Asianet Suvarna News Asianet Suvarna News

Women's Cricket ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬಾಂಬ್‌ ಬೆದರಿಕೆ..!

* ಇಂಗ್ಲೆಂಡ್ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬಾಂಬ್ ಬೆದರಿಕೆ

* ಮುಂಜಾಗ್ರತಾ ಕ್ರಮವಾಗಿ ನ್ಯೂಜಿಲೆಂಡ್ ತಂಡಕ್ಕೆ ಭದ್ರತೆ ಹೆಚ್ಚಿಸಲಾಗಿದೆ

* ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಇಬ್ಬಗೆಯ ನೀತಿಗೆ ಪಿಸಿಬಿ ಟೀಕೆ

New Zealand womens cricket team receives bomb threat in England kvn
Author
London, First Published Sep 22, 2021, 12:35 PM IST

ಲಂಡನ್(ಸೆ.22)‌: ಭದ್ರತಾ ಕಾರಣ ನೀಡಿ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನ ಪ್ರವಾಸ(Pakistan Tour) ರದ್ದುಗೊಳಿಸಿದ ಬೆನ್ನಲ್ಲೇ, ಇಂಗ್ಲೆಂಡ್‌ ಪ್ರವಾಸದಲ್ಲಿರುವ ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌(Women's Cricket) ತಂಡಕ್ಕೆ ಬಾಂಬ್‌ ಬೆದರಿಕೆ ಬಂದಿದೆ. ಆದರೂ ಸರಣಿಯನ್ನು ಮುಂದುವರಿಸುವುದಾಗಿ ನ್ಯೂಜಿಲೆಂಡ್‌ ಕ್ರಿಕೆಟ್‌ ತಿಳಿಸಿದೆ. 

‘ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ನಮ್ಮ ಮಹಿಳಾ ತಂಡಕ್ಕೆ ಬಂದ ಬಾಂಬ್‌ ಬೆದರಿಕೆ(Bomb Threat) ಕರೆಯನ್ನು ಸ್ವೀಕರಿಸಿದೆ. ಈ ಬಗ್ಗೆ ತನಿಖೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ತಂಡಕ್ಕೆ ಭದ್ರತೆ ಹೆಚ್ಚಿಸಲಾಗಿದೆ’ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ಮಾಹಿತಿ ನೀಡಿದೆ. 

ಬಾಂಬ್‌ ಬೆದರಿಕೆ ನಡುವೆಯೂ ಸರಣಿ ಮುಂದುವರಿಸುವ ಕಿವೀಸ್‌ ನಿರ್ಧಾರಕ್ಕೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಆಕ್ರೋಶ ವ್ಯಕ್ತಪಡಿಸಿದೆ. ‘ಭದ್ರತೆಯ ಕಾರಣ ನೀಡಿ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿತು. ಈಗ ನ್ಯೂಜಿಲೆಂಡ್‌ ಮಹಿಳಾ ತಂಡಕ್ಕೆ ಬಾಂಬ್‌ ಬೆದರಿಕೆ ಬಂದರೂ ಸರಣಿ ಮುಂದುವರಿಯುತ್ತಿದೆ. ಇದು ದ್ವಿಮುಖ ನೀತಿ ಅಲ್ಲದೆ ಬೇರೇನೂ ಅಲ್ಲ’ ಎಂದು ಟೀಕಿಸಿದೆ.

Team India ಜತೆ ಕಿವೀಸ್‌, ಇಂಗ್ಲೆಂಡ್ ಕೂಡಾ ನಮ್ಮ ವೈರಿ: ಪಾಕಿಸ್ತಾನ..!

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್‌ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವು 3 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌ ಗೆಲುವಿನ ಖಾತೆ ತೆರೆಯುವುದರೊಂದಿಗೆ ಸರಣಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿತ್ತು. ಇನ್ನು ಇದಕ್ಕೂ ಮೊದಲು ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು ಪ್ರವಾಸಿ ಇಂಗ್ಲೆಂಡ್ ಮಹಿಳಾ ತಂಡವು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು.
 

Follow Us:
Download App:
  • android
  • ios