ಮರದ ಕೆಳಗೆ ಕೂರುವ 'ವೈದ್ಯ'ನ ಬಳಿ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಎಂಎಸ್ ಧೋನಿ!
ಇದಕ್ಕಿಂತ ಅಚ್ಚರಿಯ ವಿಚಾರವೇನೆಂದರೆ, ಆಯುರ್ವೇದ ವೈದ್ಯ ಬಂಧನ್ ಸಿಂಗ್ ಅವರಿಗೆ ತಾನು ಯಾರಿಗೆ ಚಿಕಿತ್ಸೆ ನೀಡುತ್ತಿದ್ದೇನೆ ಎನ್ನುವುದೇ ತಿಳಿದಿರಲಿಲ್ಲ. ಕ್ರಿಕೆಟ್ ಬಗ್ಗೆ ಒಂಚೂರು ಆಸಕ್ತಿ ಇಲ್ಲದ ಬಂಧನ್ ಸಿಂಗ್‌ಗೆ ಧೋನಿ ಯಾರು ಎನ್ನುವುದೇ ತಿಳಿದಿರಲಿಲ್ಲ. ಆದರೆ, ಪ್ರತಿ ದಿನ ಅವರ ಕಾರಿನ ಸುತ್ತಲೂ ಚಿಕ್ಕ ಮಕ್ಕಳು ಸುತ್ತುವರಿದು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ನೋಡಿದ ಬಳಿಕ ಧೋನಿಯ ಜನಪ್ರಿಯತೆಯ ಬಗ್ಗೆ ತಿಳಿದಿತ್ತು.
ರಾಂಚಿ (ಜುಲೈ 1): ಕ್ರಿಕೆಟ್‌ನಿಂದ (Cricket) ನಿವೃತ್ತರಾಗಿರುವ ಎಂಎಸ್ ಧೋನಿ (MS Dhoni) ರಾಂಚಿಯಲ್ಲಿರುವ (Ranchi ) ತಮ್ಮ ಅದ್ದೂರಿಯಾದ ಮನೆಯಲ್ಲಿ ಬಿಡುವಿನ ಸಮಯವನ್ನು ಆರಾಮವಾಗಿ ಕಳೆಯುತ್ತಿದ್ದಾರೆ. ಸ್ನೇಹಿತರ ಬರ್ತ್‌ಡೇ, ಕ್ರಿಕೆಟ್ ಕುರಿತಾದ ಕಾರ್ಯಕ್ರಮ ಹಾಗೂ ಸಂಬಂಧಿಗಳನ್ನು ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ಯುವ ಕ್ರಿಕೆಟಿಗನನ್ನು ಭೇಟಿಯಾಗುವ ಸಲುವಾಗಿ ಜೆಎಸ್‌ಸಿಎ ಕ್ರೀಡಾಂಗಣಕ್ಕೆ ಹೋಗಿದ್ದರು.
ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡಿರುವ ಎಂಎಸ್ ಧೋನಿ ಬಹುಕಾಲದಿಂದ ಬಾಧಿಸುತ್ತಿರುವ ಮೊಣಕಾಲು ನೋವಿಗೆ (Knee Pain) ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಂತ ಧೋನಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ವಿದೇಶಕ್ಕಾಗಲಿ, ದೇಶದ ಪ್ರಖ್ಯಾತ ಆಸ್ಪತ್ರೆಯಾಗಲಿದೆ, ದೊಡ್ಡ ವೈದ್ಯರನ್ನಾಗಿ ಭೇಟಿಯಾಗಿಲ್ಲ. ರಾಂಚಿಯ ಹಳ್ಳಿಯೊಂದರ ಆಯುರ್ವೇದ ವೈದ್ಯರೊಬ್ಬರಲ್ಲಿ ಧೋನಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವೈದ್ಯರೇ ಹೇಳಿರುವ ಮಾಹಿತಿಯ ಪ್ರಕಾರ, ಧೋನಿ ಔಷಧಿಯನ್ನು ಮನೆಗೆ ಕೊಂಡೊಯ್ಯುವುದಿಲ್ಲ. ನಾಲ್ಕು ದಿನಗಳಗೊಮ್ಮೆ ರಾಂಚಿಯಿಂದ 70 ಕಿಲೋಮೀಟರ್ ದೂರದ ಹಳ್ಳಿಗೆ ಪ್ರಯಾಣ ಬೆಳೆಸಿ ಔಷಧಿ ಪಡೆದುಕೊಂಡು ಬರುತ್ತಿದ್ದಾರೆ.
ವೈದ್ಯ ಬಂಧನ್ ಸಿಂಗ್, ಧೋನಿಗೆ ಮಾತ್ರವಲ್ಲ ಧೋನಿಯವರ ತಂದೆ ತಾಯಿಗೂ ಕೂಡ ಮೊಣಕಾಲಿನ ಚಿಕಿನ್ಸರ ನೀಡಿದ್ದ. ಕಳೆದ ಮೂರು ದಶಕಗಳಿಂದಲೂ ಧೋನಿಯ ಪೋಷಕರಿಗೆ ಬಂಧನ್ ಸಿಂಗ್ ಚಿಕಿತ್ಸೆ ನೀಡುತ್ತಿದ್ದಾರೆ.
ಅವರು ಮರದ ಕೆಳಗೆ ಟಾರ್ಪಾಲಿನ್ ಟೆಂಟ್‌ನಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಕಳೆದ ಒಂದು ತಿಂಗಳಿನಿಂದ ಧೋನಿ ತಮ್ಮ ಮೊಣಕಾಲು ನೋವಿಗೆ ಔಷಧಿಗಳನ್ನು ಪಡೆಯಲು ಬರುತ್ತಿದ್ದಾರೆ. ಅವರು ಕುಳಿತುಕೊಳ್ಳುವ ಸ್ಥಳವು ಲಾಪುಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಕಟಿಂಗ್ಕೆಲಾದಲ್ಲಿದೆ. ವೈದ್ಯನ ಹೆಸರು ಪೂರ್ಣ ಹೆಸರು ಬಂಧನ್ ಸಿಂಗ್ ಖಾರ್ವಾರ್ (Bandhan Singh Kharwar) ಎಂದು ಹೇಳಲಾಗಿದೆ.
ಇದಕ್ಕಿಂತ ಅಚ್ಚರಿಯ ವಿಚಾರವೇನೆಂದರೆ, ಆಯುರ್ವೇದ ವೈದ್ಯ ಬಂಧನ್ ಸಿಂಗ್ ಅವರಿಗೆ ತಾನು ಯಾರಿಗೆ ಚಿಕಿತ್ಸೆ ನೀಡುತ್ತಿದ್ದೇನೆ ಎನ್ನುವುದೇ ತಿಳಿದಿರಲಿಲ್ಲ. ಕ್ರಿಕೆಟ್ ಬಗ್ಗೆ ಒಂಚೂರು ಆಸಕ್ತಿ ಇಲ್ಲದ ಬಂಧನ್ ಸಿಂಗ್‌ಗೆ ಧೋನಿ ಯಾರು ಎನ್ನುವುದೇ ತಿಳಿದಿರಲಿಲ್ಲ. ಆದರೆ, ಪ್ರತಿ ದಿನ ಅವರ ಕಾರಿನ ಸುತ್ತಲೂ ಚಿಕ್ಕ ಮಕ್ಕಳು ಸುತ್ತುವರಿದು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ನೋಡಿದ ಬಳಿಕ ಧೋನಿಯ ಜನಪ್ರಿಯತೆಯ ಬಗ್ಗೆ ತಿಳಿದಿತ್ತು. ಧೋನಿ ತಂದೆ-ತಾಯಿಗೆ ಚಿಕಿತ್ಸೆ ನೀಡುವ ವೇಳೆಯಲ್ಲೂ ಇವರು ಕ್ರಿಕೆಟಿಗ ಎಂಎಸ್ ಧೋನಿಯವರ ತಂದೆ ತಾಯಿ ಎನ್ನುವುದೂ ಗೊತ್ತಿರಲಿಲ್ಲವಂತೆ.
"ಧೋನಿ ಯಾವುದೇ ಆಡಂಬರವಿಲ್ಲದೆ ಸಾಮಾನ್ಯ ರೋಗಿಯಂತೆ ಬರುತ್ತಾರೆ, ಅವರಿಗೆ ಸೆಲೆಬ್ರಿಟಿ ಎಂಬ ಹೆಮ್ಮೆ ಇಲ್ಲ, ಆದರೆ, ಈಗ ಪ್ರತಿ ನಾಲ್ಕು ದಿನಕ್ಕೊಮ್ಮೆ, ಧೋನಿ ಇಲ್ಲಿಗೆ ಬರುತ್ತಾರೆ ಎನ್ನುವ ಸುದ್ದಿ ಬಂದಾಗಿಲಿನಿಂದ, ಇಲ್ಲಿಗೆ ಸಾಕಷ್ಟು ಅಭಿಮಾನಿಗಳು ಬರುತ್ತಿದ್ದಾರೆ. ಈಗ ಧೋನಿ ನಾಲ್ಕು ದಿನಗಳಿಗೊಮ್ಮೆ ಬಂದಾಗ, ಕಾರಿನಲ್ಲಿಯೇ ಕುಳಿತುಕೊಳ್ಳುತ್ತಾರೆ. ಅಲ್ಲಿಯೇ ನಾನು ಅವರಿಗೆ ಚಿಕಿತ್ಸೆ ನೀಡುತ್ತಿದ್ದೇನೆ' ಎನ್ನುತ್ತಾರೆ.
ಚೆನ್ನೈ ನಾಯಕತ್ವವನ್ನು ಮರಳಿ ಎಂಎಸ್ ಧೋನಿಗೆ ನೀಡಿದ ರವೀಂದ್ರ ಜಡೇಜಾ!
ಮೂಲಗಳ ಪ್ರಕಾರ, ಇಲ್ಲಿ ಚಿಕಿತ್ಸೆ ಪಡೆಯಲು ಆರಂಭಿಸಿದ ಬಳಿಕ ಧೋನಿಗೆ ಕಾಲುನೋವು ಸಾಕಷ್ಟು ಕಡಿಮೆಯಾಗಿದೆಯಂತೆ. ಶೀಘ್ರವೇ ಬೇಗ ಗುಣಮುಖರಾಗುವ ವಿಶ್ವಾಸವನ್ನೂ ಹೊಂದಿದ್ದು, 2023ರ ಐಪಿಎಲ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ. ಐಪಿಎಲ್ 2022 ವೇಳೆ ಚೆನ್ನೈ ತಂಡದ ಕೊನೆಯ ಪಂದ್ಯದ ವೇಳೆ, ನಾನು ಚೆಪಾಕ್ ಸ್ಟೇಡಿಯಂನಲ್ಲಿಯೇ ಕೊನೆಯ ಪಂದ್ಯವಾಡಲು ಬಯಸುತ್ತೇವೆ. ಇಲ್ಲಿನ ಫ್ಯಾನ್ಸ್‌ಗಳು ಅದಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದ್ದರು.
IPL 2022 ಬ್ರ್ಯಾಂಡ್ ಸಿಎಸ್ಕೆ ಅಲ್ಲ, ಬ್ರ್ಯಾಂಡ್ ಎಂಎಸ್ ಧೋನಿ..!
ಬರೀ 40 ರೂಪಾಯಿ ಚಾರ್ಜ್: ಆಯುರ್ವೇದ ಚಿಕಿತ್ಸೆಗಾಗಿ ಹಳ್ಳಿಯಲ್ಲಿ ಬಹಳ ಫೇಮಸ್ ಆಗಿರುವ ಬಂಧನ್ ಸಿಂಗ್ ಭಾರ್ವಾರ್, ಸಸ್ಯಗಳು, ಗಿಡಮೂಲಿಕೆಗಳು ಮತ್ತು ಇತರ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ತನ್ನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಅವರು ತಮ್ಮ ಶುಲ್ಕವಾಗಿ ಕೇವಲ 20 ರೂಪಾಯಿಗಳನ್ನು ಮತ್ತು ಅವರ ಔಷಧಿಯ ಪ್ರತಿ ಡೋಸ್‌ಗೆ ಮತ್ತೊಂದು 20 ರೂಪಾಯಿಗಳನ್ನು ವಿಧಿಸುತ್ತಾರೆ. ಧೋನಿಗೂ ಸಹ ಇದೇ ಮೊತ್ತವನ್ನು ಚಾರ್ಜ್ ಮಾಡಿದ್ದಾರೆ.