ನ್ಯೂಜಿಲೆಂಡ್ ಈಗ ಸೂಪರ್ ಓವರ್ ಚೋಕರ್ಸ್!

ನ್ಯೂಜಿಲೆಂಡ್ ತಂಡಕ್ಕೂ ಸೂಪರ್ ಓವರ್‌ಗೂ ಕೂಡಿ ಬರುತ್ತಿಲ್ಲ. ಪ್ರತಿ ಬಾರಿ ನ್ಯೂಜಿಲೆಂಡ್ ಸೂಪರ್ ಓವರ್‌ನಲ್ಲಿ ಮುಗ್ಗರಿಸುತ್ತಿದೆ. 2019ರ ವಿಶ್ವಕಪ್ ಫೈನಲ್ ಪಂದ್ಯ ಯಾರೂ ಮರೆತಿಲ್ಲ. ಇದೀಗ ಭಾರತ ವಿರುದ್ದ ಸತತ 2 ಸೂಪರ್ ಓವರ್ ಸೋಲಿನ ಬಳಿಕ ನ್ಯೂಜಿಲೆಂಡ್ ಸೂಪರ್ ಓವರ್ ಚೋಕರ್ಸ್ ಹಣೆಪಟ್ಟಿ ಹೊತ್ತುಕೊಂಡಿದೆ.

New  zealand become new super over chokers in world cricket

ವೆಲ್ಲಿಂಗ್ಟನ್(ಜ.31): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಹಾಗೂ 4ನೇ ಟಿ20 ಪಂದ್ಯ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಸತತ 2 ಪಂದ್ಯ ಸೂಪರ್ ಓವರ್‌ನಲ್ಲಿ ಫಲಿತಾಂಶ ಕಂಡಿದೆ. ಎರಡೂ ಪಂದ್ಯ ಕಿವೀಸ್‌ಗೆ ಆಘಾತ ನೀಡಿದೆ. ಈ ಸೋಲಿನ ಬಳಿಕ ನ್ಯೂಜಿಲೆಂಡ್ ಸೂಪರ್ ಓವರ್ ಚೋಕರ್ಸ್ ಕುಖ್ಯಾತಿಗೆ ಪಾತ್ರವಾಗಿದೆ.

ಇದನ್ನೂ ಓದಿ: ಮತ್ತೆ ಸೂಪರ್ ಓವರ್‌ ಗೆದ್ದ ಟೀಂ ಇಂಡಿಯಾ

ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ 2019ರ ಫೈನಲ್ ಪಂದ್ಯ ಟೈ ಆಗಿತ್ತು.  ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್ ಕೂಡ ಟೈ ಆಗಿತ್ತು. ಈ ವೇಳೆ ಬೌಂಡರಿ ಲಕ್ಕಾಚಾರದಲ್ಲಿ ಇಂಗ್ಲೆಂಡ್‌ಗೆ ಗೆಲುವು ನೀಡಲಾಯಿತು. ವಿಶ್ವಕಪ್ ಟೂರ್ನಿಯಲ್ಲೇ ನ್ಯೂಜಿಲೆಂಡ್ ತಂಡದ ಸೂಪರ್ ಓವರ್ ಕಂಟಕ ಬಹಿರಂಗವಾಗಿತ್ತು.

ಇದನ್ನೂ ಓದಿ: ಟೀಂ ಇಂಡಿಯಾಗೆ ಹಿಟ್‌ಮ್ಯಾನ್ ಗಿಫ್ಟ್ : ಸೂಪರ್‌ ಓವರ್‌ನಲ್ಲಿ ಗೆದ್ದ ಭಾರತ

ಭಾರತ ವಿರುದ್ಧದ 2 ಟಿ20 ಹಾಗೂ 2019ರ ವಿಶ್ವಕಪ್ ಫೈನಲ್ ಪಂದ್ಯ ಮಾತ್ರವಲ್ಲ, 8 ಬಾರಿ ನ್ಯೂಜಿಲೆಂಡ್ ಸೂಪರ್ ಓವರ್ ಒತ್ತಡಕ್ಕೆ ಸಿಲುಕಿದೆ. ಟಿ20ಯಲ್ಲಿ 7 ಹಾಗೂ ಒಂದು ಏಕದಿನ ಪಂದ್ಯವೂ ಸೇರಿದೆ.  ಇದರಲ್ಲಿ ಕೇವಲ 1 ಬಾರಿ ಮಾತ್ರ ಗೆಲುವಿನ ಸಿಹಿ ಕಂಡಿದೆ. 7 ಸೋಲು ಕಂಡಿರುವ ಕಿವೀಸ್ ಹೊಸ ಸೂಪರ್ ಓವರ್ ಚೋಕರ್ಸ್ ಹಣೆ ಪಟ್ಟಿ ಹೊತ್ತುಕೊಂಡಿದೆ.  

ನ್ಯೂಜಿಲೆಂಡ್ ಸೂಪರ್ ಓವರ್ ಇತಿಹಾಸ
T20I v ವಿಂಡೀಸ್, ಆಕ್ಲೆಂಡ್, 2008 (ಸೋಲು)
T20I v ಆಸ್ಟ್ರೇಲಿಯಾ, ಕ್ರೈಸ್ಟ್ ಚರ್ಚ್,2010 (ಗೆಲುವು)
T20I v ಶ್ರೀಲಂಕಾ, ಪಲ್ಲಕೆಲೆ,2012 (ಸೋಲು)
T20I v ವಿಂಡೀಸ್, ಪಲ್ಲಕೆಲೆ,2012 (ಸೋಲು)
ODI v ಇಂಗ್ಲೆಂಡ್, ಲಾರ್ಡ್ಸ್, 2019 (ಸೋಲು)
T20I v ಇಂಗ್ಲೆಂಡ್, ಆಕ್ಲೆಂಡ್, 2019 (ಸೋಲು)
T20I v ಭಾರತ, ಹ್ಯಾಮಿಲ್ಟನ್, 2020 (ಸೋಲು)
T20I v ಭಾರತ, ವೆಲ್ಲಿಂಗ್ಟನ್, 2020 (ಸೋಲು)
 

Latest Videos
Follow Us:
Download App:
  • android
  • ios