Asianet Suvarna News Asianet Suvarna News

ಮುಷ್ಫಿಕುರ್ ಆಕರ್ಷಕ ಶತಕ; ಲಂಕಾ ಎದುರು ಸರಣಿ ಗೆದ್ದ ಬಾಂಗ್ಲಾದೇಶ

* ಶ್ರೀಲಂಕಾ ವಿರುದ್ದ ಏಕದಿನ ಸರಣಿ ಜಯಿಸಿದ ಬಾಂಗ್ಲಾದೇಶ

* 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 2-0 ಮುನ್ನಡೆ

* ಇದೇ ಮೊದಲ ಬಾರಿಗೆ ಲಂಕಾ ಎದುರು ದ್ವಿಪಕ್ಷೀಯ ಸರಣಿ ಗೆದ್ದ ಬಾಂಗ್ಲಾದೇಶ

Mushfiqur scores Century as Bangladesh beats Sri Lanka in 2nd Match clinches ODI series kvn
Author
Dhaka, First Published May 26, 2021, 2:13 PM IST

ಢಾಕಾ(ಮೇ.26): ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಮುಷ್ಪಿಕುರ್ ರಹೀಮ್‌ ಸಮಯೋಚಿತ ಶತಕ ಹಾಗೂ ಮೆಹದಿ ಹಸನ್ ಮತ್ತು ಮುಷ್ತಾಫಿಜುರ್ ರೆಹಮಾನ್‌ ಮಾರಕ ದಾಳಿಯ ನೆರವಿನಿಂದ ಶ್ರೀಲಂಕಾ ವಿರುದ್ದ ಎರಡನೇ ಏಕದಿನ ಪಂದ್ಯದಲ್ಲಿ ಡೆಕ್ವರ್ತ್ ಲೂಯಿಸ್‌ ನಿಯಮದಂತೆ 103 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಬಾಂಗ್ಲಾದೇಶ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ದ್ವಿಪಕ್ಷೀಯ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾ ವಿರುದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡ ಏಕದಿನ ಸರಣಿ ಜಯಿಸಿದ ಸಾಧನೆ ಮಾಡಿದೆ. ಇದಷ್ಟೇ ಅಲ್ಲದೇ ವಿಶ್ವಕಪ್ ಸೂಪರ್‌ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಮೊದಲ ಒನ್‌ ಡೇ: ಲಂಕಾ ದಹನ ಮಾಡಿದ ಬಾಂಗ್ಲಾದೇಶ

ಹೌದು, ಬಾಂಗ್ಲಾದೇಶ ನೀಡಿದ್ದ 246 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಲಂಕಾ 24 ರನ್‌ ಬಾರಿಸುವಷ್ಟರಲ್ಲಿ ನಾಯಕ ಕುಸಾಲ್ ಪೆರೆರಾ(14) ವಿಕೆಟ್ ಕಳೆದುಕೊಂಡಿತು. ಬಳಿಕ ಲಂಕಾ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಲಂಕಾದ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. 

ಒಂದು ಹಂತದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು 25 ಓವರ್‌ ಅಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು ಕೇವಲ 89 ರನ್‌ ಬಾರಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ದನುಷ್ಕಾ ಗುಣತಿಲಕಾ 24 ರನ್ ಬಾರಿಸಿದ್ದೇ ಪಂದ್ಯದಲ್ಲಿ ಲಂಕಾ ಪರ ದಾಖಲಾದ ವೈಯುಕ್ತಿಕ ಗರಿಷ್ಟ ಮೊತ್ತ ಎನಿಸಿತು. ಬಾಂಗ್ಲಾದೇಶ ಗೆಲ್ಲಲು ಇನ್ನೊಂದು ವಿಕೆಟ್ ಪಡೆಯುವ ಅವಶ್ಯಕತೆ ಇದ್ದಾಗ ಮಳೆ ಅಡ್ಡಿಪಡಿಸಿದ್ದರಿಂದ ಡೆಕ್ವರ್ತ್ ಲೂಯಿಸ್‌ ನಿಯಮದನ್ವಯ ಬಾಂಗ್ಲಾದೇಶ ತಂಡವನ್ನು ಜಯಶಾಲಿ ಎಂದು ಘೋಷಿಸಲಾಯಿತು.

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಮುಷ್ಪೀಕುರ್ ರಹೀಮ್(125ರನ್, 127 ಎಸೆತ) ಆಕರ್ಷಕ ಶತಕದ ನೆರವಿನಿಂದ 246 ರನ್ ಬಾರಿಸಿ ಸರ್ವಪತನ ಕಂಡಿತ್ತು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ: 246/10
ಮುಷ್ಫಿಕುರ್ ರಹೀಮ್: 125
ಚಮೀರ: 44/3

ಶ್ರೀಲಂಕಾ: 141/9(40 ಓವರ್)
ದನುಷ್ಕಾ ಗುಣತಿಲಕ: 24
ಮುಷ್ತಾಫಿಜುರ್: 16/3
 

Follow Us:
Download App:
  • android
  • ios