ಆಸೀಸ್ ಕ್ರಿಕೆಟಿಗ ರಿಚರ್ಡ್ಸನ್‌ಗೆ ಕೊರೋನಾ ಶಂಕೆ, ಕೊಠಡಿಯಲ್ಲಿ ಕೂಡಿಟ್ಟು ಪರೀಕ್ಷೆ!
ಕೊರೋನಾ ವೈರಸ್‌ನಿಂದಾಗಿ ಕ್ರಿಕೆಟ್ ಟೂರ್ನಿಗಳು ರದ್ದಾಗುತ್ತಿದೆ. ಕ್ರೀಡಾಕೂಟಗಳು ಮುಂದೂಲ್ಪಟ್ಟಿದೆ. ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಪ್ರೇಕ್ಷಕರ ಪ್ರವೇಶ ನಿರಾಕರಿಸಿ ಪಂದ್ಯ ಆಯೋಜಿಸಲಾಗಿತ್ತು. ಇದೇ ಪಂದ್ಯದಲ್ಲಿ ಆಸೀಸ್ ಕ್ರಿಕೆಟಿಗ ಕೇನ್ ರಿಚರ್ಡ್ಸನ್ ಮೇಲೆ ಕೊರೋನಾ ಶಂಕೆ ವ್ಯಕ್ತವಾದ ಕಾರಣ ಸಂಕಷ್ಠ ಅನುಭವಿಸಬೇಕಾಯಿತು.
ಸಿಡ್ನಿ(ಮಾ.14): ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕಕದಿನ ಪಂದ್ಯಕ್ಕೆ ಸಜ್ಜಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಕೇನ್ ರಿಚರ್ಡ್ಸನ್‌ಗೆ ಆಘಾತ ಎದುರಾಗಿತ್ತು. ರಿಚರ್ಡ್ಸನ್ ಮೇಲೆ ಕೊರೋನಾ ವೈರಸ್ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಲು ಬಿಡದೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಗಳ ಬಳಿಕ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿತು. ಬಳಿಕ ರಿಚರ್ಡ್‌ಸನ್ ಕ್ರೀಡಾಂಗಣಕ್ಕೆ ಆಗಮಿಸಿ ತಂಡ ಕೂಡಿಕೊಂಡರು.
ಇದನ್ನೂ ಓದಿ: ಕೊರೋನಾ ಪರಿಣಾಮ, ಪ್ರೇಕ್ಷಕರಿಲ್ಲದೆ ಚೆಂಡು ಹುಡುಕಲು ಫೀಲ್ಡರ್‌ಗಳ ಪರದಾಟ!
ರಿಚರ್ಡ್ಸನ್ ಮೇಲಿನ ಕೊರೋನಾ ವೈರಸ್ ಶಂಕೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊರೋನಾ ವೈರಸ್ ತಡೆಯಲು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡ ಹಲವು ಮುನ್ನಚ್ಚೆರಿಕೆ ಕ್ರಮ ಕೈಗೊಂಡಿದೆ.
ಮೊದಲ ಪಂದ್ಯದಲ್ಲಿ ಪ್ರೇಕ್ಷಕರಿಲ್ಲದೆ ಕ್ರಿಕೆಟಿಗರು ಪಂದ್ಯ ಆಡಿದರು. ಈ ವೇಳೆ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದಾಗ ಫೀಲ್ಡರ್‌ಗಳೇ ಪ್ರೇಕ್ಷಕರ ಗ್ಯಾಲರಿಗೆ ತೆರಳಿ ಚೆಂಡು ಹುಡುಕಿ ತರಬೇಕಾಯ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 71 ರನ್ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಭಾರತ-ಸೌತ್ ಆಫ್ರಿಕಾ ಏಕದಿನ ಸರಣಿ ರದ್ದು, ಕೊರೋನಾಗೆ ಬಲಿಯಾಯ್ತು ಕ್ರಿಕೆಟ್!
ಕೊರೋನಾ ವೈರಸ್ ಆತಂಕದಿಂದ ಭಾರತ ಹಾಗೂ ಸೌತ್ ಆಫ್ರಿಕಾ ಏಕದಿನ ಸರಣಿ ರದ್ದಾಗಿದೆ. ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ಟಿ20 ಪಂದ್ಯ ರದ್ದಾಗಿದೆ. ಇನ್ನು ಐಪಿಎಲ್ ಟೂರ್ನಿ ಎಪ್ರಿಲ್ 15ರ ವರೆಗೆ ರದ್ದು ಮಾಡಲಾಗಿದೆ.