ಮಾಜಿ ಪತ್ನಿ ಹಸೀನಾ ಜಹಾನ್, ಮೊಹಮ್ಮದ್ ಶಮಿಗೆ ಪ್ರೀತಿ ವ್ಯಕ್ತಪಡಿಸಿ ವಿಡಿಯೋ ಹಂಚಿಕೊಂಡಿದ್ದಾರೆ. ಕಾನೂನು ಹೋರಾಟದ ನಡುವೆಯೂ ಶಮಿ ಮೇಲಿನ ಪ್ರೀತಿಯನ್ನು ಹಸೀನಾ ಬಹಿರಂಗಪಡಿಸಿದ್ದಾರೆ. ಏಳು ವರ್ಷಗಳ ಕಾನೂನು ಹೋರಾಟದಿಂದ ಯಾರಿಗೂ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಅವರ ಮಾಜಿ ಪತ್ನಿ ಹಸೀನಾ ಜಹಾನ್ ವಿಚ್ಛೇದನಾ ಪಡೆದುಕೊಂಡು ವರ್ಷಗಳೇ ಕಳೆದಿವೆ. ಕೋಲ್ಕತಾ ಹೈಕೋರ್ಟ್ ಮೊಹಮ್ಮದ್ ಶಮಿಗೆ ಅವರ ಮಾಜಿ ಹಸೀನಾಗೆ ಜೀವನ ನಿರ್ವಹಣೆಗೆ ಜೀವನಾಂಶ ರೂಪದಲ್ಲಿ ತಿಂಗಳಿಗೆ 4 ಲಕ್ಷ ರುಪಾಯಿ ನೀಡಲು ಆದೇಶ ನೀಡಿತ್ತು.

ಹೀಗಾಗಿ ಮೊಹಮ್ಮದ್ ಶಮಿ, ಹಸೀನಾ ಜಹಾನ್ ಹಾಗೂ ಆಕೆಯ ಮಗಳಿಗೆ ಜೀವನಾಂಶ ರೂಪದಲ್ಲಿ ತಿಂಗಳಿಗೆ 4 ಲಕ್ಷ ರುಪಾಯಿ ನೀಡಲು ಸಮ್ಮತಿಸಿದ್ದರು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹಸೀನಾ ಜಹಾನ್, ತಿಂಗಳಿಗೆ 4 ಲಕ್ಷ ರುಪಾಯಿ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ತಿಂಗಳಿಗೆ ಕನಿಷ್ಠ 10 ಲಕ್ಷ ರುಪಾಯಿ ಬೇಕು ಎಂದು ಹಸೀನಾ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಇನ್ನು ಇದೆಲ್ಲದರ ನಡುವೆ ಹಸೀನಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸದೊಂದು ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ತಮ್ಮ ಮಾಜಿ ಪತಿಯ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸಿದ್ದಾರೆ.

7 ವರ್ಷಗಳ ಬಳಿಕ ಶಮಿ ಮೇಲೆ ಹಸೀನಾಗೆ ಪ್ರೀತಿ!

ಮಾಡೆಲ್ ಹಾಗೂ ಶಮಿ ಮಾಜಿ ಪತ್ನಿ ಹಸೀನಾ ಜಹಾನ್ ಇದೀಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸದಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಸೀನಾ ತಮ್ಮ ಮಾಜಿ ಪತಿ ಶಮಿ ಮೇಲೆ ಪ್ರೀತಿ ವ್ಯಕ್ತಪಡಿಸುವ ಮಾತುಗಳನ್ನು ಆಡಿ ಗಮನ ಸೆಳೆದಿದ್ದಾರೆ. ಇದೇ ವೇಳೆ ಶಮಿಗಾಗಿ ಬಾಲಿವುಡ್‌ನ ಸೂಪರ್ ಹಿಟ್ ಹಾಡಿ ಗಮನ ಸೆಳೆದಿದ್ದಾರೆ. 1996ರಲ್ಲಿ ತೆರೆ ಕಂಡ 'ಪಾಪ ಕಹತೆ ಹೈ' ಸಿನಿಮಾದ 'ಪ್ಯಾರ್ ಮೇ ಹೋತಾ ಹೈ ಕ್ಯಾ ಜಾದೂ' ಹಾಡನ್ನು ಹಾಡಿ ಶಮಿ ಮೇಲೆ ಬಹಿರಂಗವಾಗಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಈ ಹಾಡನ್ನು ಸಿನಿಮಾಗೆ ಪ್ರಖ್ಯಾತ ಸಿಂಗರ್ ಕುಮಾರ್ ಸಾನೂ ಹಾಗೂ ಅಲ್ಕಾ ಯಾಗ್ನಿಕ್ ಜೋಡಿ ಹಾಡಿದ್ದರು. ತೊಂಬತ್ತರ ದಶಕದಲ್ಲಿ ಈ ಹಾಡು ಸೂಪರ್ ಹಿಟ್ ಆಗಿತ್ತು.

View post on Instagram
 

 

ಹಸಿನಾ ಜಹಾನ್ ಈ ವಿಡಿಯೋ ಕ್ಲಿನ್ ಜತೆಗೆ ಒಂದು ಸುದೀರ್ಘ ಮೆಸೇಜ್ ರವಾನಿಸಿದ್ದಾರೆ. ಈ ಮೆಸೇಜ್‌ನಲ್ಲಿ ಮೊಹಮ್ಮದ್ ಶಮಿಗೆ 'ಐ ಲವ್ ಯೂ' ಎಂದೂ ಹೇಳಿದ್ದಾರೆ. ಇದೇ ಸಂದೇಶದಲ್ಲಿ ನಮ್ಮಿಬ್ಬರ ನಡುವೆ ಕಳೆದ 7 ವರ್ಷಗಳಿಂದ ಕಾನೂನು ಹೋರಾಟಗಳು ನಡೆಯುತ್ತಿದೆ. ಇದರಿಂದ ಯಾರಿಗೂ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಚಾರಿತ್ರ್ಯಹೀನ ನಡೆ, ಅಹಂಕಾರ, ದುರಾಸೆಯಿಂದ ನಿಮ್ಮ ಕುಟುಂಬವನ್ನೇ ಹಾಳು ಮಾಡಿದ್ದೀರ ಎಂದು ಹಸೀನಾ ಹೇಳಿದ್ದಾರೆ.

ಶಮಿ-ಹಸೀನಾ ದೂರವಾಗಿದ್ದು ಹೇಗೆ?

ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಹಸೀನಾ ಜಹಾನ್ 2014ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ 4 ವರ್ಷಗಳ ಬಳಿಕ ಅಂದರೆ 2018ರಲ್ಲಿ ಹಸೀನಾ ಜಹಾನ್ ತಮ್ಮ ಮೇಲೆ ಶಮಿ ಹಾಗೂ ಅವರ ಕುಟುಂಬಸ್ಥರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಮಾಡಿದ್ದಾರೆ ಎಂದು ಮೊದಲು ಆರೋಪಿಸಿದ್ದರು. ಶಮಿ ತಮ್ಮ ಮೇಲೆ ದೈಹಿಕ ಹಲ್ಲೆ, ಕೌಟುಂಬಿಕ ದೌರ್ಜನ್ಯ ಹಾಗೂ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಹಸೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಮಿ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡಾ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಸಿಐ, ಶಮಿ ಮೇಲೆ ಭ್ರಷ್ಟಾಚಾರ ನಿಗ್ರಹ ಘಟಕದ ವತಿಯಿಂದ ತನಿಖೆ ನಡೆಸಿದ್ದರು. ಈ ತನಿಖೆಯಲ್ಲಿ ಶಮಿ ನಿರಪರಾಧಿ ಎನ್ನುವುದು ಸಾಬೀತಾಗಿತ್ತು. ಶಮಿಗೆ ಆ ಬಳಿಕ ಕ್ಲೀನ್ ಚಿಟ್ ಸಿಕ್ಕಿತ್ತು.