T20 World Cup

(Search results - 197)
• undefined

CricketJul 31, 2021, 8:13 PM IST

ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟಿಸಿದ ಹರ್ಷಾ ಬೋಗ್ಲೆ, ಹೊಸ ಮುಖಕ್ಕೆ ಅವಕಾಶ!

• ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಬಲಿಷ್ಠ ತಂಡ ಪ್ರಕಟಿಸಿದ ಬೋಗ್ಲೆ
• ಇಬ್ಬರು ಸ್ಪಿನ್ನರ್‌ಗೆ ಸ್ಥಾನ, ಕೆಲ ಹೊಸ ಮುಖಗಳಿಗೆ ಅವಕಾಶ
• ಅಕ್ಟೋಬರ್ 17 ರಿಂದ ನವೆಂಬರ್ 14ರ ವರೆಗೆ ನಡೆಯಲಿದೆ ಟೂರ್ನಿ
• Ind vs SL

CricketJul 29, 2021, 5:57 PM IST

ಲಂಕಾ ಎದುರು ಟಿ20 ಸರಣಿ ಜಯಿಸುತ್ತಾ ಶಿಖರ್ ಧವನ್ ಪಡೆ..?

ಮೊದಲ ಟಿ20 ಪಂದ್ಯವನ್ನು ಗೆದ್ದು ಬೀಗಿದ್ದು ಟೀಂ ಇಂಡಿಯಾ, ಎರಡನೇ ಪಂದ್ಯಕ್ಕೆ ಸಜ್ಜಾಗುವ ಮುನ್ನ ಕೋವಿಡ್ ಶಾಕ್ ನೀಡಿದ್ದರಿಂದ 8 ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದರು. ಹೀಗಿದ್ದೂ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಯುವ ಕ್ರಿಕೆಟಿಗರು ಕೆಚ್ಚೆದೆಯ ಪ್ರದರ್ಶನ ತೋರಿದರಾದರೂ ರೋಚಕ ಸೋಲು ಅನುಭವಿಸಿದ್ದರು.

• undefined

CricketJul 16, 2021, 5:37 PM IST

ಐಸಿಸಿ ಟಿ20 ವಿಶ್ವಕಪ್‌: ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕಿಸ್ತಾನ..!

ದುಬೈ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಹೈವೋಲ್ಟೇಜ್‌ ಪಂದ್ಯಗಳು ಪ್ರೇಕ್ಷಕರಿಗೆ ನೋಡಲು ಸಿಗಲಿದ್ದು, ಟೂರ್ನಿಗೆ ಆತಿಥ್ಯ ವಹಿಸಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಐಸಿಸಿ ಅಧಿಕೃತವಾಗಿ ಟೂರ್ನಿಯಲ್ಲಿ ತಂಡಗಳನ್ನು ಎರಡು ಭಾಗಗಳಾಗಿ ವಿಭಾಗಿಸಿದೆ. ಇದೇ ವೇಳೆ ಅರ್ಹತಾ ಸುತ್ತಿನ ಪಂದ್ಯಗಳಿಗೆ ತಂಡಗಳನ್ನು ವಿಭಾಗಿಸಲಾಗಿದೆ. ಸೂಪರ್‌ 12 ಹಂತದಲ್ಲಿ ಯಾವ ತಂಡಗಳು ಯಾವ ಗುಂಪಿನಲ್ಲಿವೆ, ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಯಾವೆಲ್ಲಾ ತಂಡಗಳು ಕಾದಾಟ ನಡೆಸಲಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Steve Smith

CricketJul 3, 2021, 1:24 PM IST

ಆ್ಯಷಸ್ ಸರಣಿಗಾಗಿ ಟಿ20 ವಿಶ್ವಕಪ್‌ ತ್ಯಾಗಕ್ಕೆ ರೆಡಿಯಾದ ಸ್ಮಿತ್..!

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೊಣಕೈ ಗಾಯದ ಸಮಸ್ಯೆಯಿಂದಾಗಿ ಮುಂಬರುವ ವೆಸ್ಟ್ ಇಂಡೀಸ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ.

Kusal Mendis

CricketJul 1, 2021, 4:33 PM IST

ರಸ್ತೆಯಲ್ಲಿ ಸಿಗರೇಟ್‌ನೊಂದಿಗೆ ಓಡಾಡಿದ್ದ ಮೂವರು ಲಂಕಾ ಕ್ರಿಕೆಟಿಗರು ಒಂದು ವರ್ಷ ಬ್ಯಾನ್‌..!

ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೂ ಮುನ್ನ ಕುಸಾಲ್ ಮೆಂಡಿಸ್, ಡಿಕ್‌ವೆಲ್ಲಾ ಹಾಗೂ ಗುಣತಿಲಕ ಬಯೋ ಬಬಲ್‌ ನಿಯಮ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ಕಾಣಿಸಿಕೊಂಡಿದ್ದರು. ರಸ್ತೆ ಬದಿ ಈ ಲಂಕಾ ಆಟಗಾರರು ಸಿಗರೇಟ್‌ ಹಿಡಿದು ಓಡಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

T20 World Cup

CricketJun 29, 2021, 5:23 PM IST

ಟಿ20 ವಿಶ್ವಕಪ್ ವೇಳಾಪಟ್ಟಿ ಖಚಿತಪಡಿಸಿದ ಐಸಿಸಿ

ಸೋಮವಾರವಷ್ಟೇ(ಜೂ.28) ಟಿ20 ವಿಶ್ವಕಪ್‌ ಟೂರ್ನಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಸಿಸಿಗೆ ತಿಳಿಸಿದ್ದರು. ಕೋವಿಡ್ 19 ಕಾರಣದಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು ಯುಎಇಗೆ ಸ್ಥಳಾಂತರವಾಗಿದೆ.

T20 World Cup

CricketJun 28, 2021, 6:49 PM IST

ಐಸಿಸಿ ಟಿ20 ವಿಶ್ವಕಪ್‌ ಭಾರತದಿಂದ ಯುಎಇಗೆ ಸ್ಥಳಾಂತರಿಸಿದ ಬಿಸಿಸಿಐ

ಭಾರತ 2021ನೇ ಸಾಲಿನ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಆತಿಥ್ಯದ ಹಕ್ಕು ಪಡೆದುಕೊಂಡಿತ್ತು. ಭಾರತದಲ್ಲೇ ಟಿ20 ವಿಶ್ವಕಪ್ ಆಯೋಜಿಸಲು ಬಿಸಿಸಿಐ ಎಲ್ಲಾ ದಾರಿಗಳ ಅನ್ವೇಷಣೆ ನಡೆಸಲು ಇದೇ ಜೂನ್‌ 28ರ ವರೆಗೆ ಐಸಿಸಿಯಿಂದ ಗಡುವು ಪಡೆದುಕೊಂಡಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ತೀರ್ಮಾನ ತೆಗೆದುಕೊಂಡಿದೆ.

IPL BCCI

CricketJun 28, 2021, 1:19 PM IST

ಇಂದೇ ಐಪಿಎಲ್‌ ಭಾಗ-2 ವೇಳಾಪಟ್ಟಿ ಪ್ರಕಟ?

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಗೆ ಕೋವಿಡ್‌ ವಕ್ರದೃಷ್ಟಿ ಬೀರಿತ್ತು. ಮೊದಲ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದವು. ಆದರೆ ಬಯೋ ಬಬಲ್‌ನೊಳಗಿದ್ದ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ಮೇ 04ರಂದು ಬಿಸಿಸಿಐ ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು.

• undefined

NewsJun 26, 2021, 4:59 PM IST

ಅಯೋಧ್ಯೆ ಅಭಿವೃದ್ಧಿ ಪರಿಶೀಲಿಸಿದ ಮೋದಿ, ಸುಗಮವಾಯ್ತಾ ಡಿಕೆಶಿ ಹಾದಿ?ಜೂ.26ರ ಟಾಪ್ 10 ಸುದ್ದಿ!

ಯುಪಿ ಎಲೆಕ್ಷನ್‌ಗೂ ಮುನ್ನ 20 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 17ರಿಂದ ಯುಎಇನಲ್ಲಿ ನಡೆಯಲಿದೆ. ಲಡಾಖ್‌ಗೆ ನಾಳೆ ರಾಜನಾಥ್ ಸಿಂಗ್ ಭೇಟಿ ನೀಡುತ್ತಿದ್ದಾರೆ. ಆಯೋಗ್ಯ ಹಾಡಿಗೆ ಫಿದಾ ಆದ ರಮ್ಯಾ, ಮಾಜಿ ಬಿಗ್‌ಬಾಸ್‌ ಸ್ಪರ್ಧಿಗೆ ಲೈಂಗಿಕ ಕಿರುಕುಳ ಸೇರಿದಂತೆ ಜೂನ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

T20 World Cup

CricketJun 26, 2021, 9:56 AM IST

ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಐಸಿಸಿ ಟಿ20 ವಿಶ್ವಕಪ್‌ ಆರಂಭದ ದಿನಾಂಕ ಪ್ರಕಟ..!

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೋವಿಡ್ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗಿದ್ದ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಬಳಿಕ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಐಪಿಎಲ್ ಭಾಗ 2 ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ICC BCCI

CricketJun 21, 2021, 12:19 PM IST

3 ಐಸಿಸಿ ಟೂರ್ನಿಗೆ ಆತಿಥ್ಯ ವಹಿಸಲು ಬಿಸಿಸಿಐ ಆಸಕ್ತಿ

2017ರ ಬಳಿಕ ಸ್ಥಗಿತಗೊಂಡಿದ್ದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಪುನಾರಂಭಿಸುವುದಾಗಿ ಐಸಿಸಿ ತಿಳಿಸಿದ್ದು, ಬಿಸಿಸಿಐ ಭಾರತದಲ್ಲಿ ನಡೆಸಲು ಆಸಕ್ತಿ ತೋರಿದೆ.

ICC BCCI

CricketJun 10, 2021, 9:51 AM IST

ಅಕ್ಟೋಬರ್ 10ರೊಳಗೆ ಐಪಿಎಲ್‌ ಮುಗಿಸಲು ಐಸಿಸಿ ಒತ್ತಡ?

ಐಸಿಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 18ರಿಂದ ಟಿ20 ವಿಶ್ವಕಪ್‌ ಆರಂಭಗೊಳ್ಳಬೇಕಿದ್ದು, ಐಸಿಸಿ ಟೂರ್ನಿಗಳು ಆರಂಭವಾಗುವ ಮುನ್ನ ಕನಿಷ್ಠ 7-10 ದಿನಗಳ ಮೊದಲು ಬೇರಾರ‍ಯವುದೇ ಟೂರ್ನಿಗಳನ್ನು ನಡೆಸುವಂತಿಲ್ಲ ಎನ್ನುವ ನಿಯಮವಿದೆ.

T20 World Cup

CricketJun 7, 2021, 2:39 PM IST

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆತಿಥ್ಯಕ್ಕೆ ಶ್ರೀಲಂಕಾ ಒಲವು..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯ ಕುರಿತಂತೆ ಈಗಾಗಲೇ ಬಿಸಿಸಿಐ ಅಧಿಕಾರಿಗಳು ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌ ಜತೆ ಮಾತುಕತೆ ನಡೆಸುತ್ತಿದ್ದಾರೆ. ಇದೇ ವೇಳೆ ಲಂಕಾ ಮಂಡಳಿಯ ಜತೆಯೂ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆಂದು ಎಎನ್‌ಐ ವರದಿ ಮಾಡಿದೆ.

Ehsan Mani

CricketJun 5, 2021, 5:18 PM IST

ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರವಾಗಲಿದೆ: ಪಾಕ್‌ ಕ್ರಿಕೆಟ್ ಮುಖ್ಯಸ್ಥ ಏಹ್ಸಾನ್ ಮಣಿ

ಕಳೆದ ಮೇ.29ರಂದು ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯನ್ನು ಕರೆದಾಗ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಸಭೆಯಲ್ಲಿ ಐಸಿಸಿಗೆ ಬಿಸಿಸಿಐ ಒಂದು ತಿಂಗಳು ಹೆಚ್ಚುವರಿಯಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಐಸಿಸಿ ಕೂಡಾ ಪುರಸ್ಕರಿಸಿದೆ. ಇದೇ ಜೂನ್ 28ರೊಳಗಾಗಿ ಟಿ20 ವಿಶ್ವಕಪ್ ಆಯೋಜನೆಯ ಕುರಿತಂತೆ ಸ್ಪಷ್ಟ ನಿರ್ಧಾರ ತಿಳಿಸಲು ಬಿಸಿಸಿಐಗೆ ಐಸಿಸಿ ಸೂಚನೆ ನೀಡಿದೆ.

Dinesh Karthik

CricketJun 5, 2021, 3:34 PM IST

ಟಿ20 ವಿಶ್ವಕಪ್‌ನಲ್ಲಿ ನಾನು ಫಿನಿಶರ್ ಆಗಬೇಕೆಂದ ದಿನೇಶ್ ಕಾರ್ತಿಕ್‌

2019ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಿನೇಶ್‌ ಕಾರ್ತಿಕ್ ಸ್ಥಾನ ಪಡೆದಿದ್ದರಾದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದರು. ಮಹತ್ವದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್‌ ವೈಫಲ್ಯ ಅನುಭವಿಸಿದ್ದರಿಂದಾಗಿ ತಂಡದಿಂದ ಹೊರಬಿದ್ದಿದ್ದರು.