ಮುಂಬೈ ಮೂಲದ ಸ್ಟಾರ್ ಆಲ್ರೌಂಡರ್ ಅಭಿಷೇಕ್ ನಾಯರ್ ಪ್ರಥಮ ದರ್ಜೆ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮುಂಬೈ(ಅ.24): ಭಾರ​ತೀಯ ದೇಸಿ ಕ್ರಿಕೆಟ್‌ನ ತಾರಾ ಆಲ್ರೌಂಡರ್‌ಗಳಲ್ಲಿ ಒಬ್ಬ​ರೆ​ನಿ​ಸಿದ್ದ ಮುಂಬೈನ ಅಭಿ​ಷೇಕ್‌ ನಾಯರ್‌, ಬುಧ​ವಾರ ಎಲ್ಲಾ ಮಾದ​ರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆ​ದರು. 

Scroll to load tweet…

2009ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಪರ 3 ಏಕ​ದಿನ ಪಂದ್ಯ​ಗ​ಳ​ನ್ನಾ​ಡಿದ್ದ ಅಭಿ​ಷೇಕ್‌, ಹಲ​ವು ವರ್ಷಗಳ ಕಾಲ ರಣಜಿ ಟ್ರೋಫಿ​ಯಲ್ಲಿ ಮುಂಬೈ ತಂಡ​ವನ್ನು ಪ್ರತಿ​ನಿ​ಧಿ​ಸಿದ್ದರು. 103 ಪ್ರಥಮ ದರ್ಜೆ ಪಂದ್ಯ​ಗ​ಳಲ್ಲಿ 5749 ರನ್‌ ಗಳಿ​ಸಿ​ರುವ ಅಭಿ​ಷೇಕ್‌, 13 ಶತಕ ಹಾಗೂ 32 ಅರ್ಧ​ಶ​ತಕಗಳನ್ನು ದಾಖ​ಲಿ​ಸಿ​ದ್ದರು. ಮುಂಬೈ 5 ಬಾರಿ ರಣಜಿ ಟ್ರೋಫಿ ಗೆಲುವಿನಲ್ಲಿ ನಾಯರ್ ಪ್ರಮುಖ ಪಾತ್ರವಹಿಸಿದ್ದರು. 

ಬಾಂಗ್ಲಾ ಸರ​ಣಿಗೆ ಧೋನಿ, ಕೊಹ್ಲಿ ಆಯ್ಕೆ ಡೌಟ್?

ಇತ್ತೀ​ಚೆಗೆ ಕ್ರಿಕೆಟ್‌ ಸಲ​ಹೆಗಾ​ರ​ರಾಗಿ ಕಾರ್ಯ​ನಿ​ರ್ವ​ಹಿ​ಸಲು ಆರಂಭಿ​ಸಿದ ಅಭಿ​ಷೇಕ್‌, ದಿನೇಶ್‌ ಕಾರ್ತಿಕ್‌, ಶ್ರೇಯಸ್‌ ಅಯ್ಯರ್‌ ಸೇರಿ​ದಂತೆ ಹಲವು ಆಟ​ಗಾ​ರರಿಗೆ ಟೀಂ ಇಂಡಿಯಾಗೆ ಕಮ್’ಬ್ಯಾಕ್ ಮಾಡಲು ನೆರ​ವಾ​ಗಿ​ದ್ದಾರೆ. ಕಳೆದ ಆವೃ​ತ್ತಿಯ ಐಪಿ​ಎಲ್‌ನಲ್ಲಿ ಕೆಕೆ​ಆರ್‌ ತಂಡದ ಮೆಂಟರ್‌ ಆಗಿಯೂ ಅವರು ಕೆಲಸ ಮಾಡಿ​ದ್ದರು.

INDvSA ಟೆಸ್ಟ್ ಸರಣಿಯಲ್ಲಿ ನಿರ್ಮಾಣವಾಯ್ತು ಹಲವು ದಾಖಲೆ!

ನಾನು ಸಂಪುರ್ಣ ಸಂತುಷ್ಟನಾಗಿದ್ದೇನೆ. ನಾನಿರುವ ಸ್ಥಾನ ತಲುಪಲು ಸಾಕಷ್ಟು ಕ್ರಿಕೆಟಿಗರು ಪರದಾಡುತ್ತಿದ್ದಾರೆ. ಇಷ್ಟು ದೀರ್ಘಕಾಲ ಕ್ರಿಕೆಟ್ ಆಡಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ನಾನು ಖುಷಿಯಿಂದಲೇ ಕ್ರಿಕೆಟ್’ಗೆ ವಿದಾಯ ಹೇಳುತ್ತಿದ್ದೇನೆಂದು ನಿವೃತ್ತಿ ಬಳಿಕ ನಾಯರ್ ಪ್ರತಿಕ್ರಿಯಿಸಿದ್ದಾರೆ.

ಅಭಿಷೇಕ್ ನಾಯರ್ ವಿದಾಯಕ್ಕೆ ಹಲವು ಹಿರಿ-ಕಿರಿಯ ಕ್ರಿಕೆಟಿಗರು ಶುಭಕೋರಿದ್ದಾರೆ...

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…