ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಕೈಗೊಂಡಿದೆ. ಈ ಕಾರ್ಯಾಚರಣೆಯ ನಡುವೆ ಐಪಿಎಲ್ ಟೂರ್ನಿಯ ಭವಿಷ್ಯದ ಬಗ್ಗೆ ಅನಿಶ್ಚಿತತೆ నెలకొಂಡಿದೆ. ಯುದ್ಧ ಭೀತಿಯ ನಡುವೆ ಐಪಿಎಲ್ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸೇನೆ ದಿಟ್ಟ ಹೆಜ್ಜೆಯಿಟ್ಟಿದೆ. ಬುಧವಾರ ಮುಂಜಾನೆ ಪಾಕಿಸ್ತಾನದೊಳಗೆ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಭಾರತೀಯ ವಾಯು ಸೇನೆ ಕಣ್ಮಿಟುಕಿಸಿ ಬಿಡುವಷ್ಟರಲ್ಲಿ ಹೊಸಕಿ ಹಾಕಿದೆ. ಈ ಮೂಲಕ ಕಣಿವೆ ರಾಜ್ಯದಲ್ಲಿ ನೆತ್ತರು ಹರಿಸಿದ ಉಗ್ರರಿಗೆ ನರಕ ತೋರಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಈ ಕಾರ್ಯಚರಣೆಗೆ ಭಾರತೀಯ ಸೇನೆ ಇಟ್ಟ ಹೆಸರೇ 'ಆಪರೇಷನ್ ಸಿಂಧೂರ್'(Operation sindur).

ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಸಿಂಧೂರ/ಕುಂಕುಮಕ್ಕೆ ಮಹತ್ವದ ಸ್ಥಾನವಿದೆ. ಪಹಲ್ಗಾಮ್ ದಾಳಿಯಲ್ಲಿ (terror attack in south Kashmir's Pahalgam) ರಣಹೇಡಿ ಉಗ್ರರು ವಿವಾಹಿತ ಪುರುಷರನ್ನೇ ಹುಡುಕಿ ಹತ್ಯೆ ಮಾಡುವ ಮೂಲಕ ಮಹಿಳೆಯರ ಸಿಂಧೂರವನ್ನು ಅಳಿಸಿಹಾಕುವಂತೆ ಮಾಡಿದ್ದರು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸೇನೆ ದಿಟ್ಟ ಹೆಜ್ಜೆಯಿಟ್ಟಿದೆ.

Scroll to load tweet…

ಇನ್ನು 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಭಾರತದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಈಗಾಗಲೇ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಸದ್ಯ ಟೂರ್ನಿಯಲ್ಲಿ 56 ಪಂದ್ಯಗಳು ಮುಕ್ತಾಯವಾಗಿದ್ದು, ಇನ್ನು ಕೇವಲ 18 ಪಂದ್ಯಗಳು ನಡೆಯುವುದು ಮಾತ್ರ ಬಾಕಿ ಉಳಿದಿದೆ. ಮೇ 25ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.

ಇದೆಲ್ಲದರ ನಡುವೆ ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ದ (India vs Pakistan War) ಭೀತಿ ಆರಂಭವಾಗಿದೆ. ಬುಧವಾರ ಮುಂಜಾನೆಯೇ ಭಾರತೀಯ ಸೇನೆ ಭಯೋತ್ಪಾದಕರ ಹುಟ್ಟಡಗಿಸುವ ಕೆಲಸಕ್ಕೆ ಕೈಹಾಕಿದೆ. ಹೀಗಾಗಿ ಪಾಕಿಸ್ತಾನ ಸದ್ಯಕ್ಕೆ ಸುಮ್ಮನಾಗಿದ್ದರೂ, ಪಾಕ್ ಕೂಡಾ ಭಾರತಕ್ಕೆ ತಿರುಗೇಟು ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಐಪಿಎಲ್ ಪಂದ್ಯಗಳು ಸ್ಥಗಿತವಾಗುತ್ತಾ? ಕಂಟಿನ್ಯೂ ಆಗುತ್ತಾ?

ಪಾಕ್‌ ಮೇಲೆ ದಾಳಿ ಮಾಡುವ ಮುನ್ನ ದಿನವೇ ಭಾರತೀಯ ಗೃಹ ಸಚಿವಾಲಯ ಮಾಕ್ ಡ್ರಿಲ್ ಮಾಡಿಸುವ ಮೂಲಕ ಸಾರ್ವಜನಿಕರಲ್ಲಿ ಯುದ್ದವಾದರೆ ಯಾವೆಲ್ಲಾ ಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ತಿಳುವಳಿಕೆಯನ್ನು ನೀಡಿತ್ತು. ಇನ್ನು ಕುರಿತಂತೆ ಪ್ರತಿಕ್ರಿಯಿಸಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, 'ಅಂತಹದ್ದೇನೂ ಆಗುವವರೆಗೆ, ನನ್ನ ಪ್ರಕಾರ ಐಪಿಎಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಭಾರತದಲ್ಲಿರುವ ಎಲ್ಲರೂ ಸುರಕ್ಷಿತವಾಗಿ ಯಾವುದೇ ಆತಂಕವಿಲ್ಲದೇ ಇದ್ದಾರೆ. ಈ ಕುರಿತಂತೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ನಾವು ನಮ್ಮ ದೇಶದ ಸೈನ್ಯದ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟುಕೊಂಡಿದ್ದೇವೆ. ಅವರೆಲ್ಲರಿಂದಲೇ ನಾವು ಇಷ್ಟು ವರ್ಷಗಳ ಕಾಲ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ. ಭಾರತೀಯ ಆಟಗಾರರು ಮಾತ್ರವಲ್ಲದೇ ವಿದೇಶಿ ಆಟಗಾರರ ಕೂಡಾ ಯಾವುದೇ ಅಭದ್ರತೆಯ ಸನ್ನಿವೇಷವನ್ನು ಎದುರಿಸುತ್ತಿಲ್ಲ ಎಂದು ಹೇಳಿದ್ದರು.

ಸದ್ಯದ ಐಪಿಎಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಮಾಹಿತಿಯನ್ನು ಬಿಸಿಸಿಐ ಆಗಲಿ ಅಥವಾ ಐಪಿಎಲ್ ಆಡಳಿತ ಮಂಡಳಿಯಾಗಲಿ ಇನ್ನೂ ಘೋಷಿಸಿಲ್ಲ. ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ಪೂರ್ಣ ಪ್ರಮಾಣದ ಯುದ್ದ ಘೋಷಣೆಯಾದರೇ, ಬಹುಶಃ 18ನೇ ಆವೃತ್ತಿಯ ಐಪಿಎಲ್ ಟುರ್ನಿ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟರೂ ಅಚ್ಚರಿಯೇನಿಲ್ಲ.

ಈ ಮೊದಲು 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಯ ಸಂದರ್ಭದಲ್ಲಿಯೇ ಕೊರೊನಾ ವಕ್ಕರಿಸಿತ್ತು. ಹೀಗಾಗಿ ಟೂರ್ನಿಯನ್ನು ಭಾರತದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದಾದ ಬಳಿಕ ಸಂಪೂರ್ಣ ಟೂರ್ನಿಯನ್ನು ಭಾರತದ ಆಚೆ ಯುಎಇನಲ್ಲಿ 2020ರ ಐಪಿಎಲ್ ಟೂರ್ನಿಯ ದ್ವಿತಿಯಾರ್ಧವನ್ನು ಅರಬ್ಬರ ನಾಡಿನಲ್ಲಿ ಯಶಸ್ವಿಯಾಗಿ ನಡೆಸಿತ್ತು.