Asianet Suvarna News Asianet Suvarna News

ಮಹಾರಾಜ ಟಿ20 ಟ್ರೋಫಿ: ಕರ್ನಾಟಕ ಕ್ರಿಕೆಟ್‌ನಲ್ಲಿ ಕನ್ನಡಕ್ಕಿಲ್ಲ ಬೆಲೆ, ಕೆಎಸ್‌ಸಿಎ ಆವರಣದಲ್ಲೇ ಕನ್ನಡದ ಕಗ್ಗೊಲೆ!

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡಕ್ಕಿಲ್ಲ ಅವಕಾಶ..?
ಕೆಎಸ್‌ಸಿಎ ಮಹಾರಾಜ ಟಿ20 ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಕನ್ನಡ ನಾಪತ್ತೆ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ

No Place for Kannada in Bengaluru Maharaja T20 Trophy 2023 trophy unveil programme kvn
Author
First Published Aug 11, 2023, 9:48 AM IST

ಬೆಂಗಳೂರು(ಆ.11): ಒಂದೆಡೆ ಭಾರತ ತಂಡದಲ್ಲಿ ಕರ್ನಾಟಕ ಆಟಗಾರರ ಸಂಖ್ಯೆ ಕ್ಷೀಣಿಸುತ್ತಿದೆ. ಮತ್ತೊಂದೆಡೆ ರಾಜ್ಯ ಕ್ರಿಕೆಟ್‌ನಲ್ಲಿ ಹೊರಗಿನವರ ಪ್ರಾಬಲ್ಯ ಹೆಚ್ಚುತ್ತಿದೆ ಎನ್ನುವ ಆರೋಪಗಳೂ ಇವೆ. ಈ ನಡುವೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯು ಕನ್ನಡ ಭಾಷೆಯನ್ನು ದಿನೇದಿನೇ ಕಡೆಗಣಿಸುತ್ತಿರುವ ಆಘಾತಕಾರಿ ಬೆಳವಣೆಗೆಯೂ ನಡೆಯುತ್ತಿದೆ.

ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2023ರ ಮಹಾರಾಜ ಟಿ20 ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಕೆಎಸ್‌ಸಿಎ ಆಯೋಜಿಸಿತ್ತು. ಆದರೆ ಕಾರ್ಯಕ್ರಮದಲ್ಲಿ ಒಂದಕ್ಷರ ಕನ್ನಡ ಇರಲಿಲ್ಲ. ಇಡೀ ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ಪದಾಧಿಕಾರಿಗಳು ಇಂಗ್ಲಿಷ್‌ನಲ್ಲೇ ಮಾತನಾಡಿದರು. ವೇದಿಕೆಯ ಹಿಂದೆ ಇದ್ದ ಪರದೇಯಲ್ಲೂ ಬರೀ ಇಂಗ್ಲಿಷ್‌ ಇತ್ತು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ ಮೇಲೆ ಕೆಎಸ್‌ಸಿಎ ಉಪಾಧ್ಯಕ್ಷ ಹಾಗೂ ಮಹಾರಾಜ ಟ್ರೋಫಿಯ ಮುಖ್ಯಸ್ಥ ಬಿ.ಕೆ.ಸಂಪತ್‌ ಕುಮಾರ್‌ಗೆ ಪರದೆ ಮೇಲೆ ಕನ್ನಡ ಅಕ್ಷರಗಳಿಲ್ಲ ಎನ್ನುವುದು ಅರಿವಿಗೆ ಬಂತು. 

ವಿಶ್ವಕಪ್‌ಗೂ ಮುನ್ನ ಗುಡ್‌ ನ್ಯೂಸ್: ಕೊನೆಗೂ ಕೋಚ್ ದ್ರಾವಿಡ್ ಪ್ರಯೋಗಕ್ಕೆ ಸಿಕ್ಕಿತು ಫಲ..!

ಬಳಿಕ ಉಡಾಫೆಯಿಂದಲೇ ಉತ್ತರಿಸಿದ ಅವರು, ‘ಬೆಂಗಳೂರಲ್ಲಿ ಬೇರೆ ಬೇರೆ ಭಾಷೆಯವರೂ ಇದ್ದಾರೆ. ಹೀಗಾಗಿ ಎಲ್ಲಾ ಭಾಷೆಯನ್ನು ಬಳಕೆ ಮಾಡಬೇಕಾಗುತ್ತದೆ’ ಎಂದರು. ಕೆಎಸ್‌ಸಿಎ ಅಧ್ಯಕ್ಷ, ಕರ್ನಾಟಕದ ಮಾಜಿ ಕ್ರಿಕೆಟಿಗ ರಘುರಾಮ್‌ ಭಟ್‌ ಪ್ರತಿಕ್ರಿಯಿಸುವ ಗೋಜಿಗೇ ಹೋಗಲಿಲ್ಲ. ಇನ್ನು ಕರ್ನಾಟಕದಲ್ಲಿ ರಾಜ್ಯ ಕ್ರಿಕೆಟಿಗರಿಗಾಗಿ ಆಯೋಜನೆಗೊಳ್ಳುತ್ತಿರುವ ಟೂರ್ನಿಯ ಟ್ರೋಫಿ ಮೇಲೆ ಇಂಗ್ಲಿಷ್‌ನಲ್ಲಿ ‘ಮಹಾರಾಜ ಟ್ರೋಫಿ ಟಿ20’ ಎಂದು ಬರೆಯಲಾಗಿದೆ. ಇದಕ್ಕೂ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ.

ಇನ್ನು ಟೂರ್ನಿಯಲ್ಲಿ ಆಡಲಿರುವ ಆಟಗಾರರ ಕಿರು ಸಂದರ್ಶನದ ವಿಡಿಯೋಗಳನ್ನು ಫ್ರಾಂಚೈಸಿಗಳು ತಮ್ಮ ತಮ್ಮ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಹಾಕುತ್ತಿವೆ. ಅದರಲ್ಲೂ ಯಾವ ಆಟಗಾರರೂ ಕನ್ನಡದಲ್ಲಿ ಮಾತನಾಡದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಹಲವು ದಿನಗಳಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಕನ್ನಡದ ಬಗ್ಗೆ ಧೋರಣೆಗೆ ಅಭಿಮಾನಿಗಳು ಹಿಡಿ ಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ‘ಅದು ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರ. ಕೆಎಸ್‌ಸಿಎಗೂ ಅದಕ್ಕೂ ಸಂಬಂಧವಿಲ್ಲ’ ಎನ್ನುವ ಉತ್ತರ ದೊರೆಯಿತು.

ಯುವ ಕ್ರಿಕೆಟಿಗ ತಿಲಕ್‌ ವರ್ಮಾ ಫಿಫ್ಟಿ ತಪ್ಪಿಸಿದ ಸ್ವಾರ್ಥಿ ಪಾಂಡ್ಯ..! ಧೋನಿ ನೋಡಿ ಕಲಿಯಿರಿ ಎಂದ ಫ್ಯಾನ್ಸ್

ಮಹಾರಾಜ ಟಿ20 ಟ್ರೋಫಿ ಅನಾವರಣ

ಬೆಂಗಳೂರು: ಆ.13ರಿಂದ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ‌ಎಸ್‌ಸಿಎ) ಆಯೋಜಿಸುವ ಮಹಾರಾಜ ಟಿ20 ಲೀಗ್‌ನ ಟ್ರೋಫಿಯನ್ನು ಗುರುವಾರ ದಿಗ್ಗಜ ಕ್ರಿಕೆಟಿಗ ಜಿ.ಆರ್‌.ವಿಶ್ವನಾಥ್‌ ಅನಾವರಣಗೊಳಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟಿಗರಾದ ಮಯಾಂಕ್ ಅಗರ್‌ವಾಲ್, ಕರುಣ್ ನಾಯರ್, ವೈಶಾಖ್ ವಿಜಯ್‌ಕುಮಾರ್‌, ಶ್ರೇಯಸ್ ಗೋಪಾಲ್, ಕೆ‌ಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಉಪಾಧ್ಯಕ್ಷ ಸಂಪತ್ ಕುಮಾರ್, ತಂಡಗಳ ಮಾಲಿಕರು ಉಪಸ್ಥಿತರಿದ್ದರು.

Follow Us:
Download App:
  • android
  • ios