ವೆಲ್ಲಿಂಗ್ಟನ್(ಡಿ.12): ಪಾಕಿಸ್ತಾನ ವಿರುದ್ದ ಡಿಸೆಂಬರ್ 18ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ನ್ಯೂಜಿಲೆಂಡ್‌ ತಂಡ ಪ್ರಕಟವಾಗಿದ್ದು, ಕಿವೀಸ್ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್‌ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಸೊಂಟದ ಬೆನ್ನು ನೋವಿನಿಂದ ಬಳಲುತ್ತಿರುವ ವೇಗಿ ಲಾಕಿ ಫರ್ಗ್ಯೂಸನ್ ಪಾಕ್ ವಿರುದ್ದದ ಚುಟುಕು ಕ್ರಿಕೆಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ.

ಸದ್ಯ ನ್ಯೂಜಿಲೆಂಡ್ ತಂಡ ವೆಸ್ಟ್‌ ಇಂಡೀಸ್ ವಿರುದ್ದ ಎರಡನೇ ಟೆಸ್ಟ್‌ ಪಂದ್ಯ ಆಡುತ್ತಿದೆ. ಈ ಟೆಸ್ಟ್ ಪಂದ್ಯ ಮುಕ್ತಾಯವಾಗಿ ಕೇವಲ 3 ದಿನಗಳ ಅಂತರದಲ್ಲಿ ಪಾಕಿಸ್ತಾನ ವಿರುದ್ದ ಟಿ20 ಸರಣಿಯಾಡಲು ಕಿವೀಸ್ ಪಡೆ ಸಜ್ಜಾಗಬೇಕಿದೆ. ಹೀಗಾಗಿ ನಾಯಕ ಕೇನ್ ವಿಲಿಯಮ್ಸನ್, ಟ್ರೆಂಟ್‌ ಬೌಲ್ಟ್ ಜತೆಗೆ ಟಿಮ್‌ ಸೌಥಿ, ಕೈಲ್‌ ಜ್ಯಾಮಿಸ್ಸನ್ ಮತ್ತು ಡೈರೆಲ್ ಮಿಚೆಲ್‌ಗೆ ಮೊದಲ ಟಿ20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿದ್ದು, ಡಿಸೆಂಬರ್ 20 ಮತ್ತು 22ರಂದು ನಡೆಯಲಿರುವ ಕೊನೆಯ 2 ಟಿ20 ಪಂದ್ಯಗಳಗೆ ಈ ಆಟಗಾರರು ತಂಡ ಕೂಡಿಕೊಳ್ಳಲಿದ್ದಾರೆ.

2ನೇ ಟೆಸ್ಟ್‌: ಕಿವೀಸ್ ಬಿಗಿ ಹಿಡಿತದಲ್ಲಿ ವಿಂಡೀಸ್..!

ಇನ್ನುಳಿದಂತೆ ಲೆಗ್‌ಸ್ಪಿನ್ನರ್ ಟೋಡ್ ಆಶ್ಲೇ ಹಾಗೂ ವೇಗಿ ಬ್ಲೈರ್ ಟಿಕ್ನರ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದು, ಮತ್ತೋರ್ವ ವೇಗಿ ಜಾಕೋಬ್ ಡುಫ್ಪಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಮೊದಲ ಟಿ20 ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಕಿವೀಸ್ ತಂಡವನ್ನು ಮುನ್ನಡೆಸಲಿದ್ದು, ಕೊನೆಯ 2 ಪಂದ್ಯಗಳಲ್ಲಿ ಕೇನ್ ವಿಲಿಯಮ್ಸನ್‌ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಪಾಕಿಸ್ತಾನ ವಿರುದ್ದದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ:

ಮೊದಲ ಟಿ20 ಪಂದ್ಯಕ್ಕೆ: ಮಿಚೆಲ್ ಸ್ಯಾಂಟ್ನರ್(ನಾಯಕ), ಟೋಡ್ ಆಶ್ಲೇ, ಡೌಗ್‌ ಬ್ರಾಸ್‌ವೆಲ್, ಮಾರ್ಕ್ ಚಾಂಪ್ನನ್, ಡೆವೋನ್ ಕಾನ್ವೆ, ಜಾಕೋಬ್ ಡುಫ್ಪಿ, ಮಾರ್ಟಿನ್ ಗಪ್ಟಿಲ್, ಸ್ಕಾಟ್ ಕುಗ್ಗಿಲೆಜಿನ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಫ್ಸ್, ಟಿಮ್ ಸೈಫರ್ಟ್(ವಿಕೆಟ್ ಕೀಪರ್), ಇಶ್ ಸೋಧಿ, ಬ್ಲೈರ್ ಟಕ್ನೆರ್.

ಎರಡನೇ ಟಿ20 ಪಂದ್ಯ: ಕೇನ್ ವಿಲಿಯಮ್ಸನ್(ನಾಯಕ), ಟೋಡ್ ಅಶ್ಲೇ, ಟ್ರೆಂಟ್ ಬೌಲ್ಟ್, ಡೆವೋನ್ ಕಾನ್ವೇ, ಮಾರ್ಟಿನ್ ಗಪ್ಟಿಲ್, ಕೈಲ್ ಜ್ಯಾಮಿಸ್ಸನ್, ಸ್ಕಾಟ್ ಕುಗ್ಗಿಲೆಜೆನ್, ಡೈರೆಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಫ್ಸ್, ಟಿಮ್ ಸೈಫರ್ಟ್(ವಿಕೆಟ್ ಕೀಪರ್), ಇಶ್ ಸೋದಿ, ಟಿಮ್ ಸೌಥಿ.