Asianet Suvarna News Asianet Suvarna News

ಟೀಂ ಇಂಡಿ​ಯಾ ಹೊಸ ಜೆರ್ಸಿಗಳ ಅನಾ​ವ​ರ​ಣ..!

ಟೀಂ ಇಂಡಿ​ಯಾ ಹೊಸ ಜೆರ್ಸಿಗಳ ಅನಾ​ವ​ರ​ಣ
ಅಡಿ​ಡಾಸ್‌ನಿಂದ 3 ಮಾದರಿಗೆ 3 ವಿಭಿನ್ನ ಜೆರ್ಸಿ
5 ವರ್ಷಗಳ ಅವಧಿಗೆ ಟೀಂ ಇಂಡಿಯಾಗೆ ಜೆರ್ಸಿ ಸ್ಪಾನ್ಸರ್ ಮಾಡಲಿರುವ ಅಡಿಡಾಸ್

New Team India jersey Adidas shares first glimpse of Test ODI and T20I shirts kvn
Author
First Published Jun 2, 2023, 11:51 AM IST

ಮುಂಬೈ(ಜೂ.02): ಅಡಿ​ಡಾಸ್‌ ಸಂಸ್ಥೆಯ ಪ್ರಾಯೋ​ಜ​ಕತ್ವ ಹೊಂದಿ​ರುವ ಭಾರತೀಯ ಕ್ರಿಕೆಟ್‌ ತಂಡದ ನೂತನ ಜೆರ್ಸಿ​ಗ​ಳನ್ನು ಗುರು​ವಾರ ಅನಾವರಣಗೊಳಿ​ಸ​ಲಾ​ಗಿದೆ. ಮುಂಬೈನ ವಾಂಖೇಡೆ ಕ್ರೀಡಾಂಗ​ಣ​ದಲ್ಲಿ 3 ಮಾದ​ರಿ​(ಟೆಸ್ಟ್‌, ಏಕದಿನ, ಟಿ20) ಜೆರ್ಸಿ​ಗ​ಳನ್ನು ಬಿಡು​ಗ​ಡೆ​ಗೊ​ಳಿ​ಸು​ತ್ತಿ​ರುವ ವಿಡಿಯೋ, ಫೋಟೋ​ಗ​ಳನ್ನು ಅಡಿ​ಡಾಸ್‌ ಸಂಸ್ಥೆಯು ಸಾಮಾ​ಜಿಕ ತಾಣ​ಗ​ಳಲ್ಲಿ ಹಂಚಿ​ಕೊಂಡಿದೆ.

"ಇದೊಂದು ಐತಿಹಾಸಿಕ ಕ್ಷಣ, ಐತಿಹಾಸಿಕ ಸ್ಟೇಡಿಯಂನಲ್ಲಿ ನಾವಿಂದು ಭಾರತದ ನೂತನ ಜೆರ್ಸಿಯನ್ನು ಅನಾವರಣ ಮಾಡುತ್ತಿದ್ದೇವೆ" ಎಂದು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಅಡಿಡಾಸ್ ಬರೆದುಕೊಂಡಿದೆ. 

 
 
 
 
 
 
 
 
 
 
 
 
 
 
 

A post shared by adidas India (@adidasindia)

ಜೆರ್ಸಿಯ ಭುಜದ ಭಾಗ​ದಲ್ಲಿ ಮೂರು ಪಟ್ಟಿ​ಗಳು ಮತ್ತು ಮುಂಭಾ​ಗ​ದಲ್ಲಿ ಅಡಿ​ಡಾಸ್‌ ಲೋಗೋ ಇದೆ. ಜೆರ್ಸಿ ವಿನ್ಯಾ​ಸಕ್ಕೆ ಅಭಿ​ಮಾ​ನಿ​ಗಳು ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ್ದಾ​ರೆ. ಇತ್ತೀಚೆಗಷ್ಟೇ ಅಡಿಡಾಸ್‌ ಸಂಸ್ಥೆಯೊಂದಿಗೆ ಬಿಸಿ​ಸಿಐ 5 ವರ್ಷ​ಗಳ ಅವ​ಧಿಗೆ ಒಪ್ಪಂದ ಮಾಡಿ​ಕೊಂಡಿತ್ತು. ಜೂನ್ 7ರಿಂದ ಆರಂಭ​ವಾ​ಗ​ಲಿ​ರುವ ಆಸ್ಪ್ರೇ​ಲಿಯಾ ವಿರು​ದ್ಧದ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ ಫೈನಲ್‌ನಲ್ಲಿ ಭಾರತೀಯ ಆಟ​ಗಾ​ರರು ಮೊದಲ ಬಾರಿ ಅಡಿ​ಡಾಸ್‌ ಸಂಸ್ಥೆಯ ಜೆರ್ಸಿ ತೊಟ್ಟು ಆಡ​ಲಿ​ದ್ದಾರೆ. ಇತ್ತೀ​ಚೆ​ಗಷ್ಟೇ ತಂಡದ ಅಭ್ಯಾಸ ಜೆರ್ಸಿ​ಗ​ಳನ್ನು ಬಿಡು​ಗ​ಡೆ​ಗೊ​ಳಿ​ಸ​ಲಾ​ಗಿತ್ತು.

WTC Final: ಟೆಸ್ಟ್‌ ಫೈನಲ್‌ಗೆ ಟೀಂ ಇಂಡಿಯಾ ಕಠಿಣ ಅಭ್ಯಾಸ

ಮುಖ್ಯವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಭಾರತ ತಂಡದ ಕ್ರಿಕೆಟಿಗರು ಹಾಗೂ ಸಹಾಯಕ ಸಿಬ್ಬಂದಿಗಳು ಅಡಿಡಾಸ್ ಅಭ್ಯಾಸ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದರು. ಭಾರತ ಕ್ರಿಕೆಟ್ ತಂಡದ ನೂತನ ಜೆರ್ಸಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜೂನ್‌ 7ರಿಂದ ಇಲ್ಲಿನ ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಸಸೆಕ್ಸ್‌ನ ಅರುಂಡೆಲ್‌ ಕೌಂಟಿ ಮೈದಾನದಲ್ಲಿ ಭರ್ಜರಿ ತಾಲೀಮು ನಡೆಸುತ್ತಿದ್ದು, ಐಪಿಎಲ್‌ ಫೈನಲ್‌ ಮುಗಿಸಿ ಇಂಗ್ಲೆಂಡ್‌ಗೆ ತೆರಳಿದ ಶುಭ್‌ಮನ್‌ ಗಿಲ್‌, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ ತಂಡ ಕೂಡಿಕೊಂಡಿದ್ದಾರೆ.

2028ರ ವರೆಗೂ ಅಡಿಡಾಸ್‌ ಜೆರ್ಸಿ ಪ್ರಾಯೋಜಕತ್ವ: ಬಿಸಿಸಿಐ

ಮುಂಬೈ: ಭಾರತೀಯ ಕ್ರಿಕೆಟ್‌ ತಂಡಗಳ ಜೆರ್ಸಿ ಪ್ರಾಯೋಜಕತ್ವಕ್ಕೆ ಅಡಿಡಾಸ್‌ ಸಂಸ್ಥೆಯು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕೆಲ ದಿನಗಳ ಹಿಂದಷ್ಟೇ ಬಿಸಿಸಿಐ ಪ್ರಕಟಣೆ ತಿಳಿಸಿದೆ. ಈ ಕುರಿತಂತೆ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ, ಟ್ವೀಟ್‌ ಮೂಲಕ ಪ್ರಾಯೋಜಕತ್ವದ ವಿಷಯವನ್ನು ಬಹಿರಂಗಪಡಿಸಿದ್ದರು. ಜಯ್‌ ಶಾ ಆಗಲಿ, ಬಿಸಿಸಿಐ ಪ್ರಕಟಣೆಯಾಗಲಿ ಒಪ್ಪಂದದ ಮೌಲ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಭಾರತ ಹಿರಿಯ ಪುರುಷ, ಮಹಿಳಾ ತಂಡಗಳು, ಪುರುಷ, ಮಹಿಳಾ ಅಂಡರ್‌-19 ತಂಡಗಳು ಇನ್ಮುಂದೆ ಅಡಿಡಾಸ್‌ ಜೆರ್ಸಿ ತೊಟ್ಟು ಆಡಲಿವೆ.

Follow Us:
Download App:
  • android
  • ios