ಮೌಂಟ್‌ ಮಾಂಗನ್ಯುಯಿ(ನ.30): ಯುವ ಬ್ಯಾಟ್ಸ್‌ಮನ್‌ ಗ್ಲೆನ್‌ ಫಿಲಿಫ್ಸ್‌ ಸಿಡಿಸಿದ ವೇಗದ ಶತಕದ ನೆರವಿನಿಂದ ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌ ವಿರುದ್ಧ ಭಾನುವಾರ ಇಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 72 ರನ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ ನ್ಯೂಜಿಲೆಂಡ್‌ 3 ಪಂದ್ಯಗಳ ಸರಣಿಯನ್ನು 2-0 ಗೆದ್ದುಕೊಂಡಿದೆ. 

ಸರಣಿಯ ಮೊದಲ ಪಂದ್ಯದಲ್ಲಿ ಡಕ್‌ವರ್ತ್ ಲೂಯಿಸ್‌ ನಿಯಮದಡಿ ಕಿವೀಸ್‌ 5 ವಿಕೆಟ್‌ಗಳ ಗೆಲುವು ಪಡೆದಿತ್ತು. ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 3 ವಿಕೆಟ್‌ಗೆ 238 ರನ್‌ಗಳಿಸಿತು. ಇದಕ್ಕುತ್ತರವಾಗಿ ವಿಂಡೀಸ್‌ 9 ವಿಕೆಟ್‌ಗೆ 166 ರನ್‌ಗಳಿಸಿ ಸೋಲೊಪ್ಪಿತು.

ಭಾರತಕ್ಕೆ ಮತ್ತೊಂದು ಸೋಲು; ಏಕದಿನ ಸರಣಿ ಆಸೀಸ್ ಪಾಲು

ಫಿಲಿಫ್ಸ್‌ ವೇಗದ ಶತಕ: ಕಿವೀಸ್‌ನ ಫಿಲಿಫ್ಸ್‌ 46 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ನ್ಯೂಜಿಲೆಂಡ್‌ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಅತಿ ವೇಗದ ಶತಕವಾಗಿದೆ. ವಿಶ್ವ ಕ್ರಿಕೆಟ್‌ನಲ್ಲಿ 10ನೇ ಅತ್ಯಂತ ವೇಗದ ಶತಕ ಎನಿಸಿಕೊಂಡಿದೆ.

ಸ್ಕೋರ್‌: ನ್ಯೂಜಿಲೆಂಡ್‌ 238/3
ವಿಂಡೀಸ್‌ 166/9