ಟೆಸ್ಟ್‌ ಕಕ್ರಿಕೆಟ್‌ನಲ್ಲಿ 800 ವಿಕೆಟ್‌ ದಾಖಲೆ ಸರಿಗಟ್ಟಲು ರವಿಚಂದ್ರನ್ ಅಶ್ವಿನ್ ಹೊರತುಪಡಿಸಿ ಉಳಿದ ಬೌಲರ್‌ಗಳಿಂದ ಸಾಧ್ಯವಿಲ್ಲ ಎಂದು ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರುಳಿಧರನ್‌ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಸಿಡ್ನಿ(ಜ.15): ದಿಗ್ಗಜ ಸ್ಪಿನ್ನರ್‌ ಶ್ರೀಲಂಕಾದ ಮುತ್ತಯ್ಯ ಮುರಳಿಧರನ್‌ ತಮ್ಮ 800 ಟೆಸ್ಟ್‌ ವಿಕೆಟ್‌ಗಳನ್ನು ಸರಿಗಟ್ಟಲು ಕೇವಲ ಭಾರತದ ಆರ್‌.ಅಶ್ವಿನ್‌ರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಿಸಿದ್ದಾರೆ. 

‘ಅಶ್ವಿನ್‌ಗೆ 800 ವಿಕೆಟ್‌ ಗಳಿಸುವ ಅವಕಾಶವಿದೆ, ಏಕೆಂದರೆ ಅವರು ಅದ್ಭುತ ಬೌಲರ್‌. ಬೇರಾರ‍ಯವ ಯುವ ಬೌಲರ್‌ಗಳಿಂದಲೂ 800 ವಿಕೆಟ್‌ ಸಾಧನೆ ಸಾಧ್ಯವಿಲ್ಲ ಎನಿಸುತ್ತದೆ. ನೇಥನ್‌ ಲಯನ್‌ ಕೂಡ ಆ ಮೈಲಿಗಲ್ಲು ತಲುಪುವಷ್ಟು ಉತ್ತಮ ಬೌಲರ್‌ ಅಲ್ಲ’ ಎಂದು ಮುರಳಿ ಹೇಳಿದ್ದಾರೆ. ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಇದುವರೆಗೂ 74 ಟೆಸ್ಟ್‌ಗಳಲ್ಲಿ 377 ವಿಕೆಟ್‌ ಕಬಳಿಸಿದ್ದಾರೆ. ಇನ್ನು ನೂರನೇ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ನೇಥನ್‌ ಲಯನ್‌ 396 ವಿಕೆಟ್‌ ಪಡೆದು, 400 ವಿಕೆಟ್‌ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ.

ಆಸ್ಟ್ರೇಲಿಯಾ ಎದುರು ಗಾಯಕ್ಕೆ ತುತ್ತಾದವರು ಟೀಂ ಇಂಡಿಯಾದ ಒಬ್ಬಿಬ್ಬರಲ್ಲ, ಬರೋಬ್ಬರಿ ಅರ್ಧ ಡಜನ್..!

ರವಿಚಂದ್ರನ್‌ ಅಶ್ವಿನ್ ಹಾಗೂ ನೇಥನ್‌ ಲಯನ್‌ ಈ ಇಬ್ಬರು ಸ್ಪಿನ್ನರ್‌ಗಳು ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಅಶ್ವಿನ್‌ ಆಸೀಸ್‌ ಎದುರು ಈ ಸರಣಿಯಲ್ಲಿ 3 ಟೆಸ್ಟ್‌ ಪಂದ್ಯಗಳನ್ನಾಡಿ 12 ವಿಕೆಟ್‌ ಕಬಳಿಸಿದ್ದಾರೆ. ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ಅಶ್ವಿನ್ ಬ್ರಿಸ್ಬೇನ್ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ಇನ್ನು 100ನೇ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಯನ್‌ ಈ ಬಾರಿ ತವರಿನಲ್ಲೇ ವಿಕೆಟ್ ಕಬಳಿಸಲು ಪರದಾಡುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಲಯನ್ ಕೇವಲ 6 ವಿಕೆಟ್ ಕಬಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.