ಧೋನಿಗೆ ವಂಚಿಸಿಲ್ಲ, ಅವರೇ ವಂಚಕ: ಮಿಹಿರ್‌ ದಿವಾಕರ್‌ ತಿರುಗೇಟು

ಧೋನಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ನನ್ನ ಹೆಸರು ಕೆಡಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಧೋನಿ ಹಾಗೂ ಅವರ ನಿರ್ದೇಶಕರು ಅವ್ಯವಹಾರ ನಡೆಸಿ, ನನ್ನ ಮೇಲೆ ಆರೋಪ ಹೋರಿಸುತ್ತಿದ್ದಾರೆ. ಆರ್ಕಾ ಅಕಾಡೆಮಿಯ ಲಾಭ, ಶೇರುಗಳಲ್ಲಿ 70:30 ಒಪ್ಪಂದವಾಗಿತ್ತು ಎಂದು ಧೋನಿ ಹೇಳಿದ್ದಾರೆ.

Mihir Diwakar called MS Dhoni allegations false  kvn

ಬೆಂಗಳೂರು(ಜ.07): ಆರ್ಕಾ ಕ್ರಿಕೆಟ್ ಅಕಾಡೆಮಿಯ ಒಪ್ಪಂದದ ವಿಚಾರದಲ್ಲಿ ತಮಗೆ ₹15 ಕೋಟಿ ವಂಚಿಸಿದ್ದಾರೆಂದು ನ್ಯಾಯಾಲಯದ ಮೆಟ್ಟಿಲೇರಿರುವ ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿಗೆ, ಅಕಾಡೆಮಿ ಪಾಲುದಾರರಾಗಿರುವ ಮಿಹಿರ್‌ ದಿವಾಕರ್‌ ತಿರುಗೇಟು ನೀಡಿದ್ದಾರೆ. ನಾನು ಧೋನಿಗೆ 15 ಕೋಟಿ ರು. ವಂಚಿಸಿಲ್ಲ, ಬದಲಾಗಿ ಧೋನಿಯೇ ನನಗೆ 5 ಕೋಟಿ ರು. ನೀಡಬೇಕು ಎಂದಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿರುವ ಮಿಹಿರ್‌, ಧೋನಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ನನ್ನ ಹೆಸರು ಕೆಡಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಧೋನಿ ಹಾಗೂ ಅವರ ನಿರ್ದೇಶಕರು ಅವ್ಯವಹಾರ ನಡೆಸಿ, ನನ್ನ ಮೇಲೆ ಆರೋಪ ಹೋರಿಸುತ್ತಿದ್ದಾರೆ. ಆರ್ಕಾ ಅಕಾಡೆಮಿಯ ಲಾಭ, ಶೇರುಗಳಲ್ಲಿ 70:30 ಒಪ್ಪಂದವಾಗಿತ್ತು ಎಂದು ಧೋನಿ ಹೇಳಿದ್ದಾರೆ. ಆದರೆ ಒಪ್ಪಂದದಲ್ಲಿ ಈ ರೀತಿ ಉಲ್ಲೇಖವೇ ಆಗಿಲ್ಲ. ಅದೆಲ್ಲಾ ಸುಳ್ಳು. ಧೋನಿಯ ವ್ಯವಹಾರಗಳನ್ನು ನಾನು ನೋಡಿಕೊಳ್ಳುತ್ತಿದ್ದೆ. ಅದರ ₹5 ಕೋಟಿ ನನಗೆ ಧೋನಿ ಬಾಕಿ ಉಳಿಸಿಕೊಂಡಿದ್ದಾರೆ. ಧೋನಿಗೆ ನಾನು ಹಣ ಬಾಕಿ ಇಟ್ಟಿಲ್ಲ. ಅಕಾಡೆಮಿಯಿಂದ ನೇರವಾಗಿ ಸಂಗ್ರಹಿಸಿದ ಹಣವನ್ನೇ ನನಗೆ ಧೋನಿ ಕೊಡಬೇಕಿದೆ ಎಂದು ದಿವಾಕರ್‌ ದೂರಿದ್ದಾರೆ.

ಕಳವಾಗಿದ್ದ ಡೇವಿಡ್ ವಾರ್ನರ್‌ ‘ಬ್ಯಾಗಿ ಗ್ರೀನ್‌’ ಪತ್ತೆ!

ಅಕಾಡೆಮಿ ಒಪ್ಪಂದದಲ್ಲಿ ತಮಗೆ ಬರಬೇಕಿದ್ದ ಶೇರು, ಲಾಭವನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಅಕಾಡೆಮಿಯ ಮಿಹಿರ್ ದಿವಾಕರ್, ಸೌಮ್ಯ ವಿಶ್ವಾಸ್‌ ವಿರುದ್ಧ ರಾಂಚಿ ನ್ಯಾಯಾಲಯದಲ್ಲಿ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಒಪ್ಪಂದದ ಷರತ್ತುಗಳನ್ನು ಪಾಲಿಸದೆ ವಂಚಿಸುತ್ತಿದ್ದಾರೆ ಎಂದು ಧೋನಿ ಉಲ್ಲೇಖಿಸಿದ್ದರು.

₹15 ಕೋಟಿ ವಂಚಿಸಿದವರ ವಿರುದ್ಧ ಧೋನಿ ಕೋರ್ಟ್‌ಗೆ

ರಾಂಚಿ: ಕ್ರಿಕೆಟ್ ಅಕಾಡೆಮಿಯ ಒಪ್ಪಂದದ ವಿಚಾರದಲ್ಲಿ ತಮಗೆ ಇಬ್ಬರು ಪಾಲುದಾರರು ₹15 ಕೋಟಿ ವಂಚಿಸಿದ್ದಾರೆ ಎಂದು ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ ಕೋರ್ಟ್‌ ಮೆಟ್ಟಿಲೇರಿದ್ದರು. ಚೆನ್ನೈನಲ್ಲಿರುವ ಆರ್ಕಾ ಕ್ರೀಡಾ ಅಕಾಡೆಮಿಯ ಮಿಹಿರ್ ದಿವಾಕರ್, ಸೌಮ್ಯ ವಿಶ್ವಾಸ್‌ ವಿರುದ್ಧ ರಾಂಚಿ ನ್ಯಾಯಾಲಯದಲ್ಲಿ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. 

15 ಕೋಟಿ ರುಪಾಯಿ ವಂಚನೆ: ಮಾಜಿ ಪಾರ್ಟ್ನರ್‌ಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ ಕೂಲ್ ಕ್ಯಾಪ್ಟನ್ ಧೋನಿ

ಅಕಾಡೆಮಿ ನಡೆಸಲು 2017ರಲ್ಲಿ ಧೋನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಒಪ್ಪಂದದ ಷರತ್ತುಗಳನ್ನು ಇಬ್ಬರು ಪಾಲಿಸಿಲ್ಲ. ಅಲ್ಲದೆ ಲಾಭ, ಶೇರುಗಳನ್ನೂ ನೀಡಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಧೋನಿ ಹಲವು ಬಾರಿ ನೋಟಿಸ್‌ ನೀಡಿದ್ದರು ಎನ್ನಲಾಗಿದೆ.
 

Latest Videos
Follow Us:
Download App:
  • android
  • ios