Asianet Suvarna News Asianet Suvarna News

ಬಾಂಗ್ಲಾ ವಿರುದ್ಧ ಕಿವೀಸ್‌ ಏಕದಿನ ಸರಣಿ ಕ್ಲೀನ್‌ ಸ್ವೀಪ್‌

ಬಾಂಗ್ಲಾದೇಶ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ಕ್ಲೀನ್ ಸ್ವೀಪ್‌ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

New Zealand win 3rd ODI by 164 runs Clean sweep ODI series kvn
Author
Wellington, First Published Mar 27, 2021, 9:04 AM IST

ವೆಲ್ಲಿಂಗ್ಟನ್(ಮಾ.27)‌: ಬಾಂಗ್ಲಾದೇಶ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 164 ರನ್‌ ಗೆಲುವು ಸಾಧಿಸಿದ ನ್ಯೂಜಿಲೆಂಡ್‌ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. 

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌, ಕಾನ್‌ವೇ(126) ಹಾಗೂ ಮಿಚೆಲ್‌(100) ಶತಕಗಳ ನೆರವಿನಿಂದ 318 ರನ್‌ ಗಳಿಸಿತು. ಬಾಂಗ್ಲಾ 43ನೇ ಓವರಲ್ಲಿ 154 ರನ್‌ಗೆ ಆಲೌಟ್‌ ಆಯಿತು. ನ್ಯೂಜಿಲೆಂಡ್ ಪರ ಜೇಮ್ಸ್ ನೀಶಮ್‌ 5 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 4 ಹಾಗೂ ಕೈಲ್ ಜೇಮಿಸನ್ 1 ವಿಕೆಟ್ ಪಡೆದರು

ಸ್ಕೋರ್‌: 
ನ್ಯೂಜಿಲೆಂಡ್‌ 318/6 
ಬಾಂಗ್ಲಾ 154/10

ವಿಂಡೀಸ್‌-ಲಂಕಾ ಮೊದಲ ಟೆಸ್ಟ್‌ ಡ್ರಾನಲ್ಲಿ ಮುಕ್ತಾಯ

ನಾಥ್‌ರ್‍ಸೌಂಡ್‌: ಎನ್‌ಕ್ರುಮಾ ಬೋನ್ನರ್‌(113)ರ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಡ್ರಾ ಸಾಧಿಸುವಲ್ಲಿ ವೆಸ್ಟ್‌ಇಂಡೀಸ್‌ ಯಶಸ್ವಿಯಾಗಿದೆ. ಗೆಲುವಿಗೆ 375 ರನ್‌ ಗುರಿ ಬೆನ್ನತ್ತಿದ್ದ ವಿಂಡೀಸ್‌, 4 ವಿಕೆಟ್‌ಗೆ 236 ರನ್‌ ಗಳಿಸಿ ಸೋಲಿನಿಂದ ತಪ್ಪಿಸಿಕೊಂಡಿತು. 

2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ, ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್!

ಮೊದಲು ಬ್ಯಾಟ್‌ ಮಾಡಿದ್ದ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ ಕೇವಲ 169 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ವೆಸ್ಟ್ ಇಂಡೀಸ್‌ ಕಾರ್ನವೆಲ್ ಆಕರ್ಷಕ ಅರ್ಧಶತಕದ ನೆರವಿನಿಂದ 271 ರನ್‌ ಬಾರಿಸಿತ್ತು. ಇನ್ನು ಮೊದಲ ಇನಿಂಗ್ಸ್‌ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಶ್ರೀಲಂಕಾ ಪತುಮ್ ನಿಶಾಕಾ ಸಮಯೋಚಿತ ಶತಕ ಹಾಗೂ ಒಶಾಡೊ ಫರ್ನಾಂಡೊ(91), ಡಿಕ್‌ವೆಲ್ಲಾ(96) ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ 476 ರನ್‌ ಕಲೆಹಾಕಿತ್ತು

2 ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಕುತೂಹಲ ಕೆರಳಿಸಿದೆ. ಎರಡನೇ ಟೆಸ್ಟ್ ಪಂದ್ಯ ಮಾರ್ಚ್‌ 29ರಿಂದ ಆರಂಭವಾಗಲಿದೆ.

ಸ್ಕೋರ್‌: 
ಲಂಕಾ 169 ಹಾಗೂ 476, 
ವಿಂಡೀಸ್‌ 271 ಹಾಗೂ 236/4
 

Follow Us:
Download App:
  • android
  • ios