ಐಪಿಎಲ್ ಹರಾಜಿನಲ್ಲಿ RCB ಕೂಡಿಕೊಂಡ ಬೆನ್ನಲ್ಲೇ 4 ಪಂದ್ಯಗಳ ನಿಷೇಧಕ್ಕೆ ಒಳಗಾದ ಸ್ಟಾರ್ ಆಲ್ರೌಂಡರ್..!

ಡಿಸೆಂಬರ್ 11ರಂದು ಹೋಬಾರ್ಟ್ ಹರಿಕೇನ್ ಎದುರಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಮಾಧ್ಯಮಗಳ ವರದಿಯ ಪ್ರಕಾರ ಟಾಮ್ ಕರ್ರನ್ ಪ್ರಮುಖ ಪಿಚ್‌ನಲ್ಲಿ ಅಭ್ಯಾಸದ ರನ್‌ಅಪ್ ಮಾಡುವ ವೇಳೆ ನಾಲ್ಕನೇ ಅಂಪೈರ್ ಅಲ್ಲಿ ಪ್ರಾಕ್ಟೀಸ್ ಮಾಡದಂತೆ ತಡೆದರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. 

New RCB Star Tom Curran Handed 4 Match Ban For Intimidating Umpire During Big Bash League Match kvn

ಸಿಡ್ನಿ(ಡಿ.21): 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ನಡೆದು ಇನ್ನು ಎರಡು ದಿನ ಕಳೆದಿಲ್ಲ. ಹೀಗಿರುವಾಗಲೇ ಹರಾಜಿನಲ್ಲಿ ಆರ್‌ಸಿಬಿ ತಂಡ ಕೂಡಿಕೊಂಡಿರುವ ಇಂಗ್ಲೆಂಡ್ ಮೂಲದ ಸ್ಟಾರ್ ಬೌಲಿಂಗ್ ಆಲ್ರೌಂಡರ್ ಟಾಮ್ ಕರ್ರನ್, ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಅಪಾಯ ಮೈಮೇಲೆ ಎಳೆದುಕೊಂಡಿದ್ದಾರೆ.

ಸದ್ಯ ಟಾಮ್ ಕರ್ರನ್, ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಟೂರ್ನಿಯಲ್ಲಿ ಪಾಲ್ಗೊಂಡಿರುವ ಟಾಮ್ ಕರ್ರನ್, ಮೈದಾನದ ಅಂಪೈರ್‌ಗೆ ನಿಂದಿಸುವ ಮೂಲಕ ಬಿಗ್‌ಬ್ಯಾಶ್‌ ಲೀಗ್ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಪರಿಣಾಮ ಇದೀಗ ಟಾಮ್ ಕರ್ರನ್ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ 4 ಪಂದ್ಯಗಳ ಮಟ್ಟಿಗೆ ನಿಷೇದ ಶಿಕ್ಷೆಗೆ ಗುರಿಯಾಗಿದ್ದಾರೆ. 

ಡಿಸೆಂಬರ್ 11ರಂದು ಹೋಬಾರ್ಟ್ ಹರಿಕೇನ್ ಎದುರಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಮಾಧ್ಯಮಗಳ ವರದಿಯ ಪ್ರಕಾರ ಟಾಮ್ ಕರ್ರನ್ ಪ್ರಮುಖ ಪಿಚ್‌ನಲ್ಲಿ ಅಭ್ಯಾಸದ ರನ್‌ಅಪ್ ಮಾಡುವ ವೇಳೆ ನಾಲ್ಕನೇ ಅಂಪೈರ್ ಅಲ್ಲಿ ಪ್ರಾಕ್ಟೀಸ್ ಮಾಡದಂತೆ ತಡೆದರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. 

ತಂದೆಗೆ ತಕ್ಕ ಮಗ..! ಕೋಚ್ ಬೆಹಾರ್ ಟ್ರೋಫಿಯಲ್ಲಿ ದ್ರಾವಿಡ್‌ ಪುತ್ರ ಸಮಿತ್ ಭರ್ಜರಿ ಬ್ಯಾಟಿಂಗ್, ಶತಕ ಜಸ್ಟ್‌ ಮಿಸ್..!

ಇದೀಗ ಸಿಡ್ನಿ ಸಿಕ್ಸರ್ ತಂಡವು, ಟಾಮ್ ಕರ್ರನ್ ಅವರ ಮೇಲೆ ಹೇರಲಾಗಿರುವ ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇನ್ನು 2024ರ ಐಪಿಎಲ್ ಆಟಗಾರರ ಹರಾಜಿನ ಬಗ್ಗೆ ಹೇಳುವುದಾದರೇ, ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು, ಡಿಸೆಂಬರ್ 19ರಂದು ದುಬೈನಲ್ಲಿ ಆಟಗಾರರ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಅಲ್ಜರಿ ಜೋಸೆಫ್, ಲಾಕಿ ಫರ್ಗ್ಯೂಸನ್, ಟಾಮ್ ಕರ್ರನ್ ಅವರಂತಹ ಪ್ರಮುಖ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ

 

Latest Videos
Follow Us:
Download App:
  • android
  • ios