* ಬಾಂಗ್ಲಾದೇಶ ವಿರುದ್ದ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಶ್ರೀಲಂಕಾ* ಬಾಂಗ್ಲಾದೇಶ ವಿರುದ್ದ 33 ರನ್‌ಗಳ ಸೋಲು ಕಂಡ ಶ್ರೀಲಂಕಾ* 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶಕ್ಕೆ 1-0 ಮುನ್ನಡೆ

ಢಾಕಾ(ಮೇ.24): ಬಾಂಗ್ಲಾದೇಶ ಆಫ್‌ ಸ್ಪಿನ್ನರ್ ಮೆಹದಿ ಹಸನ್‌ ಮಿಂಚಿನ ದಾಳಿಗೆ ತತ್ತರಿಸಿದ ಶ್ರೀಲಂಕಾ ಕ್ರಿಕೆಟ್ ತಂಡವು ಮೊದಲ ಏಕದಿನ ಪಂದ್ಯದಲ್ಲಿ 33 ರನ್‌ಗಳ ಆಘಾತಕಾರಿ ಸೋಲು ಕಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ಬಾಂಗ್ಲಾದೇಶ 1-0 ಮುನ್ನಡೆ ಸಾಧಿಸಿದೆ. 

ಬಾಂಗ್ಲಾದೇಶ ನೀಡಿದ್ದ 258 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ಶ್ರೀಲಂಕಾ ತಂಡ ಕೇವಲ 224 ರನ್‌ಗಳಿಗೆ ಸರ್ವಪತನ ಕಂಡಿತು. ಮೆಹದಿ ಹಸನ್‌ ಮಿಂಚಿನ ದಾಳಿಗೆ ಲಂಕಾ ತತ್ತರಿಸಿ ಹೋಯಿತು. ಅಗ್ರಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ್‌ ಸಹಾ 30+ ರನ್‌ ಬಾರಿಸಲು ಸಾಧಿಸಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ವಹಿಂದು ಹಸರಂಗ 60 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ 74 ರನ್‌ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Scroll to load tweet…

ಮೆಹದಿ ಹಸನ್ ಕೇವಲ 30 ರನ್‌ ನೀಡಿ 4 ವಿಕೆಟ್‌ ಪಡೆದರೆ, ಮುಷ್ತಾಫಿಜುರ್ ರೆಹಮಾನ್‌ 3, ಮೊಹಮ್ಮದ್‌ ಸೈಫುದ್ದೀನ್‌ 2 ಹಾಗೂ ಶಕೀಬ್ ಅಲ್‌ ಹಸನ್‌ ಒಂದು ವಿಕೆಟ್ ಪಡೆದರು. 

ಲಂಕಾ ಸರಣಿಗೆ ನಾಯಕನಾಗಲು ಧವನ್ ಪರ ಬ್ಯಾಟ್‌ ಬೀಸಿದ ದೀಪಕ್ ಚಹಾರ್

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಾಯಕ ತಮೀಮ್ ಇಕ್ಬಾಲ್‌(52), ಮುಷ್ಫಿಕುರ್ ರಹೀಮ್(84) ಹಾಗೂ ಮೊಹಮ್ಮದುಲ್ಲಾ(54) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 257 ರನ್‌ ಗಳಿಸಿತ್ತು.