ರಾಂಚಿ(ನ.30): ಐಪಿಎಲ್ ಟೂರ್ನಿ ಬಳಿಕ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿದಾಯದ ಸ್ಪಷ್ಟತೆ ಸಿಗಲಿದೆ ಎಂದು  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಇತ್ತೀಚೆಗಷ್ಟೇ ಹೇಳಿದ್ದರು. ಇತ್ತ ಟೀಂ ಇಂಡಿಯಾದಿಂದ ದೂರ ಉಳಿದಿರುವ ಧೋನಿ ಶೀಘ್ರದಲ್ಲೇ ವಿದಾಯ ಹೇಳಲಿದ್ದಾರೆ ಅನ್ನೋ ಮಾಹಿತಿ ಕೇಳಿಬರುತ್ತಿದೆ. ಇದೀಗ ಧೋನಿ 2021ರ ಐಪಿಎಲ್ ಟೂರ್ನಿ ಆಡಿ ವಿದಾಯ ಹೇಳಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ನಿವೃತ್ತಿ ವದಂತಿ ಬಗ್ಗೆ ಮೌನ ಮುರಿದ ಧೋನಿ..!

ಧೋನಿ ಈಗಾಗಲೇ ಫ್ರಾಂಚೈಸಿ  ಮಾಲೀಕರಲ್ಲಿ ತಾನು 2021ರ ಐಪಿಎಲ್ ಟೂರ್ನಿ ಆಡುವುದಾಗಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 2020 ಹಾಗೂ 2021ರ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದಿದ್ದಾರೆ. ಆದರೆ ಟೀಂ ಇಂಡಿಯಾ ಪರ ಆಡೋ ಕುರಿತು ಯಾವುದೇ ಸುಳಿವು ಬಿಟ್ಟಕೊಟ್ಟಿಲ್ಲ.

ಇದನ್ನೂ ಓದಿ: ಧೋನಿ ನಿವೃತ್ತಿಗೆ ಮುಹೂರ್ತ ಫಿಕ್ಸ್ ಮಾಡಿದ ಕೋಚ್ ಶಾಸ್ತ್ರಿ!

2021ರಲ್ಲಿ ಬಹುತೇಕ ಎಲ್ಲಾ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ. 2021ರ ಐಪಿಎಲ್ ಟೂರ್ನಿ ಬಳಿಕ ಧೋನಿ ವಿದಾಯ ಹೇಳಲಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಇತ್ತ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಧೋನಿ ವಿದಾಯ ಕುರಿತು ಮೌನ ಮುರಿದಿದ್ದಾರೆ. ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ. ಆದರೆ ಶೀಘ್ರದಲ್ಲೇ ಧೋನಿ ಭವಿಷ್ಯದ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.