MS Dhoni IPL retiremen ಎಂ.ಎಸ್.ಧೋನಿ ಐಪಿಎಲ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ಕ್ರೀಡಾಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ. ಇದರ ಬೆನ್ನಲ್ಲೇ ತೆಲುಗು ನಟ ಬಾಲಕೃಷ್ಣ ಅವರು ಧೋನಿ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

MS Dhoni IPL retiremen: ಜಗತ್ತು ಕಂಡ ಅದ್ಭುತ ಆಟಗಾರ, ಗ್ರೇಟ್ ಫಿನಿಶರ್, ಮಿಸ್ಟರ್ ಕೂಲ್, ಲೇಜೆಂಡ್ ಕ್ರಿಕೆಟರ್ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ(MS Dhoni) ಆರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ವಿಶ್ವದಾದ್ಯಂತ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದರು. ಆದರೆ ಅಭಿಮಾನಿಗಳಿಗೆ ಒಂದು ಸಮಾಧಾನವಿತ್ತು. ಅದೆಂದರೆ ಧೋನಿ ಐಪಿಎಲ್ ನಲ್ಲಿ ಆಡಲಿದ್ದಾರೆ ಎಂಬುದು. ಕಳೆದ ಐಪಿಎಲ್‌ ಪಂದ್ಯದಲ್ಲಿ ಕೆಲವು ಪಂದ್ಯಗಳಾಡಿದರಾದರೂ ಫಿಟ್‌ನೆಸ್ ಸಮಸ್ಯೆ, ಗಾಯ, ಕೆಮ್ಮನ ಸಮಸ್ಯೆಯಿಂದ ಚೆನ್ನೈ ಕಿಂಗ್ಸ್ ತಂಡದಲ್ಲಿ ಅವರ ಬ್ಯಾಟಿಂಗ್ ವೈಭವ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗದೆ ನಿರಾಸೆ ಮೂಡಿಸಿತ್ತು.

ಎಂಎಸ್ ಧೋನಿ ಇಲ್ಲದಿದ್ದರಿಂದ ತಂಡವೂ ಕೂಡ ಉತ್ಸಾಹ ಕಳೆದುಕೊಂಡು ಅತ್ಯಂತ ಕಳಪೆ ಆಟವಾಡಿ ಸೋಲು ಅನುಭವಿಸಿತು. ಆದರೆ ಇದೀಗ 45 ನೇ ವಯಸ್ಸಿನಲ್ಲಿ ಐಪಿಎಲ್‌ನಿಂದಲೂ ನಿವೃತ್ತಿ ಘೋಷಿಸಿರುವುದು ಕ್ರೀಡಾಭಿಮಾನಿಗಳಿಗೆ ಮತ್ತಷ್ಟು ಆಘಾತ ಮೂಡಿಸಿದೆ. ಎಂಎಸ್ ಧೋನಿ ನಿವೃತ್ತಿ ಬಗ್ಗೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ತೆಲುಗಿನ ಖ್ಯಾತ ನಟ ಬಾಲಯ್ಯ ಕೂಡ ಎಂಎಸ್ ಧೋನಿ ಕುರಿತು ಎಲಿವೇಶನ್ ಡೈಲಾಗ್ಸ್ ಭಾರೀ ವೈರಲ್ ಆಗಿದೆ.

ತೆಲುವು ಚಿತ್ರರಂಗದ ಸ್ಟಾರ್ ಹೀರೋ, ಗಾಡ್ ಆಫ್ ಮಾಸಸ್ ಬಾಲಯ್ಯ ಕ್ಯಾಪ್ಟನ್ ಕೂಲ್ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋವೊಂದು ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ, ಅವರ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ ಶೇರ್ ಮಾಡಿಕೊಂಡಿದೆ.

ಬಾಲಯ್ಯ ಮಾರ್ಕ್ ಎಲಿವೇಶನ್

View post on Instagram