ಭಾರತ ತಂಡಕ್ಕೆ ಪದಾರ್ಪಣೆಗೂ ಮೊದಲು ಪಾಕಿಸ್ತಾನ ಪರ ಆಡಿದ್ದ ಸಚಿನ್ ತೆಂಡುಲ್ಕರ್!

  • ಸಚಿನ್ 1989ರಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾಗೆ ಪದಾರ್ಪಣೆ
  • ಭಾರತ ತಂಡಕ್ಕೆ ಪದಾರ್ಪಣೆ ಮೊದಲು ಪಾಕಿಸ್ತಾನ ಪರ ಕಣಕ್ಕಿಳಿದಿದ್ದ ಸಚಿನ್
  • ಸ್ವತಃ ಸಚಿನ್ ಬಹಿರಂಗ ಪಡಿಸಿದ್ದಾರೆ ಕುತೂಹಲ ಮಾಹಿತಿ
On this Day Sachin Tendulkar played for Pakistan before making his team India debut ckm

ಮುಂಬೈ(ಮೇ.30): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ಪಂದ್ಯ ಬಹುತೇಕ ಎಲ್ಲರಿಗೂ ತಿಳಿದಿದೆ. ಕಾರಣ ಸಚಿನ್ ಬದ್ಧವೈರಿ ಪಾಕಿಸ್ತಾನ ವಿರುದ್ಧವೇ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. 1989ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ ಇದಕ್ಕೂ ಮೊದಲು ಸಚಿನ್ ತೆಂಡುಲ್ಕರ್ ಪಾಕಿಸ್ತಾನ ತಂಡದ ಪರ ಕಣಕ್ಕಿಳಿದಿದ್ದಾರೆ. ಈ ವಿಚಾರ ಬಹುತೇಕರಿಗೆ ತಿಳಿದಿಲ್ಲ.

2021ರ ಟಾಪ್‌ 5 ಶ್ರೀಮಂತ ಕ್ರಿಕೆಟಿಗರಿವರು; ವಿರಾಟ್ ಕೊಹ್ಲಿಗೆ 3ನೇ ಸ್ಥಾನ..!.

ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಮೊದಲೇ ಸಚಿನ್ ಪಾಕಿಸ್ತಾನ ತಂಡದ ಪರ ಕಣಕ್ಕಿಳಿದಿದ್ದರು. ಅದು ಕೂಡ ಭಾರತದ ವಿರುದ್ಧವೇ ಸಚಿನ್ ಆಡಿದ್ದರು. ಮೇ.30 ಅಂದರೆ ಇದೇ ದಿನ ಸಚಿನ್ ಪಾಕ್ ಪರ ಕಣಕ್ಕಿಳಿದಿದ್ದಾರೆ. ಇಷ್ಟೇ ಅಲ್ಲ ಭಾರತದ ನಾಯಕ ಕಪಿಲ್ ದೇವ್ ಅವರ ಕ್ಯಾಚ್ ಹಿಡಿಯಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರೂ, ಸಾಧ್ಯವಾಗಿರಲಿಲ್ಲ.

ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ತಂಡ ಮುಂಬೈನ ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಪಂದ್ಯ ಆಡಿತ್ತು. ಈ ಪಂದ್ಯದ ಲಂಚ್ ಬ್ರೇಕ್ ವೇಳೆ ಪಾಕಿಸ್ತಾನ ತಂಡದ ಜಾವೇದ್ ಮಿಯಾಂದಾದ್ ಹಾಗೂ ಅಬ್ದುಲ್ ಖಾದಿರ್ ಕೆಲ ಕಾರಣದಿಂದ ಫೀಲ್ಡಿಂಗ್ ಮಾಡುಲು ಸಾಧ್ಯವಾಗಿಲ್ಲ. ಹೀಗಾಗಿ ಭಾರತ ತಂಡದ ಸ್ಟಾಂಡ್ ಬೈ ಫೀಲ್ಡರ್ ಸಚಿನ್ ತೆಂಡುಲ್ಕರ್ ಬಳಿ ಪಾಕಿಸ್ತಾನ ಪರ ಫೀಲ್ಡಿಂಗ್ ಮಾಡುವಂತೆ ಕೇಳಿಕೊಳ್ಳಲಾಗಿತ್ತು

ಆಕ್ಸಿಜನ್ ಪೂರೈಕೆಗೆ ಸಚಿನ್ 1 ಕೋಟಿ ರೂ ಬೆಂಬಲ.

ಪಾಕಿಸ್ತಾನ ನಾಯಕ ಇಮ್ರಾನ್ ಖಾನ್ ಮನವಿ ಮಾಡಿದ್ದರು. ಹೀಗಾಗಿ ಸಚಿನ್ ಪಾಕಿಸ್ತಾನ ಪರ ಫೀಲ್ಡಿಂಗ್ ಮಾಡಿದ್ದರು. ಈ ಘಟನೆಯನ್ನು ಸಚಿನ್ ತೆಂಡುಲ್ಕರ್ ತಮ್ಮ ಆತ್ಮಚರಿತ್ರೆ ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಈ ಘಟನೆ ಇಮ್ರಾನ್ ಖಾನ್‌ಗೆ ನೆನಪಿದೆಯೋ ಗೊತ್ತಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios