ಪಾಕ್ ವಿರುದ್ಧ ಪಂದ್ಯದ ಬಳಿಕ ಶಮಿ ವಿರುದ್ಧ ಟೀಕೆ, ನಿಂದನೆ ಶಮಿ ಪಾಕಿಸ್ತಾನ ಪ್ರೇಮಿ, ಪಾಕ್ ನೆರವಾಗಿದ್ದಾರೆ ಎಂದು ನಿಂದನೆ ಶಮಿ ಬೆಂಬಲಕ್ಕೆ ನಿಂತ ಟೀಂ ಇಂಡಿಯಾ , ಬಿಸಿಸಿಐ ಶಮಿ ಬೆಂಬಲಿಸಿದ  ಪಾಕಿಸ್ತಾನ ಕ್ರಿಕೆಟಿಗ ರಿಜ್ವಾನ್ 

ದುಬೈ(ಅ.26): T20 world Cup 2021 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಸಾಮಾಜಿಕ ಜಾಲತಾಣಗಲ್ಲಿ ಟೀಕೆಗಳು, ಆಕ್ರೋಶಗಳು ವ್ಯಕ್ತವಾಗಿದೆ. ಆದರೆ ಕೆಲವರು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಯನ್ನೇ ನಿಂದಿಸಿದ್ದಾರೆ. ದುಬಾರಿ ಬೌಲಿಂಗ್ ಮಾಡುವ ಮೂಲಕ ಶಮಿ, ಪಾಕಿಸ್ತಾನ ತಂಡಕ್ಕೆ ನೆರವಾಗಿದ್ದಾರೆ. ಶಮಿ ಪಾಕ್ ಪ್ರೇಮಿ ಎಂದು ನಿಂದನೆ ಮಾಡಲಾಗಿದೆ. ಶಮಿ ಬೆಂಬಲಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಬಿಸಿಸಿಐ ನಿಂತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಶಮಿ ಬೆಂಬಲಿ ಮಹತ್ವದ ಸಂದೇಶ ಸಾರಿದ್ದಾರೆ.

T20 World Cup; ಪಾಕ್ ವಿರುದ್ಧ ಸೋಲಿಗೆ ಮೊಹಮ್ಮದ್ ಶಮಿಗೆ ನಿಂದನೆ, ನೆರವಿಗೆ ನಿಂತ ಸೆಹ್ವಾಗ್!

ಟೀಂ ಇಂಡಿಯಾ ವಿರುದ್ಧದ ಗೆಲುವಿನಲ್ಲಿ ಮೊಹಮ್ಮದ್ ರಿಜ್ವಾನ್ ಅದ್ಭುತ ಬ್ಯಾಟಿಂಗ್ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ. ಇದೀಗ ಶಮಿ ಬೆಂಬಲಕ್ಕೆ ನಿಂತಿದ್ದಾರೆ. ದೇಶಕ್ಕಾಗಿ ಆಡುವ ಪ್ರತಿಯೊಬ್ಬ ಆಟಗಾರನ ಎದುರಿಸುವ ಒತ್ತಡ, ಸಂಕಷ್ಟ, ತ್ಯಾಗವನ್ನು ಅಳೆಯಲು ಸಾಧ್ಯವಿಲ್ಲ. ಮೊಹಮ್ಮದ್ ಶಮಿ ವಿಶ್ವದ ಅತ್ಯುತ್ತಮ ಬೌಲರ್. ದಯವಿಟ್ಟು ನಿಮ್ಮ ಸ್ಟಾರ್ ಬೌಲರನ್ನು ಗೌರವಿಸಿ. ಪಂದ್ಯ ಎಲ್ಲರನ್ನು ಒಂದೂಗೂಡಿಸುತ್ತದ. ಇಬ್ಬಾಗ ಮಾಡಬೇಡಿ ಎಂದು ರಿಜ್ವಾನ್ ಟ್ವೀಟ್ ಮಾಡಿದ್ದಾರೆ.

Scroll to load tweet…

Pak ವಿರುದ್ಧ ಸೋತ ಭಾರತ: ನಿಂದನೆಗೀಡಾದ ಶಮಿ ಬೆಂಬಲಕ್ಕೆ ಬಂದ ಕ್ರಿಕೆಟ್‌ ದೇವರು!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಪೂರ್ಣ ವಿಫಲಾಗಿದೆ. ಇದಕ್ಕೆ ಮೊಹಮ್ಮದ್ ಶಮಿ ವಿರುದ್ಧ ಟೀಕೆ ನಿಂದನೆ ಸಲ್ಲದು. ಮೊಹಮ್ಮದ್ ಶಮಿ ಬೆಂಬಲಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್ ಸೇರಿದಂತೆ ಹಲವರು ನಿಂತಿದ್ದಾರೆ.

Scroll to load tweet…
Scroll to load tweet…
Scroll to load tweet…

ಬಿಸಿಸಿಐ ಕೂಡ ಶಮಿ ಬೆಂಬಲಕ್ಕೆ ನಿಂತಿದೆ. ಮೊಹಮ್ಮದ್ ಶಮಿ ಪರ ಅಭಿಮಾನಿಗಳು ಟ್ವೀಟ್ ಮೂಲಕ ಬೆಂಬಲ ಸೂಚಿಸಿದ್ದಾರೆ. ಪಂದ್ಯ ಗೆದ್ದರೂ ಸೋತರು ನಾವು ಟೀಂ ಇಂಡಿಯಾ ಪರ ಇದ್ದೇವೆ. ಶಮಿ ಟೀಂ ಇಡಿಯಾದ ಅತ್ಯುತ್ತಮ ವೇಗಿ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಪಾಕ್ ವಿರುದ್ದ ಭಾರತ ಸೋಲಿಗೆ ಕೊಹ್ಲಿ ಮಾಡಿದ ಒಂದು ತಪ್ಪು ಕಾರಣ ಎಂದ ಇಂಜಮಾಮ್!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ 3.5 ಓವರ್‌ಗಳಲ್ಲಿ 43 ರನ್ ನೀಡಿದ್ದರು. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ಪಾಕಿಸ್ತಾನ, ಕೊಹ್ಲಿ ಸೈನ್ಯದ ವಿರುದ್ಧ 10 ವಿಕೆಟ್ ಗೆಲುವು ದಾಖಲಿಸಿತ್ತು.