Asianet Suvarna News Asianet Suvarna News

ಕ್ರಿಕೆಟರ್ ಆದರೇನು ಹೆಂಡ್ತಿ ಬ್ಯಾಗ್ ಹೊರಲೇಬೇಕು... ಚಹಾಲ್ ಕಾಲೆಳೆದ ಶಿಖರ್ ಧವನ್

ಟೀಮ್ ಇಂಡಿಯಾದ ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರು ಮೈದಾನದಲ್ಲಿ ತಮ್ಮ ಕ್ರಿಕೆಟ್‌ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ ಅದರ ಜೊತೆ ಜೊತೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ಗಳ ಮೂಲಕವೂ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ODI captain Shikhar Dhawan live hilarious commentary on yuzvendra chahal and wife dhanashree verma, video goes viral akb
Author
First Published Nov 29, 2022, 9:02 PM IST

ಟೀಮ್ ಇಂಡಿಯಾದ ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರು ಮೈದಾನದಲ್ಲಿ ತಮ್ಮ ಕ್ರಿಕೆಟ್‌ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ ಅದರ ಜೊತೆ ಜೊತೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ಗಳ ಮೂಲಕವೂ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಈ ಬಾರಿ ಮತ್ತೊಬ್ಬ ಕ್ರಿಕೆಟಿಗ ಶಿಖರ್ ಧವನ್ ರೀಲ್ಸ್ ಅಭಿಮಾನಿಗಳ ಮನಗೆದ್ದಿದೆ. ಆದರೆ ಅದರಲ್ಲಿರುವುದು ಮಾತ್ರ ಯಜುವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವರ್ಮಾ.

ಏಕದಿನ ಪಂದ್ಯಗಳ ಕ್ಯಾಪ್ಟನ್ ಆಗಿರುವ ಶಿಖರ್ (Shikhar Dhawan) ಇನ್ಸ್ಟಾಗ್ರಾಮ್‌ನಲ್ಲಿ(Instagram) ಪೋಸ್ಟೊಂದನ್ನು ಮಾಡಿದ್ದು, ಅದರಲ್ಲಿ ಎಲ್ಲರೂ ಜೊತೆಯಾಗಿ ಏರ್‌ಪೋರ್ಟ್‌ಗೆ (Airport) ಆಗಮಿಸುತ್ತಿದ್ದು, ಮೊದಲಿಗೆ ಬಂದ ಶಿಖರ್ ಧವನ್ ಉಳಿದ ಕ್ರಿಕೆಟರ್‌ಗಳ ವಿಡಿಯೋ ಮಾಡಿದ್ದಾರೆ. ಹಾಗೆಯೇ ಇಲ್ಲಿ ಯಜುವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ಪಂಡಿತ್ ಬಗ್ಗೆ ತಮಾಷೆ ಮಾಡುತ್ತಿರುವುದು ಕಾಣುತ್ತಿದೆ. 

 

ನೋಡಿ.. ಇಲ್ಲಿ ನೋಡಿ..  ಕ್ರಿಕೆಟರ್ ಯಜುವೇಂದ್ರ ಚಹಾಲ್ (Yuzvendra Chahal) ಇಂದು ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ಬ್ಯಾಗ್‌ಗಳನ್ನು ಅವರು ಹೊತ್ತು ಸಾಗುತ್ತಿದ್ದಾರೆ. ಅವರ ಬಳಿ ಇರುವ ಎಕ್ಸ್ಟ್ರಾ ಲಗೇಜ್‌ಗಳು ಪತ್ನಿ ಧನಶ್ರೀದೂ ಎಂದು ಶಿಖರ್ ಧವನ್ ಲೈವ್ ಕಾಮೆಂಟ್ರಿ ನೀಡುತ್ತಾ ವೀಡಿಯೋ ಮಾಡುತ್ತಿದ್ದರೆ ಇತ್ತ ಚಹಾಲ್ ಟ್ರೋಲಿ ಬ್ಯಾಗ್‌ಗಳನ್ನು ಎಳೆದುಕೊಂಡು ನಗು ಬೀರುತ್ತಾ ಮುಂದೆ ಸಾಗುತ್ತಾರೆ. ನಂತರ ಚಹಾಲ್ ಹಿಂದೆ ಬರುತ್ತಿದ್ದ ಚಹಾಲ್ ಪತ್ನಿ ಧನಶ್ರೀ ಅತ್ತ (Dhanashree Verma) ಕ್ಯಾಮರಾ ತಿರುಗಿಸಿದ ಶಿಖರ್, ಏಕೆ ಚಹಾಲ್‌ಗೇಕೆ ಹೆಚ್ಚಿನ ಬ್ಯಾಗ್‌ಗಳ ಹೊರೆ ಎಂದು ಆಕೆಯ ಬಳಿ ಪ್ರಶ್ನಿಸಿದ್ದಾರೆ. 

ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಚಹಾಲ್ ಪತ್ನಿ ನನಗೆ ಸ್ವಲ್ಪ ಕಾಲು ನೋವಿದೆ. ಹೀಗಾಗಿ ನನ್ನ ಕೆಲ ಲಗೇಜ್‌ಗಳನ್ನು ಅವರು ಸಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಮೂರು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, 7 ಲಕ್ಷಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ.  ನಾವು ನಮ್ಮಂತ ಮಧ್ಯಮವರ್ಗದ ಜನ ಮಾತ್ರ ಹೆಂಡತಿ ಬ್ಯಾಗನ್ನು ಹೊತ್ತುಕೊಂಡು ಹೋಗುವುದು ಎಂದು ಭಾವಿಸಿದೆವು. ಆದರೆ ಈಗ ನೋಡಿದರೆ ಕ್ರಿಕೆಟರ್‌ಗಳ ಸ್ಥಿತಿಯೂ ನಮ್ಮದೇ ಕತೆಯಾಗಿದೆ ಎಂದು ನೊಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲಿ ಹೇಡಿಗಳಿಲ್ಲ: ಕಾಂಗರೂ ನಾಯಕ ಪ್ಯಾಟ್ ಕಮಿನ್ಸ್‌ ಹೀಗಂದಿದ್ದೇಕೆ..?


ಈ ನಡುವೆ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ತಂಡಕ್ಕೆ ನಾಳೆ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ  ನ್ಯೂಜಿಲೆಂಡ್ (New Zealand) ವಿರುದ್ಧ ನಡೆಯಲಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಮಾಡು ಇಲ್ಲವೇ ಮಾಡಿ ಎಂಬಂತಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯವು ನಾಳೆ ಆರಂಭವಾಗಲಿದ್ದು, ಟೀಂ ಇಂಡಿಯಾ ಪಾಲಿಗೆ ಸರಣಿ ಸಮಬಲ ಸಾಧಿಸುವ ದೃಷ್ಟಿಯಿಂದ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾ, ಸರಣಿ ಸಮಬಲ ಸಾಧಿಸಬೇಕಿದ್ದರೇ ಕೊನೆಯ ಪಂದ್ಯದಲ್ಲಿ ಗೆಲ್ಲಬೇಕಿದೆ. ಹೀಗಾಗಿ ಟೀಂ ಇಂಡಿಯಾ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

Ind vs NZ 3rd ODI: ಮೂರನೇ ಪಂದ್ಯಕ್ಕೆ ಸಂಜು ಸ್ಯಾಮ್ಸನ್‌ಗೆ ಸಿಗುತ್ತಾ ಸ್ಥಾನ?

ಮೊದಲ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಸೋಲು ಕಂಡಿತ್ತು. ಎರಡನೇ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಲಾಗಿತ್ತು. 2ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ಶಾರ್ದೂಲ್ ಠಾಕೂರ್ (Shardul Thakur) ಅವರಿಗಿಂತ ದೀಪಕ್ ಹೂಡಾ (Deepak Hooda) ಮತ್ತು ದೀಪಕ್ ಚಹಾರ್ (Deepak Chahar) ಅವರಿಗೆ ಆದ್ಯತೆ ನೀಡಲಾಗಿತ್ತು. ಈಗ ಮೂರನೇ ಪಂದ್ಯದ ವೇಳೆ ಮಳೆಯ ಮುನ್ಸೂಚನೆಯೂ ಇದ್ದು, ಹೀಗಾಗಿ ಭಾರತ ತಂಡದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು.
 

Follow Us:
Download App:
  • android
  • ios