Asianet Suvarna News Asianet Suvarna News

30 ಲಕ್ಷ ರೂ. ಸಂಪಾದಿಸಿ ರಾಂಚಿಯಲ್ಲಿ ವಿಶ್ರಾಂತಿ ಜೀವನ ಬಯಸಿದ್ದ ಧೋನಿ!

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಕಳೆದ 8 ತಿಂಗಳಿಂದ ಕ್ರಿಕೆಟ್‌ನಿಂದ ದೂರವಿದ್ದಾರೆ.  ಆದರೂ ವಿಶ್ವದಲ್ಲಿ ಗರಿಷ್ಠ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ ಎಂ.ಎಸ್.ಧೋನಿ. MSD ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿನ ಪ್ಲಾನ್ ಇದೀಗ ಬಯಲಾಗಿದೆ. ಅದರಲ್ಲೂ 30 ಲಕ್ಷ ರೂಪಾಯಿ ಸಂಪಾದಿಸಿದರೆ ಸಾಕು ರಾಂಚಿಯಲ್ಲಿ ವಿಶ್ರಾಂತಿ ಜೀವನಕ್ಕೆ ಪ್ಲಾನ್ ಮಾಡಿದ್ದರು ಅನ್ನೋ ಕುತೂಹಲ ಬಯಲಾಗಿದೆ.

MS Dhoni wants to make 30 lakhs from  cricket for Retirement life says wasim jaffer
Author
Bengaluru, First Published Mar 29, 2020, 8:59 PM IST
  • Facebook
  • Twitter
  • Whatsapp

ಮುಂಬೈ(ಮಾ.29): ವಿಶ್ವಕಪ್ 2019ರ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಎಂ.ಎಸ್.ಧೋನಿ ಇದೀಗ ಮತ್ತೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆಗಳು ಕ್ಷೀಣಿಸುತ್ತಿದೆ. ಐಪಿಎಲ್ 2020ರ ಮೂಲಕ ಭಾರತ ತಂಡಕ್ಕೆ ವಾಪಸ್ ಆಗುವ ಅಭಿಮಾನಿಗಳ ಸಣ್ಣ ಆಸೆಯು ಕೂಡ ಕೈ ಜಾರುತ್ತಿದೆ. 2004ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಧೋನಿ ಕ್ರಿಕೆಟ್‌ ಮೂಲಕ 30 ಲಕ್ಷ ರೂಪಾಯಿ ಸಂಪಾದಿಸಿ ರಾಂಚಿಯಲ್ಲಿ ವಿಶ್ರಾಂತಿ ಜೀವನಕ್ಕೆ ಬಯಸಿದ್ದರು ಅನ್ನೋ ಮಾಹಿತಿ ಬಹಿರಂಗವಾಗಿದೆ.

ಧೋನಿ ವಿದಾಯ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ಸುನಿಲ್ ಗವಾಸ್ಕರ್!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ದೇಸಿ ಕ್ರಿಕೆಟ್‌ನಲ್ಲಿನ ದಿಗ್ಗಜ ವಾಸಿಂ ಜಾಫರ್ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೋರ್ವ ಎಂ.ಎಸ್.ಧೋನಿ ಜೊತೆಗಿನ ಸ್ಮರಣೀಯ ಸಂದರ್ಭವನ್ನು ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಈ ವೇಳೆ ವಾಸಿಮ್ ಜಾಫರ್ ಧೋನಿ ಆರಂಭಿಕ ದಿನಗಳ ಫ್ಯೂಚರ್ ಪ್ಲಾನ್ ಕುರಿತು ಮಾಹಿತಿ ಬಹಿರಂಗ ಪಡಿಸಿದ್ದಾರೆ. 

ಐಪಿಎಲ್‌ ನಡೆಯದಿದ್ದರೆ ಏನಾಗಲಿದೆ ಧೋನಿ ಭವಿಷ್ಯ?.

ಅದು ಧೋನಿ ಟೀಂ ಇಂಡಿಯಾಗೆ ಆಗಮಿಸಿದ ಮೊದಲ ಅಥವಾ 2ನೇ ವರ್ಷ. ನನಗೆ ಈಗಲೂ ನೆನಪಿದೆ, ಕ್ರಿಕೆಟ್‌ನಿಂದ ನಾನು 30 ಲಕ್ಷ ರೂಪಾಯಿ ಸಂಪಾದಿಸಿದರೆ ಭವಿಷ್ಯದಲ್ಲಿ ನಾನು ರಾಂಚಿಯಲ್ಲಿ ಉತ್ತಮ ವಿಶ್ರಾಂತಿ ಜೀವನ ನಡೆಸಬಹುದು ಎಂದಿದ್ದ ಎಂದು ಜಾಫರ್ ಹೇಳಿದ್ದಾರೆ.

 

30 ಲಕ್ಷ ರೂಪಾಯಿಯಲ್ಲಿ ವಿಶ್ರಾಂತಿ ಜೀವನ ರೂಪಿಸಲು ಹೊರಟಿದ್ದ ಧೋನಿ ಇದೀಗ ಕೋಟಿ ಕೋಟಿ ರೂಪಾಯಿ ಒಡೆಯ. ಕ್ರಿಕೆಟ್‌ನಿಂದ ದೂರವಿದ್ದರೂ ಧೋನಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲ ಶ್ರೀಮಂತ ಕ್ರಿಕೆಟಿಗ ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ. 
 

Follow Us:
Download App:
  • android
  • ios