Asianet Suvarna News Asianet Suvarna News

New Zealand vs India: ಸೂರ್ಯ ಸ್ಫೋಟಕ ಶತಕ, ಕಿವೀಸ್‌ಗೆ ಸೋಲಿನ ಸೂತಕ!

ಸೂರ್ಯಕುಮಾರ್‌ ಯಾದವ್‌ ಬಾರಿಸಿದ ಟಿ20 ಮಾದರಿಯ 2ನೇ ಶತಕದ ಸಹಾಯದಿಂದ ಟೀಮ್‌ ಇಂಡಿಯಾ, ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು 2ನೇ ಟಿ20 ಪಂದ್ಯದಲ್ಲಿ 65 ರನ್‌ಗಳಿಂದ ಮಣಿಸಿದೆ. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆಗೇರಿದೆ.
 

New Zealand vs India 2nd T20I Team India won by 65 runs san
Author
First Published Nov 20, 2022, 4:08 PM IST

ಮೌಂಟ್‌ ಮೌಂಗನುಯಿ (ನ.20): ಮಧ್ಯಮ ಕ್ರಮಾಂಕದ ಸ್ಪೋಟಕ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ಬಾರಿಸಿದ 51 ಎಸೆತಗಳ ಅಜೇಯ 111 ರನ್‌ಗಳ ನೆರವಿನಿಂದ ಟೀಮ್ ಇಂಡಿಯಾ ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು 2ನೇ ಟಿ20 ಪಂದ್ಯದಲ್ಲಿ 65 ರನ್‌ಗಳಿಂದ ಮಣಿಸಿದೆ. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್‌ ಇಂಡಿಯಾ 1-0 ಮುನ್ನಡೆ ಕಂಡಿದೆ. ಸರಣಿಯ ಮೊದಲ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಬೇ ಓವಲ್‌ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್‌ ಇಮಡಿಯಾ ಸೂರ್ಯಕುಮಾರ್‌ ಯಾದವ್‌ ಬಾರಿಸಿದ ಹಾಲಿ ವರ್ಷದ 2ನೇ ಟಿ20 ಶತಕದ ನೆರವಿನಿಂದ 6 ವಿಕೆಟ್‌ಗೆ 191 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಪ್ರತಿಯಾಗಿ ನ್ಯೂಜಿಲೆಂಡ್‌ ತಂಡ ಹೋರಾಟ ಕೂಡ ತೋರದೇ ಶರಣಾಯಿತು. ಮೊಹಮದ್‌ ಸಿರಾಜ್‌ (24ಕ್ಕೆ 2) ಹಾಗೂ ಯಜುವೇಂದ್ರ ಚಾಹಲ್‌ (26ಕ್ಕೆ 2) ದಾಳಿಗೆ ಬೆಂಡಾದ ನ್ಯೂಜಿಲೆಂಡ್‌ 18.5 ಓವರ್‌ಗಳಲ್ಲಿ 126 ರನ್‌ ಬಾರಿಸಲಷ್ಟೇ ಯಶಸ್ವಿಯಾಯಿತು. ಉಭಯ ತಂಡಗಳ ನಡುವಿನ ಅಂತಿಮ ಟಿ20 ಪಂದ್ಯ ಮಂಗಳವಾರ ನೇಪಿಯರ್‌ನ ಮೆಕ್‌ಲೀನ್‌ ಪಾರ್ಕ್‌ನಲ್ಲಿ ನಡೆಯಲಿದೆ.

ಚೇಸಿಂಗ್ ಆರಂಭಿಸಿದ ನ್ಯೂಜಿಲೆಂಡ್‌ ತಂಡಕ್ಕೆ ಕಳೆದ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಆಟವಾಡಿದ್ದ ಆರಂಭಿಕ ಫಿನ್‌ ಅಲೆನ್‌ ವಿಕೆಟ್‌ಅನ್ನು 2ನೇ ಎಸೆತದಲ್ಲಿಯೇ ಕಳೆದುಕೊಂಡಿತ್ತು. ಆರಂಭದಲ್ಲಿಯೇ ಎದುರಾದ ಈ ಆಘಾತದ ಬಳಿಕ ನ್ಯೂಜಿಲೆಂಡ್‌ ತಂಡ ಚೇತಿರಿಸಿಕೊಳ್ಳಲಿಲ್ಲ. ಡೆವೋನ್‌ ಕಾನ್ವೆ (25) ಹಾಗೂ ನಾಯಕ ಕೇನ್‌ ವಿಲಿಯಮ್ಸನ್‌ (61) 2ನೇ ವಿಕಟ್‌ಗೆ 56 ರನ್‌ ಜೊತೆಯಾಟವಾಡಿದರೂ, ತಂಡದ ಬ್ಯಾಟಿಂಗ್‌ ನಿಧಾನಗತಿಯಲ್ಲಿತ್ತು. 22 ಎಸೆತಗಳಲ್ಲಿ 25 ರನ್‌ ಬಾರಿಸಿದ ಕಾನ್ವೆಯನ್ನು ವಾಷಿಂಗ್ಟನ್‌ ಸುಂದರ್‌ ಡಗ್‌ಔಟ್‌ಗೆ ಕಳಿಸಿದರೆ, 6 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್‌, ಬೌಂಡರಿಗಳಿದ್ದ 12 ರನ್‌ ಬಾರಿಸಿದ್ದ  ಗ್ಲೆನ್‌ ಫಿಲಿಪ್ಸ್‌, ಚಾಹಲ್‌ ಎಸೆತದಲ್ಲಿ ಬೌಲ್ಡ್‌ ಆದರು.

ಆ ಬಳಿಕ ನ್ಯೂಜಿಲೆಂಡ್‌ ತಂಡದ ಹೋರಾಟ ಹೆಚ್ಚಾಗಿ ಉಳಿಯಲಿಲ್ಲ.ಡೇರಿಲ್‌ ಮಿಚೆಲ್‌ (10) ಅವರೊಂದಿಗೆ ಕೇನ್‌ ವಿಲಿಯಮ್ಸನ್‌ ಕೆಲ ಹೊತ್ತು ಆಡವಾಡಿದರು. ಒಂದು ಹಂತದಲ್ಲಿ 88 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಕಿವೀಸ್‌ 99 ರನ್‌ ಬಾರಿಸುವ ವೇಳೆಗೆ 6 ವಿಕೆಟ್‌ ಕಳೆದುಕೊಂಡಿತು. ಡೇರಿಲ್‌ ಮಿಚೆಲ್‌, ಜಿಮ್ಮಿ ನೀಶಾಮ್‌ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ವಿಕೆಟ್‌ ಕಳೆದುಕೊಂಡಿದ್ದರು. ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದ ನಾಯಕ ಕೇನ್‌ ವಿಲಿಯಮ್ಸನ್‌ 52 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ ಇದ್ದ 61 ರನ್‌ ಬಾರಿಸಿ ಮೊಹಮದ್‌ ಸಿರಾಜ್‌ಗೆ ಔಟಾದರು.  ಆ ಬಳಿಕ ಕಿವೀಸ್‌ ತಂಡದ ಗೆಲುವಿನ ಆಸೆ ಒಂಚೂರು ಉಳಿದುಕೊಂಡಿರಲಿಲ್ಲ.

Another Video Game Innings: ಕಿವೀಸ್‌ ವಿರುದ್ಧ ಸೂರ್ಯನ ಸೆಂಚುರಿಗೆ ವಿರಾಟ್‌ ಕೊಹ್ಲಿ ಫಿದಾ!

4 ವಿಕೆಟ್‌ ಉರುಳಿಸಿದ ದೀಪಕ್‌ ಹೂಡಾ: ಡೇರಿಲ್‌ ಮಿಚೆಲ್‌ ವಿಕೆಟ್‌ ಉರುಳಿಸಿದ್ದ ದೀಪಕ್‌ ಹೂಡಾ, 19ನೇ ಓವರ್‌ನ ದಾಳಿಯಲ್ಲಿ, ಇಶ್‌ ಸೋಧಿ, ಟಿಮ್‌ ಸೌಥಿ ಹಾಗೂ ಆಡಂ ಮಿಲ್ನೆ ವಿಕೆಟ್‌ ಉರುಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಅದರೊಂದಿಗೆ 10 ರನ್‌ಗೆ 4 ವಿಕೆಟ್‌ ಉರುಳಿಸುವ ಮೂಲಕ ಕೂಡ ಗಮನಸೆಳೆದರು.

FIFA World Cup 2022 Prize Money: ಫುಟ್‌ಬಾಲ್‌-ಕ್ರಿಕೆಟ್‌ ವಿಶ್ವಕಪ್‌ ಬಹುಮಾನ ಮೊತ್ತ ಅಜಗಜಾಂತರ!

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ, ಸೂರ್ಯಕುಮಾರ್‌ ಯಾದವ್‌ 51 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 11  ಬೌಂಡರಿಗಳೊಂದಿಗೆ ಸಿಡಿಸಿದ್ದ ಅಜೇಯ 111 ರನ್‌ಗಳ ನೆರವಿನಿಂದ 6 ವಿಕೆಟ್‌ಗೆ 191 ರನ್ ಪೇರಿಸಿತು.ಆರಂಭಿಕ ಆಟಗಾರ ಇಶಾನ್‌ ಕಿಶನ್‌ 31 ಎಸೆತಗಳಲ್ಲಿ 36 ರನ್‌ ಬಾರಿಸಿದರೆ, ರಿಷಭ್‌ ಪಂತ್‌ ಕೇವಲ 6 ರನ್‌ ಬಾರಿಸಿ ನಿರಾಸೆ ಕಂಡರು. ಶ್ರೇಯಸ್‌ ಅಯ್ಯರ್‌ (13), ನಾಯಕ ಹಾರ್ದಿಕ್‌ ಪಾಂಡಯ (13) ಸೂರ್ಯಕುಮಾರ್‌ ಯಾದವ್‌ಗೆ ಉತ್ತಮ ಸಾಥ್‌ ನೀಡಿ ತಂಡದ ದೊಡ್ಡ ಮೊತ್ತಕ್ಕೆ ನೆರವಾದರು.

 

Follow Us:
Download App:
  • android
  • ios