Asianet Suvarna News Asianet Suvarna News

WTC Final: ಟೆಸ್ಟ್‌ ಫೈನಲ್‌ಗೆ ಟೀಂ ಇಂಡಿಯಾ ಕಠಿಣ ಅಭ್ಯಾಸ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಜೂನ್ 07ರಿಂದ ಆರಂಭ
ಟೆಸ್ಟ್‌ ವಿಶ್ವಕಪ್ ಗೆಲ್ಲಲು ರೋಹಿತ್ ಶರ್ಮಾ ಪಡೆ ಕಠಿಣ ಅಭ್ಯಾಸ
ಸಸೆಕ್ಸ್‌ನ ಅರುಂಡೆಲ್‌ ಕೌಂಟಿ ಮೈದಾನದಲ್ಲಿ ಭರ್ಜರಿ ತಾಲೀಮು

Team India Players training session ahead of WTC final kvn
Author
First Published Jun 2, 2023, 10:34 AM IST

ಲಂಡನ್‌(ಜೂ.02): ಜೂನ್‌ 7ರಿಂದ ಇಲ್ಲಿನ ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಸಸೆಕ್ಸ್‌ನ ಅರುಂಡೆಲ್‌ ಕೌಂಟಿ ಮೈದಾನದಲ್ಲಿ ಭರ್ಜರಿ ತಾಲೀಮು ನಡೆಸುತ್ತಿದ್ದು, ಐಪಿಎಲ್‌ ಫೈನಲ್‌ ಮುಗಿಸಿ ಇಂಗ್ಲೆಂಡ್‌ಗೆ ತೆರಳಿದ ಶುಭ್‌ಮನ್‌ ಗಿಲ್‌, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ ತಂಡ ಕೂಡಿಕೊಂಡಿದ್ದಾರೆ.

ಭಾರತ ತಂಡವು 5 ಬ್ಯಾಟರ್‌ಗಳು, ವಿಕೆಟ್‌ ಕೀಪರ್‌-ಬ್ಯಾಟರ್‌, ಒಬ್ಬ ಆಲ್ರೌಂಡರ್‌, ಒಬ್ಬ ಸ್ಪಿನ್ನರ್‌ ಹಾಗೂ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಓವಲ್‌ನ ಪಿಚ್‌ ಸಾಮಾನ್ಯವಾಗಿ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ, ಸಿರಾಜ್‌, ಶಮಿ ಹಾಗೂ ಉಮೇಶ್‌ ಅಥವಾ ಉನಾದ್ಕತ್‌ ಜೊತೆ ಆಲ್ರೌಂಡರ್‌ ಸ್ಥಾನವನ್ನು ಶಾರ್ದೂಲ್‌ ಠಾಕೂರ್‌ಗೆ ನೀಡುವ ಸಾಧ್ಯತೆ ಇದೆ. ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಆಗಿ ಜಡೇಜಾ ಆಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ನಾಯಕ ರೋಹಿತ್‌ ಜೊತೆ ಗಿಲ್‌ ಆರಂಭಿಕನಾಗಿ ಆಡಲಿದ್ದು, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಪಡೆಯಲ್ಲಿ ಇರುವುದು ಬಹುತೇಕ ಖಚಿತ. ವಿಕೆಟ್‌ ಕೀಪರ್‌ ಸ್ಥಾನಕ್ಕಾಗಿ ಇಶಾನ್‌ ಕಿಶನ್‌ ರೇಸ್‌ನಲ್ಲಿದ್ದರೂ, ತಂಡದ ಆಡಳಿತವು ಕೆ.ಎಸ್‌.ಭರತ್‌ರನ್ನೇ ಆಡಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಮತ್ತೊಂದೆಡೆ ಆಸ್ಪ್ರೇಲಿಯಾ ತಂಡ ಲಂಡನ್‌ನಿಂದ 20 ಕಿ.ಮೀ. ದೂರದಲ್ಲಿರುವ ಬೆಕೆನ್‌ಹ್ಯಾಮ್‌ನಲ್ಲಿ ಅಭ್ಯಾಸ ನಡೆಸುತ್ತಿದೆ.

ಫೈನಲ್‌ಗೆ ಡ್ಯೂಕ್ಸ್‌ ಚೆಂಡು ಬಳಕೆ

ಟೆಸ್ಟ್‌ ವಿಶ್ವ​ಕಪ್‌ ಫೈನ​ಲ್‌​ನಲ್ಲಿ ಡ್ಯೂಕ್ಸ್‌ ಚೆಂಡು​ಗ​ಳನ್ನು ಬಳ​ಸು​ವು​ದಾಗಿ ಐಸಿಸಿ ಬುಧ​ವಾರ ಖಚಿ​ತ​ಪ​ಡಿ​ಸಿದೆ. ಕಳೆದ ಟೆಸ್ಟ್‌ ವಿಶ್ವ​ಕಪ್‌ ಫೈನ​ಲ್‌​ನಲ್ಲೂ ಡ್ಯೂಕ್ಸ್‌ ಬಾಲ್‌​ಗ​ಳನ್ನೇ ಬಳ​ಸ​ಲಾ​ಗಿತ್ತಾದರೂ ಇತ್ತೀ​ಚೆಗೆ ಈ ಚೆಂಡಿನ ಗುಣಮಟ್ಟದ ಬಗ್ಗೆ ದೂರು​ಗಳು ಕೇಳಿಬಂದ ಕಾರಣ ಕೂಕಾಬುರಾ ಚೆಂಡು ಬಳಸಬಹುದು ಎಂಬ ಸುದ್ದಿ ಹರಿದಾಡಿತ್ತು. ಆದರೆ ಐಸಿಸಿ ಇಂಗ್ಲೆಂಡ್‌ನಲ್ಲಿ ಸಂಪ್ರದಾಯಿಕವಾಗಿ ಬಳಸುವ ಡ್ಯೂಕ್ಸ್‌ ಚೆಂಡನ್ನೇ ಫೈನಲ್‌ಗೆ ಬಳಸಲು ನಿರ್ಧರಿಸಿದೆ.

ಐಪಿಎಲ್‌ ವೇಳೆ ಡ್ಯೂಕ್ಸ್‌ ಚೆಂಡಿನಲ್ಲಿ ಅಭ್ಯಾಸ: ಅಕ್ಷರ್‌

ಐಸಿಸಿ ವೆಬ್‌ಸೈಟ್‌ ಜೊತೆ ಮಾತನಾಡಿರುವ ಭಾರತದ ಆಲ್ರೌಂಡರ್‌ ಅಕ್ಷರ ಪಟೇಲ್‌, ‘ಟಿ20 ಗುಂಗಿನಿಂದ ಹೊರಬರಲು ಕಷ್ಟವೇನೂ ಆಗುತ್ತಿಲ್ಲ. ತಂಡ ಟೆಸ್ಟ್‌ ಕ್ರಿಕೆಟ್‌ಗೆ ಬೇಕಿರುವ ತಯಾರಿ ನಡೆಸುತ್ತಿದೆ. ಐಪಿಎಲ್‌ ವೇಳೆ ಡ್ಯೂಕ್ಸ್‌ ಚೆಂಡಿನಲ್ಲಿ ಅಭ್ಯಾಸ ನಡೆಸಿದ್ದೇವೆ. ಯಾವುದೇ ಸವಾಲಿಗೆ ಭಾರತೀಯ ಬೌಲರ್‌ಗಳು ಸಿದ್ಧರಿದ್ದೇವೆ’ ಎಂದಿದ್ದಾರೆ.

ಟೆಸ್ಟ್‌ ವಿಶ್ವಕಪ್‌ ಫೈನಲ್‌: ಋತುರಾಜ್ ಔಟ್, ಸ್ಪೋಟಕ ಬ್ಯಾಟರ್ ಯಶಸ್ವಿಗೆ ಜಾಕ್‌ಪಾಟ್

ಚಾಂಪಿಯನ್ ತಂಡಕ್ಕೆ ಸಿಗಲಿದೆ 13.2 ಕೋಟಿ ರುಪಾಯಿ ಬಹುಮಾನ:

2019-21ರ ಚೊಚ್ಚಲ ಆವೃ​ತ್ತಿ​ಯಂತೆಯೇ 2021-23ರ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ನಲ್ಲೂ ಪ್ರಶಸ್ತಿ ವಿಜೇತ ತಂಡಕ್ಕೆ 1.6 ಮಿಲಿ​ಯನ್‌ ಅಮೆರಿಕನ್‌ ಡಾಲ​ರ್‌​(​ಸು​ಮಾರು 13.2 ಕೋಟಿ ರು.) ನಗದು ಬಹು​ಮಾನ ಸಿಗ​ಲಿದೆ ಎಂದು ಐಸಿಸಿ ಶುಕ್ರ​ವಾರ ತಿಳಿ​ಸಿದೆ. ಜೂನ್‌ 7ರಿಂದ ಭಾರತ ಹಾಗೂ ಆಸ್ಪ್ರೇ​ಲಿಯಾ ನಡುವೆ ಟೆಸ್ಟ್ ವಿಶ್ವಕಪ್ ಫೈನಲ್‌ ಪಂದ್ಯ ನಡೆ​ಯ​ಲಿದ್ದು, ರನ್ನ​ರ್‌-ಅಪ್‌ ತಂಡ 8 ಲಕ್ಷ ಅಮೆರಿಕನ್‌ ಡಾಲ​ರ್‌(ಸು​ಮಾರು 6.6 ಕೋಟಿ ರು.) ಪಡೆ​ದು​ಕೊ​ಳ್ಳ​ಲಿದೆ ಎಂದು ಐಸಿಸಿ ಮಾಹಿತಿ ನೀಡಿದೆ.

Follow Us:
Download App:
  • android
  • ios