ನಿರ್ಣಾಯಕ ಘಟ್ಟದತ್ತ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಪ್ರಶಸ್ತಿ ಸುತ್ತು ಪ್ರವೇಶಿಸಿದ ಮುಂಬೈ, ಹಿಮಾಚಲ ಪ್ರದೇಶಮುಂಬೈ ಗೆಲುವಿನಲ್ಲಿ ಮಹತ್ತರ ಪಾತ್ರ ನಿಭಾಯಿಸಿದ ಶ್ರೇಯಸ್ ಅಯ್ಯರ್

ಕೋಲ್ಕತಾ(ನ.04): ಸಯ್ಯದ್ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ಹಾಗೂ ಮುಂಬೈ ತಂಡಗಳು ಚೊಚ್ಚಲ ಬಾರಿ ಫೈನಲ್‌ ಪ್ರವೇಶಿಸಿದ್ದು, ಪಂಜಾಬ್‌, ವಿದರ್ಭ ತಂಡಗಳು ಸೋತು ಹೊರಬಿದ್ದಿವೆ. ಗುರುವಾರ ಮೊದಲ ಸೆಮಿಫೈನಲ್‌ನಲ್ಲಿ ಹಿಮಾಚಲ, ಪಂಜಾಬ್‌ ವಿರುದ್ಧ 13 ರನ್‌ ಜಯಗಳಿಸಿತು. 

ಮೊದಲು ಬ್ಯಾಟ್‌ ಮಾಡಿದ ಹಿಮಾಚಲ 7 ವಿಕೆಟ್‌ಗೆ 176 ರನ್‌ ಕಲೆ ಹಾಕಿತು. ಸುಮೀತ್‌ ವರ್ಮಾ(25 ಎಸೆತದಲ್ಲಿ 51), ಆಕಾಶ್‌(25 ಎಸೆತದಲ್ಲಿ 43) ತಂಡಕ್ಕೆ ನೆರವಾದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್‌ 7 ವಿಕೆಟ್‌ಗೆ 163 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಗಿಲ್‌(45), ಮಂದೀಪ್‌ ಸಿಂಗ್‌(29), ರಮನ್‌ದೀಪ್‌(29) ಹೋರಾಟ ವ್ಯರ್ಥವಾಯಿತು. ರಿಶಿ ಧವನ್‌ 3 ವಿಕೆಟ್‌ ಪಡೆದರು.

ಸ್ಕೋರ್‌: 

ಹಿಮಾಚಲ 176/7(ಸುಮೀತ್‌ 51, ಆಕಾಶ್‌ 43, ಸನ್ವೀರ್‌ 2-17 
ಪಂಜಾಬ್‌ 163/7(ಗಿಲ್‌ 45, ರಿಶಿ 3-25)

ಮುಂಬೈಗೆ ಶರಣಾದ ವಿದರ್ಭ

2ನೇ ಸೆಮೀಸ್‌ನಲ್ಲಿ ವಿದರ್ಭ ವಿರುದ್ಧ ಮುಂಬೈ 5 ವಿಕೆಟ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ವಿದರ್ಭ ಜಿತೇಶ್‌ ಶರ್ಮಾ(24 ಎಸೆತಗಳಲ್ಲಿ ಔಟಾಗದೆ 46) ನೆರವಿನಿಂದ 7 ವಿಕೆಟ್‌ಗೆ 164 ರನ್‌ ಗಳಿಸಿದರೆ, ಮುಂಬೈ 16.5 ಓವರಲ್ಲಿ ಗುರಿ ತಲುಪಿತು. ಶ್ರೇಯಸ್‌ ಅಯ್ಯರ್‌(44 ಎಸೆತಗಳಲ್ಲಿ 73) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೃಥ್ವಿ ಶಾ 34, ಸರ್ಫರಾಜ್‌ ಖಾನ್‌ 27 ರನ್‌ ಗಳಿಸಿದರು.

ಸ್ಕೋರ್‌: 

ವಿದರ್ಭ 164/7(ಜಿತೇಶ್‌ 46*, ಅಪೂವ್‌ರ್‍ 34, ಶಮ್ಸ್‌ ಮುಲಾನಿ 3-20) 
ಮುಂಬೈ 169/5(ಶ್ರೇಯಸ್‌ 73, ಅಕ್ಷಯ್‌ 2-24)

ತಿಂಗಳ ಕ್ರಿಕೆಟಿಗರ ರೇಸಲ್ಲಿ ಕೊಹ್ಲಿ, ಜೆಮಿಮಾ, ದೀಪ್ತಿ

ದುಬೈ: ಭಾರತದ ತಾರಾ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ಜೆಮಿಮಾ ರೋಡ್ರಿಗಸ್‌ ಹಾಗೂ ದೀಪ್ತಿ ಶರ್ಮಾ ಐಸಿಸಿ ಅಕ್ಟೋಬರ್‌ ತಿಂಗಳ ಆಟಗಾರ/ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

T20 World Cup: ಥ್ರೋಡೌನ್‌ ಸ್ಪೆಷಲಿಸ್ಟ್‌ ಕರ್ನಾಟಕದ ರಘು ಭಾರತದ ಗೆಲುವಿನ 'ಆಫ್‌ಫೀಲ್ಡ್‌ ಹೀರೋ'!

ಟಿ20 ವಿಶ್ವಕಪ್‌ನಲ್ಲಿ 4 ಪಂದ್ಯಗಳಲ್ಲಿ 3 ಅರ್ಧಶತಕ ಬಾರಿಸಿರುವ ಕೊಹ್ಲಿ ಇದೇ ಮೊದಲ ಬಾರಿ ಪುರುಷರ ವಿಭಾಗದಲ್ಲಿ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ದ.ಆಫ್ರಿಕಾದ ಡೇವಿಡ್‌ ಮಿಲ್ಲರ್‌, ಜಿಂಬಾಬ್ವೆಯ ಸಿಕಂದರ್‌ ರಾಜಾ ಜೊತೆ ಸ್ಪರ್ಧಿಸಲಿದ್ದಾರೆ. ಇನ್ನು, ಏಷ್ಯಾಕಪ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದಿಂದಾಗಿ ಜೆಮಿಮಾ, ದೀಪ್ತಿ ಮಹಿಳಾ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ಪಾಕಿಸ್ತಾನದ ನಿದಾ ದಾರ್‌ ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಎಬಿಡಿ ಆರ್‌ಸಿಬಿ ಕೋಚ್‌?

ಬೆಂಗಳೂರು: ದಿಗ್ಗಜ ಕ್ರಿಕೆಟಿಗ ಎಬಿ ಡಿ ವಿಲಿಯ​ರ್‍ಸ್ ಆರ್‌ಸಿಬಿ ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಗುರುವಾರ ಬೆಂಗಳೂರಿಗೆ ಆಗಮಿಸಿದರು. ವಿಲಿಯ​ರ್‍ಸ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಡಿಯೋವನ್ನು ಆರ್‌ಸಿಬಿ ತನ್ನ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ‘ಮುಂದಿನ ವರ್ಷದ ಐಪಿಎಲ್‌ ಬಗ್ಗೆ ಮಾತನಾಡಲು ಬೆಂಗಳೂರಿಗೆ ಆಗಮಿಸಿದ್ದೇನೆ’ ಎಂದು ವಿಲಿಯ​ರ್‍ಸ್ ಹೇಳಿದ್ದಾರೆ. ಅವರು ತಂಡದ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.