Asianet Suvarna News Asianet Suvarna News

ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದ ಸರ್ಫರಾಜ್ ಖಾನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ  ಮಾಜಿ ಕ್ರಿಕೆಟಿಗ ಸರ್ಫರಾಜ್ ಖಾನ್ ವಲಸಿಗ ಕಾರ್ಮಿಕರ ಪಾಲಿಗೆ ಅನ್ನದಾತರಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Mumbai Cricketer Sarfaraz Khan distributes food packets to migrant workers in his native place
Author
Aligarh, First Published May 19, 2020, 7:42 PM IST

ಅಜಂಘಡ್(ಮೇ.19): ಲಾಕ್‌ಡೌನ್‌ನಿಂದಾಗಿ ತಮ್ಮ ಊರುಗಳಿಗೆ ತೆರಳಲು ನಡೆದೇ ಸಾಗುತ್ತಿರುವ ವಲಸೆ ಕಾರ್ಮಿಕರಿಗೆ ಮುಂಬೈ ಕ್ರಿಕೆಟಿಗ ಸರ್ಫರಾಜ್ ಖಾನ್ ಆಹಾರದ ಪೊಟ್ಟಣಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಸರ್ಫರಾಜ್ ಖಾನ್, ತಮ್ಮ ಮುಷೀರ್ ಹಾಗೂ ತಂದ ನೌಶಾದ್ ಜತೆಗೂಡಿ ಉತ್ತರ ಪ್ರದೇಶದ ಅಜಂಘಡದಲ್ಲಿ ವಲಸೆ ಕಾರ್ಮಿಕರಿಗೆ ಆಹಾರದ ಪೊಟ್ಟಣ, ನೀರಿನ ಬಾಟಲ್‌ಗಳನ್ನು ವಿತರಿಸುತ್ತಿದ್ದಾರೆ.

Mumbai Cricketer Sarfaraz Khan distributes food packets to migrant workers in his native place

ಈ ಕೆಲಸದ ಆಲೋಚನೆ ಹೊಳೆದದ್ದು ಮೊದಲು ನನ್ನ ತಂದೆಗೆ. ಇಲ್ಲಿಯವರೆಗೂ ಸಾವಿರಕ್ಕೂ ಅಧಿಕ ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. ಪ್ರತಿ ಆಹಾರದ ಪೊಟ್ಟಣದಲ್ಲಿ ಒಂದು ಸೇಬು, ಬಾಳೆ ಹಣ್ಣು, ಕೇಕ್, ಬಿಸ್ಕೇಟ್ಸ್ ಹಾಗೂ ನೀರಿನ ಬಾಟಲಿ ಒಳಗೊಂಡಿದೆ ಎಂದು ಸರ್ಫರಾಜ್ ಹೇಳಿದ್ದಾರೆ. ಇದೇ ವೇಳೆ ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಬಡವರು ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಈ ವರ್ಷ ಈದ್ ಹಬ್ಬವನ್ನು ಆಚರಿಸಿಕೊಳ್ಳದಿರಲು ಸರ್ಫರಾಜ್ ನಿರ್ಧರಿಸಿದ್ದಾರಂತೆ.

ವಿರಾಟ್ ಕೊಹ್ಲಿಯನ್ನೂ ಬಿಟ್ಟಿಲ್ಲ ಕ್ರಿಕೆಟ್ ಲಂಚದ ಕರ್ಮಕಾಂಡ..!

ವಲಸಿಗರ ಪರದಾಟ:

Mumbai Cricketer Sarfaraz Khan distributes food packets to migrant workers in his native place
ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಬೆನ್ನಲ್ಲೇ ವಲಸೆ ಕಾರ್ಮಿಕರ ಪರಿಸ್ಥಿತಿ ಹೇಳ ತೀರದಾಗಿದೆ. ವಲಸೆ ಕಾರ್ಮಿಕರೆಲ್ಲ ತಮ್ಮ ತಮ್ಮ ಊರು ಸೇರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಕಟ್ಟಡ ಕಾರ್ಮಿಕರು ತಮ್ಮ ಹೆಂಡತಿ-ಮಕ್ಕಳನ್ನು ಕರೆದುಕೊಂಡು ನಡೆದು ಹೋಗುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯ ಎನಿಸಿದೆ. ಮೇ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಶ್ರಮಿಕ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳಿಸುವ ಕೆಲಸ ಮಾಡುತ್ತಿದೆ.

Mumbai Cricketer Sarfaraz Khan distributes food packets to migrant workers in his native place

ಸರ್ಫರಾಜ್ ಖಾನ್ ಕ್ರಿಕೆಟ್ ಬದುಕು:

ಸರ್ಫರಾಜ್ ಖಾನ್ ಮುಂಬೈ ರಣಜಿ ತಂಡದ ಪರ ಕಣಕ್ಕಿಳಿಯುತ್ತಾರೆ. ಈ ಮೊದಲು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾಗಿದ್ದರು. ಪ್ರಸ್ತುತ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಆಟಗಾರರಾಗಿದ್ದಾರೆ. ಭಾರತ ಅಂಡರ್ 19 ತಂಡವನ್ನು ಸರ್ಫರಾಜ್ ಪ್ರತಿನಿಧಿಸಿದ್ದಾರೆ. 

ಸಚಿನ್ ದಾಖಲೆ ಅಳಿಸಿ ಹಾಕಿದ್ದ ಸರ್ಫರಾಜ್: 2009ರಲ್ಲಿ 12 ವರ್ಷದ ಸರ್ಫರಾಜ್ ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ 421 ಎಸೆತಗಳನ್ನು ಆಡಿ 439 ರನ್ ಚಚ್ಚಿದ್ದರು. ಈ ಮೂಲಕ 45 ವರ್ಷಗಳ ಕಾಲ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ದಾಖಲೆ ಸರ್ಫರಾಜ್ ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. 
ಇನ್ನು ರಣಜಿ ಟ್ರೋಫಿಯಲ್ಲೂ ಸರ್ಫರಾಜ್ 391 ಎಸೆತಗಳಲ್ಲಿ 301 ರನ್ ಸಿಡಿಸ ಗಮನ ಸೆಳೆದಿದ್ದರು. 
 

Follow Us:
Download App:
  • android
  • ios