* ಹಾರ್ಲೆ ಡೇವಿಡ್‌ಸನ್ ಬೈಕ್‌ನೊಂದಿಗೆ ಪೋಸ್‌ ಕೊಟ್ಟು ಟ್ರೋಲ್ ಆದ ಸೈನಿ* ನವದೀಪ್ ಸೈನಿ ಟೀಂ ಇಂಡಿಯಾ ವೇಗದ ಬೌಲರ್‌*  ಕಳಪೆ ಫಾರ್ಮ್‌ನಿಂದಾಗಿ ಇಂಗ್ಲೆಂಡ್ ಪ್ರವಾಸದಿಂದ ಹೊರಬಿದ್ದಿರುವ ಡೆಲ್ಲಿ ವೇಗಿ

ನವದೆಹಲಿ(ಮೇ.31): ಟೀಂ ಇಂಡಿಯಾದ ಯುವ ವೇಗದ ಬೌಲರ್‌ ನವದೀಪ್ ಸೈನಿ ತಮ್ಮ ಹಾರ್ಲೆ ಡೇವಿಡ್‌ಸನ್‌ ಬೈಕ್‌ನೊಂದಿಗೆ ಪೋಸ್‌ ಕೊಟ್ಟಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದ್ದು, ಶೋಕಿ ಬಿಟ್ಟು ಆಟದತ್ತ ಗಮನ ಹರಿಸು ಎಂದು ಕಿವಿಮಾತು ಹೇಳಿದ್ದಾರೆ.

ಇಂಗ್ಲೆಂಡ್‌ ದೀರ್ಘಕಾಲಿಕ ಪ್ರವಾಸಕ್ಕೆ ಟೀಂ ಇಂಡಿಯಾದಿಂದ ನವದೀಪ್ ಸೈನಿಯನ್ನು ಕೈ ಬಿಡಲಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಜೂನ್ 18ರಿಂದ ಆರಂಭವಾಗಲಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾಗೂ ಇಂಗ್ಲೆಂಡ್‌ ವಿರುದ್ದ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. 

ಇದರ ಬೆನ್ನಲ್ಲೇ ಇದೀಗ ನವದೀಪ್ ಸೈನಿ, ಹಾರ್ಲೆ ಡೇವಿಡ್‌ಸನ್‌ನೊಂದಿಗೆ ಮಾಡಿರುವ ವಿಡಿಯೋಗೆ ನೆಟ್ಟಿಗರು ಪ್ರಶಂಶಿಸುವ ಬದಲು, ಆಟದತ್ತ ಗಮನ ಹರಿಸು ಎನ್ನುವ ಸಲಹೆ ನೀಡಿದ್ದಾರೆ. 

Scroll to load tweet…

ನೀವು ಆಟದತ್ತ ಗಮನ ಹರಿಸಿ, ಬರೀ ಹವಾ ಮಾಡುತ್ತಾ ಇದ್ದರೆ, ಗಾಳಿಯಲ್ಲೇ ಮರೆಯಾಗಿ ಹೋಗುತ್ತೀರ. ಬರೀ ಪ್ರತಿಭೆ ಇದ್ದರೆ ಸಾಲದು, ಪರಿಶ್ರಮವನ್ನೂ ಪಡಬೇಕಾಗುತ್ತದೆ. ನಿಮಗೆ ತಿಳಿದರಲಿ ಸಚಿನ್ ಹಾಗೂ ವಿನೋದ್ ಕಾಂಬ್ಳಿ ಇಬ್ಬರೂ ಪ್ರತಿಭಾನ್ವಿತ ಆಟಗಾರರಾಗಿದ್ದರು. ಆದರೆ ಕೊನೆಗೆ ಫಲಿತಾಂಶ ಏನಾಯ್ತು ಎಂದು ನಿಮಗೂ ಗೊತ್ತಿದೆಯಲ್ವಾ ಗೆಳೆಯ ಎಂದು ವಿಕಾಸ್ ಪಂಡಿತ್ ಎನ್ನುವವರು ಕಿವಿಮಾತು ಹೇಳಿದ್ದಾರೆ.

Scroll to load tweet…

ಹೆಚ್ಚು ಹೀರೋ ಥರ ಆಡಲು ಪ್ರಯತ್ನಿಸಬೇಡ, ನೀನಿನ್ನು ಟೀಂ ಇಂಡಿಯಾಗೆ ಆಯ್ಕೆಯಾಗಿ ಎರಡು ವರ್ಷವೂ ಪೂರೈಸಿಲ್ಲ ಎಂದು ಪ್ರಯಾಗ್ ಎನ್ನುವವರು ಸೈನಿಯನ್ನು ಟ್ರೋಲ್‌ ಮಾಡಿದ್ದಾರೆ.

Scroll to load tweet…
Scroll to load tweet…

ಡೆಲ್ಲಿ ಮೂಲದ ವೇಗಿ ನವದೀಪ್ ಸೈನಿ ಆಸ್ಟ್ರೇಲಿಯಾ ವಿರುದ್ದದ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರಾದರು, ಎರಡನೇ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯಲು ಯಶಸ್ವಿಯಾಗಿರಲಿಲ್ಲ. ಇದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ದದ ದೀರ್ಘಕಾಲಿಕ ಸರಣಿಯಿಂದಲೂ ಸೈನಿ ತಂಡದಿಂದ ಹೊರಬಿದ್ದಿದ್ದಾರೆ.