Asianet Suvarna News Asianet Suvarna News

T20 World Cup| ನನ್ನ ಕುಟುಂಬಕ್ಕೆ ಭದ್ರತೆ ಒದಗಿಸಿ: ವಿದೇಶಾಂಗ ಸಚಿವರಿಗೆ ಪಾಕ್ ಕ್ರಿಕೆಟರ್ ಪತ್ನಿ ಮನವಿ!

* T20 ವಿಶ್ವಕಪ್ 2021 ಪಂದ್ಯಾವಳಿಯಲ್ಲಿ ಪಾಕಿಸ್ತಾನಕ್ಕೆ ಸೋಲು

* ಸೋಲಿನ ಬೆನ್ನಲ್ಲೇ ಪಾಕ್ ಕ್ರಿಕೆಟಿಗ ಹಸನ್ ಅಲಿ ಕುಟುಂಬಕ್ಕೆ ಜೀವ ಬೆದರಿಕೆ

* ನನ್ನ ಕುಟುಂಬಕ್ಕೆ ಭದ್ರತೆ ಒದಗಿಸಿ: ವಿದೇಶಾಂಗ ಸಚಿವರಿಗೆ ಪಾಕ್ ಕ್ರಿಕೆಟರ್ ಹಸನ್ ಅಲಿ ಪತ್ನಿ ಮನವಿ

Pak cricketer Hasan Ali wife requests Jaishankar for her family safety pod
Author
Bangalore, First Published Nov 13, 2021, 12:23 PM IST

ದುಬೈ(ನ.13): ಕ್ರಿಕೆಟ್ ಜಗತ್ತು ಮತ್ತು ಸಾಮಾಜಿಕ ಜಾಲತಾಣಗಳ (Social Media) ನಡುವಿನ ಅಂತರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಿಂದೆಲ್ಲಾ ಅಭಿಮಾನಿಗಳು ತಮ್ಮ ತಂಡ ಸರಿಯಾಗಿ ಪ್ರದರ್ಶನ ನೀಡದಿದ್ದರೆ ಅವರ ಪ್ರತಿಕೃತಿ ದಹಿಸಿ, ಫೋಟೋ, ಫ್ಲೆಕ್ಸ್ ಸುಟ್ಟು ಪ್ರತಿಭಟಿಸಿದ್ದರು. ಆದರೆ ಈಗ ಮೈದಾನದಲ್ಲಿ ಕ್ರಿಕೆಟಿಗರು ಮಾಡುವ ಸಣ್ಣಪುಟ್ಟ ತಪ್ಪುಗಳು ಅವರ ಬದುಕನ್ನೇ ಬಲಿ ತೆಗೆದುಕೊಳ್ಳುತ್ತಿವೆ. T20 ವಿಶ್ವಕಪ್ 2021 ಪಂದ್ಯಾವಳಿಯಲ್ಲಿ ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದಲ್ಲಿ 17 ನೇ ಓವರ್ ಬೌಲ್ ಮಾಡಿದ ಟೀಂ ಇಂಡಿಯಾದ (Team India) ಮೊಹಮ್ಮದ್ ಶಮಿ, 17 ರನ್ ಕೊಟ್ಟ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಸಂದೇಶ ಹಾಗೂ ಬೆದರಿಕೆಗಳನ್ನು ಎದುರಿಸಿದ್ದೇ ಇದಕ್ಕೆ ಸೂಕ್ತ ಉದಾಹರಣೆ ಎನ್ನಬಹುದು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಉತ್ತಮವಾಗಿ ಆಡಿದ್ದರೂ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ಅವರ ಪುಟ್ಟ ಮಗಳನ್ನು ಅತ್ಯಾಚಾರಗೈಯ್ಯುವ ಬೆದರಿಕೆ ಹಾಕಿದ ವಿಚಾರವೂ ಹೊಸದೇನಲ್ಲ. ಇದಾದ ಬಳಿಕ ಪೊಲೀಸರು ಇಂತಹ ಬೆದರಿಕೆ ಹಾಕಿದಾತನನ್ನು ಬಂಧಿಸಿದ್ದಾರೆ. ಸದ್ಯ ಪಾಕಿಸ್ತಾನದ ವೇಗಿ ಹಸನ್ ಅಲಿ (Pakistan’s cricketer Hasan Ali) ಈ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಅವರು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯ (Australia) ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‌ಗಳಿಂದ ಸೋತಿತ್ತು.

ಗೆಲುವಿಗೆ 10 ಎಸೆತಗಳಲ್ಲಿ 20 ರನ್‌ಗಳ ಅಗತ್ಯವಿದ್ದಾಗ ಆಸ್ಟ್ರೇಲಿಯಾದ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್ (Matthew Wade) ಬೌಂಡರಿ ಬಳಿ ಹಸನ್ ಅಲಿ ಕ್ಯಾಚ್ ಕಳೆದುಕೊಂಡರು. ಮ್ಯಾಥ್ಯೂ ವೇಡ್‌ಗೆ ಕ್ಯಾಚ್ ನೀಡಿದ್ದರೆ ಪಂದ್ಯವನ್ನು ಗೆಲ್ಲುತ್ತಾರೆ ಎಂದು ಪಾಕ್ ನಾಯಕ ಬಾಬರ್ ಅಜಮ್ ಕಾಮೆಂಟ್ ಮಾಡಿರುವುದೂ ಕೂಡಾ ಚರ್ಚೆಗೆ ಗ್ರಾಸವಾಗಿತ್ತು. 

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸದ್ಯ ಪಾಕಿಸ್ತಾನ ಕ್ರಿಕೆಟಿಗ ಹಸನ್ ಕುಟುಂಬ, ಹೆಂಡತಿ ಹಾಗೂ ಅವರ ಒಂದು ವರ್ಷದ ಕಂದನಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಹಸನ್ ಅಲಿ ಮತ್ತು ಅವರ ಪತ್ನಿ ಸಮಿಯಾ ಅರ್ಜೋ (Samiya Arzoo) ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಕಾರುತ್ತಿದ್ದಾರೆ. ಸಾಮಿಯಾ ಅರ್ಜೋ  ಮೂಲತಃ ಭಾರತೀಯರಾಗಿದ್ದು, ಅವರ ವಿರುದ್ಧ ದ್ವೇಷಪೂರಿತ ಹೇಳಿಕೆಗಳ ಸದ್ದು ಜೋರಾಗಿದೆ. ಹೀಗಿರುವಾಗ ಹರಿಯಾಣದ ಫರಿಯಾಬಾದ್‌ನ (Faridabad, Haryana) ಸಮಿಯಾ ಭಾರತ ಸರ್ಕಾರದಿಂದ (Govt Of India) ರಕ್ಷಣೆ ಕೋರಿ ಟ್ವೀಟ್ ಮಾಡಿದ್ದಾರೆ.

‘ಕೆಲವು ನಾಚಿಕೆಯಿಲ್ಲದ ಕ್ರಿಕೆಟ್ ಅಭಿಮಾನಿಗಳು ನನ್ನ ಒಂದು ವರ್ಷದ ಮಗಳನ್ನೂ ಬಿಡದೆ ಕಚ್ಚಾಡುತ್ತಿದ್ದಾರೆ. ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಮೇಲಧಿಕಾರಿಗಳಿಂದ ನನಗೆ ರಕ್ಷಣೆಯ ಭರವಸೆ ನೀಡದಿದ್ದರೆ, ನಾನು ಹರಿಯಾಣದಲ್ಲಿರುವ ನಮ್ಮ ಕುಟುಂಬ ಸದಸ್ಯರ ಬಳಿ ಹೋಗುತ್ತೇನೆ. ಭಾರತೀಯ ವಿದೇಶಾಂಗ ಸಚಿವ ಡಾ.ಜೈ ಶಂಕರ್‌ರವರೇ ನಾನು ಭಾರತೀಯನಾಗಿ ನನ್ನ ರಕ್ಷಣೆಯ ಭದ್ರತೆ ಬಗ್ಗೆ ಕಾಳಜಿ ವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಎಂದು ಸಾಮಿಯಾ ಅರ್ಜೋ ಟ್ವೀಟ್ ಮಾಡಿದ್ದಾರೆ.

'ನಾನು ಭಾರತೀಯನಾಗಿ ಹುಟ್ಟಿದ್ದಕ್ಕೆ ಹೆಮ್ಮೆಪಡುತ್ತೇನೆ. ಅದೇ ರೀತಿ ಪಾಕಿಸ್ತಾನದ ಜನರಿಗೆ ನಾನು ಯಾವುದೇ ರಾ ಏಜೆಂಟ್ ಅಲ್ಲ. ಅಲ್ಲದೇ ನನ್ನ ಪತಿ ಅವರು ಶಿಯಾ ಧರ್ಮಕ್ಕೆ ಸೇರಿದವರೆಂದು ಉದ್ದೇಶಪೂರ್ವಕವಾಗಿ ಪಂದ್ಯದಲ್ಲಿ ಕ್ಯಾಚ್ ಬಿಡಲಿಲ್ಲ ಎಂದು ಹೇಳುತ್ತಿದ್ದೇನೆ. ದಯವಿಟ್ಟು ನಮ್ಮನ್ನು ಸುರಕ್ಷಿತವಾಗಿರಿಸಿ, ಈ ರೀತಿ ದಾಳಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಅನೇಕ ಪಾಕ್ ಅಭಿಮಾನಿಗಳು ನಾನು ಭಾರತೀಯಳಾಗಿರುವುದರಿಂದ, ಭಾರತೀಯ ರಾ ಏಜೆಂಟ್ ಎಂದು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ. ಆ ಕ್ಯಾಚ್ ಕೈಬಿಟ್ಟಿದ್ದಕ್ಕಾಗಿ ಹಸನ್ ಅಲಿ ತುಂಬಾ ಅಸಮಾಧಾನ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ. ಆದರೆ ಪಂದ್ಯದ ನಂತರ ದುಬೈನಲ್ಲಿರುವ ನಮ್ಮ ಕುಟುಂಬವನ್ನು ಮತ್ತು ಪಾಕಿಸ್ತಾನದಲ್ಲಿರುವ ನಮ್ಮ ಕುಟುಂಬವನ್ನು ಕೊಲ್ಲುತ್ತೇನೆ ಎಂದು ಬೆದರಿಕೆಗಳು ಬರುತ್ತಿವೆ...' ಎಂದು ಸರಣಿ ಟ್ವೀಟ್‌ಗಳಲ್ಲಿ ಸಮಿಯಾ ಅರ್ಜೋ ಹೇಳಿದ್ದಾರೆ.
 

Follow Us:
Download App:
  • android
  • ios