ಹೈದ್ರಾಬಾದ್‌(ಜ.04): ಪಾಕಿಸ್ತಾನ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ ನ್ಯೂಜಿಲೆಂಡ್‌  ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಯುವ ಪೀಳಿಗೆಯ ಆಟಗಾರರಿಗೆ ನಿಜವಾದ ರೋಲ್ ಮಾಡೆಲ್ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೊಂಡಾಡಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಕೇನ್‌ ವಿಲಿಯಮ್ಸನ್‌ ಅಜೇಯ 112 ರನ್‌ ಬಾರಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ. ಇದೀಗ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್‌ ವಿಲಿಯಮ್ಸನ್‌ ಆಟವನ್ನು ವಿವಿಎಸ್‌ ಲಕ್ಷ್ಮಣ್‌ ಗುಣಗಾನ ಮಾಡಿದ್ದಾರೆ.

ಕೇನ್‌ ವಿಲಿಯಮ್ಸನ್‌ ಸ್ಥಿರ ಪ್ರದರ್ಶನದ ಬಗ್ಗೆ ನನಗೇನು ಅಚ್ಚರಿಯಾಗಿಲ್ಲ. ಪ್ರತಿ ಪಂದ್ಯಕ್ಕೂ ಮುನ್ನ ಆತ ಮಾಡಿಕೊಳ್ಳುವ ಸಿದ್ಧತೆಯ ಫಲಿತಾಂಶವೇ ಇದು. ಯುವ ಕ್ರಿಕೆಟಿಗರಿಗೆ ವಿಲಿಯಮ್ಸನ್‌ ನಿಜವಾದ ರೋಲ್‌ ಮಾಡೆಲ್‌ ಎಂದು ಲಕ್ಷ್ಮಣ್ ಎಂದು ಟ್ವೀಟ್‌ ಮಾಡಿದ್ದಾರೆ.

ವರ್ಷದ ಮೊದಲ ಶತಕ ಬಾರಿಸಿದ ವಿಲಿಯಮ್ಸನ್‌; ಬೃಹತ್‌ ಮೊತ್ತದತ್ತ ಕಿವೀಸ್‌

ವರ್ಷದ ಮೊದಲ ಶತಕ ಬಾರಿಸಿದ ವಿಲಿಯಮ್ಸನ್‌; ಬೃಹತ್‌ ಮೊತ್ತದತ್ತ ಕಿವೀಸ್‌

ಪಾಕಿಸ್ತಾನ ವಿರುದ್ದದ ಮೊದಲ ಪಂದ್ಯದಲ್ಲಿ ವೃತ್ತಿಜೀವನದ ಗರಿಷ್ಠ(251) ರನ್ ಬಾರಿಸಿದ್ದರು. ಈ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್‌ ತಂಡವು ಮೊದಲ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 129 ರನ್‌ಗಳ ಗೆಲುವು ದಾಖಲಿಸಿತ್ತು. ಈ ಅಮೋಘ ಪ್ರದರ್ಶನದ ನೆರವಿನಿಂದ ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಕೇನ್ ವಿಲಿಯಮ್ಸನ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.