Asianet Suvarna News Asianet Suvarna News

ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡ ಪ್ರಕಟ; ಟೀಂ ಕೂಡಿಕೊಂಡ ವೇಗಿ ಶ್ರೀಶಾಂತ್

ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಕೇರಳ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ವೇಗಿ ಎಸ್‌.ಶ್ರೀಶಾಂತ್ ಕೇರಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Pacer S Sreesanth named in Kerala squad for Syed Mushtaq Ali T20 Tournament kvn
Author
Thiruvananthapuram, First Published Dec 30, 2020, 5:13 PM IST

ತಿರುವನಂತಪುರಂ(ಡಿ.30): ವೇಗದ ಬೌಲರ್‌ ಎಸ್‌. ಶ್ರೀಶಾಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ತುದಿಗಾಲಿನಲ್ಲಿ ನಿಂತಿದ್ದು, ಜನವರಿ 10ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಕೇರಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2013ರಲ್ಲಿ ನಡೆದ ಐಪಿಎಲ್ ಟೂರ್ನಿಯ ವೇಳೆ ಸ್ಪಾಟ್‌ ಫಿಕ್ಸಿಂಗ್‌ ನಡೆಸಿದ ಆರೋಪದ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಅಜೀವ ನಿಷೇಧಕ್ಕೆ ಶ್ರೀಶಾಂತ್ ಗುರಿಯಾಗಿದ್ದರು. ಈ ಅಜೀವ ನಿಷೇಧ ಶಿಕ್ಷೆಯನ್ನು 2015 ವಿಶೇಷ ನ್ಯಾಯಾಲಯ ಖುಲಾಸೆ ಗೊಳಿಸಿತ್ತು. ಬಳಿಕ 2018ರಲ್ಲಿ ಕೇರಳ ಹೈ ಕೋರ್ಟ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಅಜೀವ ಶಿಕ್ಷೆಯನ್ನು ತೆರವುಗೊಳಿಸಿತ್ತು. 
ಆದಾಗಿಯೂ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠವು ನಿಷೇಧ ಶಿಕ್ಷೆಯನ್ನು ಮುಂದುವರೆಸಿತ್ತು. ಬಳಿಕ ಶ್ರೀಶಾಂತ್ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಸುಪ್ರೀಂ ಕೋರ್ಟ್‌ ನಿಷೇಧ ಶಿಕ್ಷೆಯನ್ನು ಕಡಿತಗೊಳಿಸಲು ಸೂಚಿಸಿತ್ತು.

2021ರ ಐಪಿಎಲ್ ಆಡ್ತಾರ ಶ್ರೀಶಾಂತ್? ಮಹತ್ವದ ಮಾಹಿತಿ ಹಂಚಿಕೊಂಡ ವೇಗಿ!

2019ರ ಆಗಸ್ಟ್‌ನಲ್ಲಿ ಬಿಸಿಸಿಐ ಓಂಬಡ್ಸ್‌ಮನ್ ಡಿ.ಕೆ. ಜೈನ್  ಜೀವಾವಧಿ ಶಿಕ್ಷೆಯನ್ನು ಬಿಟ್ಟು 7 ವರ್ಷಕ್ಕೆ ನಿಷೇಧ ಶಿಕ್ಷೆಯನ್ನು ಕಡಿತಗೊಳಿಸಿದರು. ಇದೀಗ 37 ವರ್ಷದ ಶ್ರೀಶಾಂತ್ ರಾಜ್ಯ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಜತೆಗೆ ಟ್ವೀಟ್‌ ಮೂಲಕ ಶ್ರೀಶಾಂತ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಮುಷ್ತಾಕ್ ಅಲಿ ಟೂರ್ನಿಗೆ ಕೇರಳ ತಂಡಕ್ಕೆ ಸಂಜು ಸ್ಯಾಮ್ಸನ್‌ಗೆ ನಾಯಕ ಪಟ್ಟ ಕಟ್ಟಲಾಗಿದೆ. ಇನ್ನುಳಿದಂತೆ ರಾಬಿನ್ ಉತ್ತಪ್ಪ, ಬಾಸಿಲ್ ಥಂಪಿ, ಜಲಜಾ ಸಕ್ಸೇನಾ, ವಿಷ್ಣು ವಿನೋದ್, ಆಸೀಫ್‌ ಕೆ.ಎಂ, ಸಚಿನ್‌ ಬೇಬಿ  ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
 
ಎಸ್‌. ಶ್ರೀಶಾಂತ್ ಭಾರತ ಪರ 27 ಟೆಸ್ಟ್, 53 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು ಭಾರತ ಪರ 2011ರ ಆಗಸ್ಟ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

Follow Us:
Download App:
  • android
  • ios