ಭಾರತ ತಿಣುಕಾಡಿ, ಹೋರಾಡಿ ಗಳಿಸಿದ್ದು 117 ರನ್. ಆದರೆ ಈ ಮೊತ್ತವನ್ನು ಆಸ್ಟ್ರೇಲಿಯಾ 11 ಓವರ್‌ನಲ್ಲಿ ಮುಗಿಸಿ ಪಂದ್ಯ ಗೆದ್ದುಕೊಂಡಿದೆ. ಭಾರತ ಒಂದೊಂದು ರನ್ ಗಳಿಸಲು ಪರದಾಡಿದರೆ, ಆಸ್ಟ್ರೇಲಿಯಾ ಯಾವುದೇ ಆತಂಕವಿಲ್ಲದೆ ಬೌಂಡರಿ ಸಿಕ್ಸರ್ ಸಿಡಿಸಿ 10 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ.

ವಿಶಾಖಪಟ್ಟಣಂ(ಮಾ.19): ಹರಸಾಹಸ ಮಾಡಿ ಭಾರತ 117 ರನ್ ಸಡಿಸಿ ನಿಟ್ಟುಸಿರುಬಿಟ್ಟಿತ್ತು. ಕನಿಷ್ಠ 100ರ ಗಡಿ ದಾಟಿತಲ್ಲ ಎಂದು ಅಭಿಮಾನಿಗಳು ತಮ್ಮನ್ನು ತಾವು ಸಮಾಧಾನ ಪಡಿಸಿಕೊಂಡರು. ಇತ್ತ ಮೊತ್ತ ಡಿಫೆಂಡ್ ಮಾಡಿಕೊಳ್ಳುವುದು ದೂರದ ಮಾತು ಅನ್ನೋದು ಮೊದಲೇ ಸ್ಪಷ್ಟವಾಗಿತ್ತು. ಆದರೆ ಕನಿಷ್ಠ ಹೋರಾಟ ನೀಡಲಿದೆ ಅನ್ನೋ ವಿಶ್ವಾಸವಿತ್ತು. ಆದರೆ ಭಾರತ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾದ ಅಬ್ಬರಕ್ಕೆ ಹೇಳಹೆಸರಿಲ್ಲದಂತಾಯಿತು. ಕೇವಲ 11 ಓವರ್‌ಗಳಲ್ಲಿ ಆಸ್ಟ್ರೇಲಿಯಾ ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಇದೀಗ 3ನೇ ಹಾಗೂ ಅಂತಿಮ ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.

118 ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ಯಾವುದೇ ಹಂತದಲ್ಲಿ ಆತಂಕ ಎದುರಿಸಲಿಲ್ಲ. ಸುಲಭ ಟಾರ್ಗೆಟ್ ಒಂದೆಡೆಯಾದರೆ, ಭಾರತ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಶ್ ಜೊತೆಯಾಟಕ್ಕೆ ಟೀಂ ಇಂಡಿಯಾ ಬಸವಳಿದಿತ್ತು. ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿತು.

ವಿಲ್ ಯು ಮ್ಯಾರಿ ಮಿ, ಅಭಿಮಾನಿಗೆ ಗುಲಾಬಿ ನೀಡಿ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ!

ಅಬ್ಬರಿಸಿದ ಮಿಚೆಲ್ ಮಾರ್ಶ್ ಕೇವಲ 28 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಟ್ರಾವಿಸ್ ಹೆಡ್ ಕೂಡ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಮಿಚೆಲ್ ಮಾರ್ಶ್ ಅಜೇಯ ರನ್ ಸಿಡಿಸಿದರೆ, ಟ್ರಾವಿಸ್ ಹೆಡ್ ಅಜೇಯ ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಪಂದ್ಯ ಗೆದ್ದುಕೊಂಡಿತು. 10 ವಿಕೆಟ್ ಗೆಲುವು ದಾಖಲಿಸಿದ ಆಸೀಸ್, ಸರಣಿಯಲ್ಲಿ 1-1 ಸಮಬಲ ಸಾಧಿಸಿತು. 

ಭಾರತ ವಿರುದ್ದ ಆಸ್ಟ್ರೇಲಿಯಾ ಅತೀ ದೊಡ್ಡ ಗೆಲುವು ದಾಖಲಿಸಿದೆ. ಕೇವಲ 11 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ ಪಂದ್ಯ ಮುಗಿಸಿದೆ. ಟಿ20 ಶೈಲಿಗಿಂತಲೂ ವೇಗವಾಗಿ ಆಸ್ಟ್ರೇಲಿಯಾ ಈ ಪಂದ್ಯವನ್ನು ಮುಗಿಸಿದೆ. ಇದೀಗ ಟೀಂ ಇಂಡಿಯಾ ಪ್ರದರ್ಶನ ಹಾಗೂ ಸೋಲಿಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಕನಿಷ್ಠ ಹೋರಾಟ ನೀಡದೇ ಸೋಲು ಅನುಭವಿಸಿದ ರೀತಿ ಬೇಸರ ತಂದಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಆಸ್ಟ್ರೇಲಿಯಾ ಏಕದಿನ ನಡುವೆ ಆಸ್ಕರ್ ಗೆದ್ದ RRR ನಾಟು ನಾಟು ಹಾಡಿಗೆ ಕೊಹ್ಲಿ ಡ್ಯಾನ್ಸ್!

ಮೊದಲು ಬ್ಯಾಟಿಂಗ್ ಮಾಡಿದ ಭಾರತ 26 ಓವರ್‌ಗಳಲ್ಲಿ 117 ರನ್ ಸಿಡಿಸಿ ಆಲೌಟ್ ಆಗಿತ್ತು. ರೋಹಿತ್ ಶರ್ಮಾ 13, ಶಭ್‌ಮನ್ ಗಿಲ್ ಶೂನ್ಯ, ವಿರಾಟ್ ಕೊಹ್ಲಿ 31, ಸೂರ್ಯಕುಮಾರ್ ಯಾದವ್ ಶೂನ್ಯ, ಕೆಎಲ್ ರಾಹುಲ್ 9 , ಹಾರ್ದಿಕ್ ಪಾಂಡ್ಯ 1, ರವೀಂದ್ರ ಜಡೇಜಾ 16, ಅಕ್ಸರ್ ಪಟೇಲ್ 29, ಕುಲ್ದೀಪ್ ಯಾದವ್ 4, ಮೊಹಮ್ಮದ್ ಶಮಿ 0 ಹಾಗೂ ಮೊಹಮ್ಮದ್ ಸಿರಾಜ್ ಯಾವುದೇ ರನ್ ಸಿಡಿಸದೆ ವಿಕೆಟ್ ಒಪ್ಪಿಸಿದರು. ಇದರ ಪರಿಣಾಮ ಭಾರತ ಅತ್ಯಲ್ಪ ಮೊತ್ತಕ್ಕೆ ಕುಸಿತ ಕಂಡಿತ್ತು. ಈ ಮೊತ್ತವನ್ನು ಸುಲಭವಾಗಿ ಆಸ್ಟ್ರೇಲಿಯಾ ಚೇಸ್ ಮಾಡಿದೆ.