'ಕಿರಿಕ್ ಆರಂಭಿಸಿದ್ದು ಕೊಹ್ಲಿ, ನಾನಲ್ಲ..'! ಅಚ್ಚರಿಯ ಹೇಳಿಕೆ ನೀಡಿದ ಆಫ್ಘಾನ್ ವೇಗಿ ನವೀನ್ ಉಲ್ ಹಕ್..!

ಲಖನೌ-ಆರ್‌ಸಿಬಿ ನಡುವಿನ ಪಂದ್ಯದ ವೇಳೆ ನಡೆದ ಗಲಾಟೆ ಕಹಾನಿ ಬಿಚ್ಚಿಟ್ಟ ನವೀನ್ ಉಲ್ ಹಕ್
ನವೀನ್ ಉಲ್ ಹಕ್‌ ಹಾಗೂ ವಿರಾಟ್ ಕೊಹ್ಲಿ ನಡುವೆ ನಡೆದಿದ್ದ ಜಗಳ
ಜಗಳ ಆರಂಭಿಸಿದ್ದ ನಾನಲ್ಲ ವಿರಾಟ್ ಕೊಹ್ಲಿ ಎಂದ ಆಫ್ಘಾನ್ ವೇಗಿ

Naveen ul Haq Explosive Take On IPL 2023 Spat with Virat Kohli kvn


ಲಂಡನ್(ಜೂ.16): 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ನವೀನ್ ಉಲ್ ಹಕ್ ನಡುವಿನ ಮಾತಿನ ಚಕಮಕಿ ಸಾಕಷ್ಟು ಸದ್ದು ಮಾಡಿತ್ತು. ಲಖನೌದ ಏಕಾನ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ನಡೆದ ಈ ಮಾತಿನ ಚಕಮಕಿಯ ಕುರಿತಂತೆ ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ವ್ಯಾಖ್ಯಾನ ಮಾಡಿದ್ದಾರೆ. ಇದೀಗ ಆಫ್ಘಾನಿಸ್ತಾನ ಮೂಲದ ವೇಗದ ಬೌಲರ್ ನವೀನ್ ಉಲ್‌ ಹಕ್, ಅಂದು ಈ ವಾಗ್ವಾದ ಹೇಗೆ ಶುರುವಾಯಿತು ಎನ್ನುವುದರ ಕುರಿತಂತೆ ಬಿಬಿಸಿ ವಾಹಿನಿಯ ಜತೆಗಿನ ಮಾತುಕತೆಯ ವೇಳೆ ವಿವರಿಸಿದ್ದಾರೆ. 

"ಪಂದ್ಯ ಮುಗಿದ ಬಳಿಕ, ಹಸ್ತಲಾಘವನ ಮಾಡುವ ವೇಳೆ ಜಗಳ ಆರಂಭಿಸಿದ್ದು ಮೊದಲು ವಿರಾಟ್ ಕೊಹ್ಲಿಯೇ ಹೊರತು ನಾನಲ್ಲ. ದಂಡ ವಿಧಿಸಿದ್ದನ್ನೇ ನೀವು ಗಮನಿಸಿದರೆ, ನಿಮಗೆ ಅರ್ಥವಾಗುತ್ತದೆ, ಯಾರು ಮೊದಲು ಜಗಳ ಶುರುಮಾಡಿದ್ದೆಂದು ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.

ಆರ್‌ಸಿಬಿ ಹಾಗೂ ಲಖನೌ ನಡುವಿನ ಪಂದ್ಯ ಮುಕ್ತಾಯದ ಬಳಿಕ ಮೈದಾನದಲ್ಲಿ ಕ್ರೀಡಾಸ್ಪೂರ್ತಿ ಮರೆತು ವರ್ತಿಸಿದ ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಸಂಪೂರ್ಣ ದಂಡವನ್ನು ವಿಧಿಸಲಾಗಿತ್ತು. ಇನ್ನು ನವೀನ್ ಉಲ್ ಹಕ್ ಅವರಿಗೆ ಪಂದ್ಯದ ಸಂಭಾವನೆಯ ಅರ್ಧದಷ್ಟು ದಂಡದ ಶಿಕ್ಷೆ ವಿಧಿಸಲಾಗಿತ್ತು. ಇನ್ನು ಇದೇ ವೇಳೆ ನವೀನ್ ಉಲ್ ಹಕ್‌, "ನಾನು ಯಾರನ್ನೂ ಕೆಣಕಲು ಹೋಗುವುದಿಲ್ಲ, ಒಂದು ವೇಳೆ ಸ್ಲೆಡ್ಜಿಂಗ್ ಮಾಡಿದರೂ, ಅದು ಬೌಲಿಂಗ್ ಮಾಡುವಾಗ ಮಾತ್ರ. ಪಂದ್ಯ ಮುಗಿದ ಬಳಿಕ ನಾನು ಜಗಳ ಮಾಡಲ್ಲ. ಆದರೆ ಆರ್‌ಸಿಬಿ ಎದುರಿನ ಪಂದ್ಯದ ದಿನ ಮ್ಯಾಚ್‌ನಲ್ಲೂ ಕೂಡಾ ನಾನೂ ಯಾವುದೇ ಸ್ಲೆಡ್ಜಿಂಗ್ ಮಾಡಿರಲಿಲ್ಲ ಎಂದು ಬಿಬಿಸಿ ಪಾಸ್ಟೋಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಟ್ರೋಲ್ ತಾಳಲಾರದೇ 'ಮ್ಯಾಂಗೋ', 'ಸ್ವೀಟ್‌' ಪದಗಳನ್ನು ಮ್ಯೂಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್‌..!

ನಾನು ಬ್ಯಾಟಿಂಗ್ ಮಾಡುವಾಗ ಅಥವಾ ಬೌಲಿಂಗ್ ಮಾಡುವಾಗ ಯಾವತ್ತಿಗೂ ನನ್ನ ತಾಳ್ಮೆ ಕಳೆದುಕೊಳ್ಳುವುದಿಲ್ಲ.ಪಂದ್ಯದ ಮುಗಿದ ಬಳಿಕ ನಾನು ಹೇಗಿದ್ದೆ ಎನ್ನುವುದನ್ನು ಎಲ್ಲರೂ ನೋಡಿದ್ದಾರೆ. ನಾನು ಎಲ್ಲರಂತೆ ಸುಮ್ಮನೇ ಸಹಜವಾಗಿ ವಿರಾಟ್ ಕೊಹ್ಲಿ ಅವರ ಕೈಕುಲುಕಲು ಮುಂದಾದೆ. ಆಗ ವಿರಾಟ್ ಕೊಹ್ಲಿ, ಬಲವಾಗಿ ನನ್ನ ಕೈಹಿಡಿದು ಅದುಮಿದರು. ನಾನು ಕೂಡಾ ಮನುಷ್ಯನೇ ಅಲ್ಲವೇ, ಅದಕ್ಕಾಗಿ ನಾನು ಪ್ರಚೋದನೆಗೆ ಪ್ರತಿಕ್ರಿಯೆ ಎನ್ನುವಂತೆ ವರ್ತಿಸಿದೆ ಎನ್ನುವುದನ್ನು ನವೀನ್ ಉಲ್ ಹಕ್ ಒಪ್ಪಿಕೊಂಡಿದ್ದಾರೆ.

ಕೊಹ್ಲಿ-ಗಂಭೀರ್‌ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಈ ಘಟನೆ..!

‘ಟೀವಿಯಲ್ಲಿ ನೋಡಿದಂತೆ ಪಂದ್ಯ ಮುಗಿದ ಬಳಿಕ ಕೊಹ್ಲಿ ಹಾಗೂ ಮೇಯ​ರ್ಸ್‌ ಮಾತನಾಡುತ್ತಾ ನಡೆಯುತ್ತಿದ್ದರು. ಏಕೆ ನಿರಂತರವಾಗಿ ತಮ್ಮ ತಂಡದ ಆಟಗಾರರನ್ನು ನಿಂದಿಸುತ್ತಿದ್ದಿರಿ ಎಂದು ಮೇಯ​ರ್ಸ್‌ ಕೊಹ್ಲಿಯನ್ನು ಕೇಳಿದಾಗ, ನೀವೇಕೆ(ಮೇಯ​ರ್ಸ್) ನನ್ನನ್ನು ಗುರಾಯಿಸಿ ನೋಡಿದಿರಿ ಎಂದು ಕೊಹ್ಲಿ ಮರು ಪ್ರಶ್ನೆ ಕೇಳಿದರು. ಇದಕ್ಕೂ ಮುನ್ನ ಕೊಹ್ಲಿ ಬಿಟ್ಟೂಬಿಡದಂತೆ ನಂ.10 ಬ್ಯಾಟರ್‌ ನವೀನ್‌-ಉಲ್‌-ಹಕ್‌ರ ವಿರುದ್ಧ ಅವಾಚ್ಯ ಶಬ್ಧಗಳ ಬಳಕೆ ಮಾಡುತ್ತಿದ್ದ ಕಾರಣ, ಅವರ ಜೊತೆ ಬ್ಯಾಟ್‌ ಮಾಡುತ್ತಿದ್ದ ಅಮಿತ್‌ ಮಿಶ್ರ ಅಂಪೈರ್‌ಗಳಿಗೆ ದೂರು ನೀಡಿದ್ದರು’.

‘ಇದನ್ನು ಗಮನಿಸಿದ ಗಂಭೀರ್‌, ಮೇಯರ್ಸ್‌ರನ್ನು ಕೊಹ್ಲಿ ಜೊತೆ ಮಾತಾಡದಂತೆ ಕರೆದರು. ಇದರಿಂದ ಕೊಹ್ಲಿ ಹಾಗೂ ಗಂಭೀರ್‌ ನಡುವೆ ಮಾತಿನ ಚಕಮಕಿ ಶುರುವಾಯಿತು’ ಎಂದು ವಿವರಿಸಿದ್ದಾರೆ. ‘‘ಗಂಭೀರ್‌, ‘ನೀನೇನು ಹೇಳುತ್ತಿದ್ದೀಯ ಈಗ ಹೇಳು’ ಎಂದು ಪ್ರಶ್ನಿಸಿದಾಗ ‘ನಾನು ನಿಮಗೇನು ಹೇಳಿಲ್ಲ. ನೀವೇಕೆ ತಲೆಹಾಕುತ್ತಿದ್ದೀರಿ’ ಎಂದು ಉತ್ತರಿಸಿದರು. ಇದಕ್ಕೆ ಗಂಭೀರ್‌ ‘ನೀನು ನನ್ನ ಆಟಗಾರನನ್ನು ನಿಂದಿಸಿದರೆ ನನ್ನ ಕುಟುಂಬವನ್ನು ನಿಂದಿಸಿದ ಹಾಗೆ’ ಎಂದರು. ಇದಕ್ಕೆ ಕೊಹ್ಲಿ, ‘ಹಾಗಿದ್ದರೆ ನಿಮ್ಮ ಕುಟುಂಬವನ್ನು ನೀವು ಸರಿಯಾಗಿ ನಿರ್ವಹಿಸಿ’ ಎಂದರು. ಗಂಭೀರ್‌ರನ್ನು ಕೆ.ಎಲ್‌.ರಾಹುಲ್‌ ಸೇರಿ ಇತರರು ಕರೆದೊಯ್ಯುವ ಮುನ್ನ, ‘ಹಾಗಿದ್ದರೆ, ಈಗ ನಾನು ನಿನ್ನಿಂದ ಕಲಿಯಬೇಕಾ’ ಎಂದರು’’ ಎಂದು ಪ್ರತ್ಯಕ್ಷದರ್ಶಿ ವಿವರಿಸಿದ್ದರು.

Latest Videos
Follow Us:
Download App:
  • android
  • ios