Asianet Suvarna News Asianet Suvarna News

ಬಿಗ್ ರಿಲೀಫ್: ಫರ್ಗ್ಯೂಸನ್‌ಗೆ ಕೊರೋನಾ ಇಲ್ಲ..!

ಕಿವೀಸ್ ವೇಗಿ ಲೂಕಿ ಫರ್ಗ್ಯೂಸನ್‌ಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಇದೀಗ ಅದರ ರಿಪೋರ್ಟ್ ಬಹಿರಂಗವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

New Zealand fast Bowler Lockie Ferguson Tests Negative For Coronavirus
Author
Sydney NSW, First Published Mar 15, 2020, 1:09 PM IST

ಸಿಡ್ನಿ(ಮಾ.15): ಆಸ್ಪ್ರೇಲಿಯಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್‌ ತಂಡದ ವೇಗಿ ಲೂಕಿ ಫರ್ಗ್ಯೂಸನ್‌ಗೆ ಕೊರೋನಾ ಸೋಂಕು ತಗುಲಿಲ್ಲ ಎನ್ನುವುದು ಪರೀಕ್ಷೆಯ ಬಳಿಕ ಸ್ಪಷ್ಟವಾಗಿದೆ.

ಕಿವೀಸ್ ಮಾರಕ ವೇಗಿಗೂ ಕೊರೋನಾ ವೈರಸ್ ಅಟ್ಯಾಕ್..?

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ಬಳಿಕ ಫರ್ಗ್ಯೂಸನ್, ಗಂಟಲು ಕೆರೆತ, ನೆಗಡಿ, ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಪರೀಕ್ಷೆಗಳ ವರದಿ ಬಂದ ನಂತರ ಸೋಂಕು ತಗಲಿಲ್ಲ ಎನ್ನುವುದು ದೃಢಪಟ್ಟಿತು. 

ಆಸೀಸ್ ಕ್ರಿಕೆಟಿಗ ರಿಚರ್ಡ್ಸನ್‌ಗೆ ಕೊರೋನಾ ಶಂಕೆ, ಕೊಠಡಿಯಲ್ಲಿ ಕೂಡಿಟ್ಟು ಪರೀಕ್ಷೆ!

ಶುಕ್ರವಾರ ಆಸ್ಪ್ರೇಲಿಯಾದ ವೇಗದ ಬೌಲರ್‌ ಕೇನ್‌ ರಿಚರ್ಡ್‌ಸನ್‌ ಸಹ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ತನಿಖೆಯ ಬಳಿಕ ಸೋಂಕು ತಗುಲಿಲ್ಲ ಎನ್ನುವುದು ಖಚಿತವಾಗಿತ್ತು. ಕೊರೋನಾ ವೈರಸ್ ಭೀತಿಯಿಂದಾಗಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಅರ್ಧಕ್ಕೆ ಮೊಟಕುಗೊಂಡಿದೆ. ಸಿಡ್ನಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯಾ ತಂಡವು 71 ರನ್‌ಗಳಿಂದ ಜಯಭೇರಿ ಬಾರಿಸಿತ್ತು. 
 

Follow Us:
Download App:
  • android
  • ios