ಧೋನಿಗೆ ತಂತ್ರಗಾರಿಕೆ ಇಲ್ಲ ಎಂದು ನಿತೀಶ್ ರೆಡ್ಡಿ..! ವಿವಾದ ಮೈಮೇಲೆ ಎಳೆದುಕೊಂಡು 'ಉದಯೋನ್ಮುಖ ಕ್ರಿಕೆಟಿಗ'

ನಿತೀಶ್ ರೆಡ್ಡಿ ಆಲ್ರೌಂಡ್ ಆಟಕ್ಕೆ ಲೆಜೆಂಡ್ ಕ್ರಿಕೆಟರ್ಗಳೆಲ್ಲಾ ಫಿದಾ ಆಗಿದ್ದರು. ಹಾರ್ದಿಕ್ ಪಾಂಡ್ಯಗೆ ಬದಲಿ ಆಟಗಾರ ಸಿಕ್ಕಿದ ಅಂತ ಸಂತೋಷ ಪಟ್ಟಿದ್ದರು. ನಿತೀಶ್ ಸಹ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರು.

MS Dhoni Has Talent But No Technique SRH Emerging Star Nitish Kumar Reddy Apologises After Backlash From Thala Fans kvn

ಬೆಂಗಳೂರು: ನಿತೀಶ್ ಕುಮಾರ್ ರೆಡ್ಡಿ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಉತ್ತಮ ಪ್ರದರ್ಶನ ನೀಡಿದ್ದ. ಟೀಂ ಇಂಡಿಯಾಗೆ ಸದ್ಯದಲ್ಲಿ ಎಂಟ್ರಿಕೊಡ್ತಾನೆ ಅಂತ ಎಲ್ಲರೂ ಹೇಳಿದ್ದರು. ಆದ್ರೀಗ ಹೊಸ ವಿವಾದ ಮಾಡಿಕೊಂಡಿದ್ದಾನೆ. ಅದು ಟೀಂ ಇಂಡಿಯಾ ಲೆಜೆಂಡ್ ಕ್ಯಾಪ್ಟನ್ ಬಗ್ಗೆ ಮಾತನಾಡಿ. ಏನದು ಅನ್ನೋದು ಇಲ್ಲಿದೆ ನೋಡಿ. 

ಲೆಜೆಂಡ್ ಆಟಗಾರರೆಲ್ಲ ಈತನ ಆಟ ಹೊಗಳಿದರು..!

ನಿತೀಶ್ ಕುಮಾರ್ ರೆಡ್ಡಿ ಈ ಸಲದ ಐಪಿಎಲ್ ಮೂಲಕ ಬೆಳಕಿಗೆ ಬಂದ ಪ್ರತಿಭೆ. 21 ವರ್ಷದ ಆಂಧ್ರಪ್ರದೇಶದ ಈ ಆಲ್ರೌಂಡರ್, ಸನ್ ರೈಸರ್ಸ್ ಹೈದ್ರಾಬಾದ್ ಪರ ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಮಿಂಚಿದ್ರು. 11 ಇನ್ನಿಂಗ್ಸ್ನಿಂದ 142ರ ಸ್ಟ್ರೈಕ್ರೇಟ್ನಲ್ಲಿ 303 ರನ್ ಹೊಡೆದ್ದಾರೆ. ಎರಡು ಹಾಫ್ ಸೆಂಚುರಿಗಳನ್ನೂ ಬಾರಿಸಿದ್ದಾರೆ. ಹಲವು ಚುಟುಕು ಇನ್ನಿಂಗ್ಸ್ಗಳನ್ನ ಆಡಿ ಸನ್ ರೈಸರ್ಸ್‌ಗೆ ನೆರವಾಗಿದ್ದರು. ಡೆಲ್ಲಿ ವಿರುದ್ಧ 2 ವಿಕೆಟ್ ಸಹ ಪಡೆದಿದ್ದರು. ಇನ್ನು 17ನೇ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದರು.

ನಿತೀಶ್ ರೆಡ್ಡಿ ಆಲ್ರೌಂಡ್ ಆಟಕ್ಕೆ ಲೆಜೆಂಡ್ ಕ್ರಿಕೆಟರ್ಗಳೆಲ್ಲಾ ಫಿದಾ ಆಗಿದ್ದರು. ಹಾರ್ದಿಕ್ ಪಾಂಡ್ಯಗೆ ಬದಲಿ ಆಟಗಾರ ಸಿಕ್ಕಿದ ಅಂತ ಸಂತೋಷ ಪಟ್ಟಿದ್ದರು. ನಿತೀಶ್ ಸಹ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರು. ಐಪಿಎಲ್ನಲ್ಲಿ ಮಿಂಚಿದ, ಭಾರತಕ್ಕೆ ಇನ್ನೊಬ್ಬ ಆಲ್ರೌಂಡರ್ ಸಿಕ್ಕಿದ ಅನ್ನುವಷ್ಟರಲ್ಲೇ ನಿತೀಶ್ ರೆಡ್ಡಿ, ತಮ್ಮ ಬಾಯಿ ಹರಿದು ಬಿಟ್ಟಿದ್ದಾರೆ. ಅದು ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಎಂ ಎಸ್ ಧೋನಿ ಬಗ್ಗೆ. ಹೌದು, ಧೋನಿ ಬಳಿ ಅಪಾರ ಪ್ರತಿಭೆ ಇದೆ ಆದರೆ ಅವರಲ್ಲಿ ಅದಕ್ಕೆ ತಕ್ಕಂತೆ ತಂತ್ರಗಾರಿಕೆ ಇಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಬಳಿ ಅಪಾರ ಪ್ರತಿಭೆ ಇದೆ. ಆದರೆ ನಾನು ಹೇಳುವುದು ಏನೆಂದರೆ ಅವರಲ್ಲಿ ಅಪಾರ ಬುದ್ಧಿವಂತಿಕೆ ಇದೆ. ಅದಕ್ಕೆ ತಕ್ಕಂತೆ ತಂತ್ರಗಾರಿಕೆ ಇಲ್ಲ. ಧೋನಿ ಬಳಿ ವಿರಾಟ್ ಕೊಹ್ಲಿ ಬಳಿ ಇರುವಷ್ಟು ಕೌಶಲತೆ ಇಲ್ಲ. ಧೋನಿ ಅವರ ಬ್ಯಾಟಿಂಗ್ ತಂತ್ರಗಾರಿಕೆ ಕೊಹ್ಲಿಗಿಂತ ಕಡಿಮೆ ಇದೆ. ಆದರೆ ಆತ ನಿಜಕ್ಕೂ ದಿಗ್ಗಜ ಆಟಗಾರ. ಏಕೆಂದರೆ ಧೋನಿ ತಮ್ಮ ಸಾಮರ್ಥ್ಯ ಹಾಗೂ ಗೇಮ್ ಪ್ಲ್ಯಾನ್ ಅನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಆದ್ದರಿಂದಲೇ ಅವರು ತಾವು ನಾಯಕತ್ವ ವಹಿಸಿದ್ದ ತಂಡಗಳಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ ಎಂದು ನಿತೀಶ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಬೆಳೆಯುವ ಹುಡುಗನಿಗೆ ಬೇಕಿತ್ತಾ ವಿವಾದ..?

ನಿತೀಶ್ ಕುಮಾರ್ ರೆಡ್ಡಿಗೆ ಇನ್ನೂ 21 ವರ್ಷ. ಐಪಿಎಲ್ನಲ್ಲಿ ಇನ್ನಷ್ಟೇ ಕಣ್ಣು ಬಿಟ್ಟಿದ್ದಾನೆ. ಧೋನಿ ಆಡಿರುವ ಪಂದ್ಯದಷ್ಟೂ ಪಂದ್ಯಗಳನ್ನ ಕಣ್ಣಾರೆ ನೋಡಿಲ್ಲ. ತಾನಾಯ್ತು ತನ್ನ ಆಟವಾಯ್ತು. ಡೊಮೆಸ್ಟಿಕ್ ಮತ್ತು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ, ಟೀಂ ಇಂಡಿಯಾಗೆ ಹೇಗೆ ಎಂಟ್ರಿ ಕೊಡೋದು ಅನ್ನೋದ್ರ ಕಡೆ ಗಮನ ಹರಿಸೋದು ಬಿಟ್ಟು, ಧೋನಿ ಬಗ್ಗೆನೇ ಮಾತನಾಡಿದ್ದಾನೆ. ಇದು ಈಗ ದೊಡ್ಡ ವಿವಾದವಾಗಿದೆ. ಕ್ಷಮೆಯಾಚಿಸಿ, ಈ ವಿವಾದವನ್ನ ತಣ್ಣಗೆ ಮಾಡಿದ್ರೆ ಒಳ್ಳೆಯದು. ಇಲ್ಲವಾದ್ರೆ ಸೋಷಿಯಲ್ ಮೀಡಿಯಾದಲ್ಲಿ ಧೋನಿ ಫ್ಯಾನ್ಸ್ ನಿತೀಶ್ ರೆಡ್ಡಿಯನ್ನ ಹರಿದುಮುಕ್ಕಿದ್ರು ಆಶ್ಚರ್ಯವಿಲ್ಲ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios