ಕ್ರೈಸ್ಟ್‌ ಚರ್ಚ್‌(ಜ.05): ನ್ಯೂಜಿಲೆಂಡ್‌ ತಂಡದ ಕೂಲ್‌ ಕ್ಯಾಪ್ಟನ್‌ ಕೇನ್‌ ವಿಲಿಯಮ್ಸನ್‌ ಪಾಕಿಸ್ತಾನ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮತ್ತೊಂದು ಆಕರ್ಷಕ ದ್ವಿಶತಕ ಬಾರಿಸಿದ್ದಾರೆ. ಈ ಮೂಲಕ ಸತತ ಎರಡು ಟೆಸ್ಟ್‌ ಪಂದ್ಯಗಳಲ್ಲಿ 2 ದ್ವಿಶತಕ ಬಾರಿಸುವ ಮೂಲಕ ಮಿಂಚಿದ್ದಾರೆ.

ಹೌದು, ಪಾಕಿಸ್ತಾನ ವಿರುದ್ದದ ಮೊದಲ ಪಂದ್ಯದಲ್ಲಿ ವೃತ್ತಿಜೀವನದ ಗರಿಷ್ಠ(251) ರನ್ ಬಾರಿಸಿ ಮಿಂಚಿದ್ದ ಕೇನ್‌ ವಿಲಿಯಮ್ಸನ್‌ ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲೂ ತಮ್ಮ ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಬರೋಬ್ಬರಿ 327 ಎಸೆತಗಳನ್ನು ಎದುರಿಸಿ ಇನ್ನೂರು ರನ್‌ ಪೂರೈಸಿದ್ದಾರೆ. ಈ ಭರ್ಜರಿ ಇನಿಂಗ್ಸ್‌ನಲ್ಲಿ ವಿಲಿಯಮ್ಸನ್‌ ಆಕರ್ಷಕ 23 ಇನಿಂಗ್ಸ್‌ಗಳು ಸೇರಿದ್ದವು. ಅಂತಿಮವಾಗಿ ಕೇನ್‌ ವಿಲಿಯಮ್ಸನ್‌ 364 ಎಸೆತಗಳನ್ನು ಎದುರಿಸಿ 28 ಬೌಂಡರಿ ಸಹಿತ 238 ರನ್ ಬಾರಿಸಿ ಫಾಹಿಮ್ ಅಶ್ರಫ್‌ಗೆ ವಿಕೆಟ್‌ ಒಪ್ಪಿಸಿದರು.

ಯುವ ಪೀಳಿಗೆಯ ಕ್ರಿಕೆಟಿಗರಿಗೆ ವಿಲಿಯಮ್ಸನ್‌ ನಿಜವಾದ ರೋಲ್‌ ಮಾಡೆಲ್‌: ವಿವಿಎಸ್‌ ಲಕ್ಷ್ಮಣ್‌

4ನೇ ದ್ವಿಶತಕ ಬಾರಿಸಿ ಮೆಕ್ಕಲಂ ದಾಖಲೆ ಸರಿಗಟ್ಟಿದ ವಿಲಿಯಮ್ಸನ್‌: ಕೇನ್‌ ವಿಲಿಯಮ್ಸನ್‌ ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ದ್ವಿಶತಕ ಬಾರಿಸುವ ಮೂಲಕ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್‌ ಮೆಕ್ಕಲಂ ದಾಖಲೆ ಸರಿಗಟ್ಟಿದ್ದಾರೆ. ಇಲ್ಲಿಯವರೆಗೂ ನ್ಯೂಜಿಲೆಂಡ್‌ ಪರ ಗರಿಷ್ಠ ದ್ವಿಶತಕ ಬಾರಿಸಿದ ದಾಖಲೆ ಸ್ಫೋಟಕ ಬ್ಯಾಟ್ಸ್‌ಮನ್‌ ಬ್ರೆಂಡನ್‌ ಮೆಕ್ಕಲಂ ಅವರ ಹೆಸರಿನಲ್ಲಿತ್ತು. ಇದೀಗ ವಿಲಿಯಮ್ಸನ್‌ ಆ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪಾಕಿಸ್ತಾನ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಬಾರಿಸುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು.