇದೇ ಓವರ್‌ನಲ್ಲಿ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಒಂದೊಂದು ಬೌಂಡರಿ ಸಿಡಿಸಿದರು. ಹಾಗಿದ್ದರೂ, ಪಾಕಿಸ್ತಾನದ ಸ್ಪಿನ್ನರ್‌ಗಳ ಭಾರತದ ಬ್ಯಾಟಿಂಗ್‌ಅನ್ನು ಮಧ್ಯಮ ಓವರ್‌ಗಳಲ್ಲಿ ನಿಯತ್ರಿಸಲು ಯಶ ಕಂಡರು. ಶಾಬಾದ್‌ ಖಾನ್‌ ಹಾಗೂ ಮೊಹಮದ್‌ ನವಾಜ್‌, ಭಾರತದ ಪ್ರಮುಖ ವಿಕೆಟ್‌ಗಳನ್ನು ಉರುಳಿಸಿ ರನ್‌ ನಿಯಂತ್ರಿಸಿದರು. 10ನೇ ಓವರ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ ಸ್ಲಾಗ್‌ ಸ್ವೀಪ್‌ ಮಾಡುವ ಯತ್ನದಲ್ಲಿ ಡೀಪ್‌ ಬ್ಯಾಕ್ವರ್ಡ್‌ ಸ್ಕ್ವೇರ್‌ನಲ್ಲಿ ವಿಕೆಟ್ ನೀಡಿದಾಗ ಭಾರತ 10 ಓವರ್‌ಗಳ ಅಂತ್ಯಕ್ಕೆ ಭಾರತ 3 ವಿಕೆಟ್‌ಗೆ 93 ರನ್‌ ಬಾರಿಸಿತ್ತು.

Asia Cup 2022 India vs Pakistan Super Four Match Virat Kohli Hits back to back fifties san

ಅದು 'S' ನಿಂದ ಆರಂಭವಾಗುವ ನಾಲ್ಕಕ್ಷರದ ಪದ, ನಾನಿಲ್ಲಿ ಹೇಳಲು ಸಾಧ್ಯವಿಲ್ಲ: ದ್ರಾವಿಡ್‌ ಹೀಗಂದಿದ್ದೇಕೆ..?

ಸೂರ್ಯಕುಮಾರ್‌ (Surya Kumar Yadav) ನಿರ್ಗಮನದ ಬಳಿಕ ಭಾರತ (Team India) ಇನಷ್ಟು ಸಂಕಷ್ಟಕ್ಕೆ ಈಡಾಯಿತು. ಕೊಹ್ಲಿ ಹಾಗೂ ಪಂತ್‌ ಕೆಲ ಹೊತ್ತು ಕ್ರೀಸ್‌ನಲ್ಲಿದ್ದರೂ, ಸಾಕಷ್ಟು ರನ್‌ಗಳು ಬರಲಿಲ್ಲ. ಈ ನಡುವೆ ಮೊಹಮದ್‌ ನವಾಜ್‌, ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 25 ರನ್‌ಗಳನ್ನು ನೀಡಿದರು. 13ನೇ ಓವರ್‌ನಲ್ಲಿ ಕೊಹ್ಲಿ ಹಾಗೂ ಪಂತ್‌ 13 ರನ್‌ ಸಿಡಿಸುವ ಮೂಲಕ ಮೈಚಳಿ ಬಿಟ್ಟು ಆಡುವ ಪ್ರಯತ್ನ ಮಾಡಿದರಾದರೂ, ಮರು ಓವರ್‌ನಲ್ಲಿ ರಿವರ್ಸ್‌ ಸ್ವೀಪ್‌ ಮಾಡುವ ಯತ್ನದಲ್ಲಿ ರಿಷಭ್‌ ಪಂತ್‌ ಬ್ಯಾಕ್ವರ್ಡ್‌ ಪಾಯಿಂಟ್‌ನಲ್ಲಿ ವಿಕೆಟ್‌ ನೀಡಿದರು. ಬಳಿಕ ಬಂದ ಹಾರ್ದಿಕ್‌ ಪಾಂಡ್ಯ ಕೇವಲ 2 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರು.

Asia Cup 2022 India vs Pakistan Super Four Match Virat Kohli Hits back to back fifties san

ಪಾಕ್‌ ಮುಂದೆ ಅಬ್ಬರಿಸದ ಸೂರ್ಯ: ಅಂತಾರಾಷ್ಟ್ರೀಯ ಟಿ20ಯಲ್ಲಿ ಸೂರ್ಯಕುಮಾರ್‌ ಯಾದವ್‌ ಬಹುತೇಕ ಎಲ್ಲಾ ತಂಡಗಳ ವಿರುದ್ಧವೂ ಅಬ್ಬರಿಸಿದ್ದಾರೆ. ಆದರೆ, ಪಾಕಿಸ್ತಾನ ವಿರುದ್ಧ ಮಾತ್ರ ಅವರ ಫ್ಲಾಪ್‌ ಶೋ ಮುಂದುವರಿಸಿದೆ. 2021ರಲ್ಲಿ ದುಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ 8 ಎಸೆತಗಳಲ್ಲಿ 11 ರನ್‌ ಬಾರಿಸಿದ್ದ ಸೂರ್ಯಕುಮಾರ್‌, ಇದೇ ಟೂರ್ನಿಯ ಮೊದಲ ಪಂದ್ಯದಲ್ಲಿ 18 ಎಸೆತಗಳಲ್ಲಿ 18 ರನ್‌ ಬಾರಿಸಿದ್ದರು. ಈಗ 10 ಎಸೆತಗಳಲ್ಲಿ 13 ರನ್‌ ಬಾರಿಸಿ ಔಟಾಗಿದ್ದಾರೆ.
 

Follow Us:
Download App:
  • android
  • ios