ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೆ ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ಅಲ್ಲ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದ ಹೆಡ್ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾರ್ಯನಿರ್ವಹಿಸಲಿದ್ದಾರೆ. ಯಾಕೆ ಹೀಗೆ? ತಿಳಿಯೋಣ ಬನ್ನಿ

No Gautam Gambhir VVS Laxman to be India Head Coach in South Africa Tour kvn

ನವದೆಹಲಿ: ನ.8ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ ಹಂಗಾಮಿ ಕೋಚ್‌ ಆಗಿ ನೇಮಕಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯ ಕೋಚಿಂಗ್‌ ಸಿಬ್ಬಂದಿಗಳೂ ಲಕ್ಷ್ಮಣ್‌ ಜೊತೆ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ. 

ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ನ.22ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧ ಸರಣಿಗಾಗಿ ಭಾರತ ತಂಡದ ಜೊತೆಗಿರಲಿದ್ದಾರೆ. ಹೀಗಾಗಿ ದ.ಆಫ್ರಿಕಾ ಸರಣಿಗೆ ಬಿಸಿಸಿಐ ಲಕ್ಷ್ಮಣ್‌ರನ್ನು ಕೋಚ್‌ ಆಗಿ ನೇಮಿಸಲಿದೆ ಎಂದು ಗೊತ್ತಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ20 ಸರಣಿಯು ಕ್ರಮವಾಗಿ ನ.8, 10, 13 ಮತ್ತು 15ಕ್ಕೆ ನಡೆಯಲಿವೆ.

ಮುಂಬೈ ಟೆಸ್ಟ್ ಪಂದ್ಯಕ್ಕೂ ಮುನ್ನ ಕಿವೀಸ್‌ ತಂಡಕ್ಕೆ ಶಾಕ್; ಸ್ಟಾರ್ ಬ್ಯಾಟರ್ ಔಟ್!

ದ.ಆಫ್ರಿಕಾ ವಿರುದ್ಧ ಟಿ20 ಸರಣಿಗೆ ತಂಡ: 

ಸೂರ್ಯಕುಮಾರ್‌ (ನಾಯಕ), ಅಭಿಷೇಕ್‌ ಶರ್ಮಾ, ಸ್ಯಾಮ್ಸನ್‌, ರಿಂಕು ಸಿಂಗ್‌, ತಿಲಕ್‌ ವರ್ಮಾ, ಜಿತೇಶ್ ಶರ್ಮಾ, ಹಾರ್ದಿಕ್‌, ಅಕ್ಷರ್‌, ರಮಣ್‌ದೀಪ್‌, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯ್‌, ಅರ್ಶ್‌ದೀಪ್‌, ವೈಶಾಖ್‌ ವಿಜಯ್‌ಕುಮಾರ್‌, ಆವೇಶ್‌ ಖಾನ್‌, ಯಶ್‌ ದಯಾಳ್‌.

ಸಿ.ಕೆ.ನಾಯ್ಡು ಕಪ್‌: ಮೊದಲ ಇನ್ನಿಂಗ್ಸ್‌ ಲೀಡ್‌ನತ್ತ ರಾಜ್ಯ

ಬೆಂಗಳೂರು: ಸಿ.ಕೆ.ನಾಯ್ಡು ಕಿರಿಯರ ಕ್ರಿಕೆಟ್‌ ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಮಹಾರಾಷ್ಟ್ರ 263 ರನ್‌ಗೆ ಆಲೌಟಾಯಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ರಾಜ್ಯ ತಂಡ 2ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 242 ರನ್‌ ಗಳಿಸಿದ್ದು, ಕೇವಲ 21 ರನ್‌ ಹಿನ್ನಡೆಯಲ್ಲಿದೆ. ಪ್ರಖರ್‌ ಚತುರ್ವೇದಿ ಔಟಾಗದೆ 108 ರನ್‌ ಗಳಿಸಿದ್ದಾರೆ.

ಫಾರ್ಮ್ ಕಂಡುಕೊಳ್ಳಲು ವಿರಾಟ್ ಕೊಹ್ಲಿ ಮೊದಲು ದೇಶಿ ಕ್ರಿಕೆಟ್ ಆಡಲಿ: ಆರ್‌ಸಿಬಿ ಮಾಜಿ ಕ್ರಿಕೆಟಿಗನ ಆಗ್ರಹ

ರಾಷ್ಟ್ರೀಯ ಮಹಿಳಾ ಟಿ20: ನಾಕೌಟ್‌ಗೇರದ ಕರ್ನಾಟಕ

ಕೋಲ್ಕತಾ: ರಾಷ್ಟ್ರೀಯ ಹಿರಿಯ ಮಹಿಳೆಯರ ಟಿ20 ಟೂರ್ನಿಯಲ್ಲಿ ಕರ್ನಾಟಕದ ನಾಕೌಟ್‌ ಕನಸು ಭಗ್ನಗೊಂಡಿದೆ. ಸೋಮವಾರ ‘ಬಿ’ ಗುಂಪಿನ ಕೊನೆ ಪಂದ್ಯದಲ್ಲಿ ರಾಜ್ಯ ತಂಡ, ಮಹಾರಾಷ್ಟ್ರ ವಿರುದ್ಧ 69 ರನ್‌ ಜಯಗಳಿಸಿತು. ಇದರ ಹೊರತಾಗಿಯೂ ತಂಡ ಪಟ್ಟಿಯಲ್ಲಿ 7 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ 20 ಅಂಕ ಗಳಿಸಿ 3ನೇ ಸ್ಥಾನ ಪಡೆಯಿತು. 4 ಪಂದ್ಯಗಳು ಮಳೆಯಿಂದ ರದ್ದಾಗಿದ್ದು ಕರ್ನಾಟಕದ ನಾಕೌಟ್‌ ಕನಸಿಗೆ ಅಡ್ಡಿಯಾಯಿತು. ಸೋಮವಾರ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 5 ವಿಕೆಟ್‌ಗೆ 112 ರನ್‌ ಗಳಿಸಿತು. ಮಹಾರಾಷ್ಟ್ರ 20 ಓವರಲ್ಲಿ 8 ವಿಕೆಟ್‌ಗೆ 43 ರನ್‌ ಗಳಿಸಲಷ್ಟೇ ಶಕ್ತವಾಯಿತು.
 

Latest Videos
Follow Us:
Download App:
  • android
  • ios