Asianet Suvarna News Asianet Suvarna News

Ashes 2023: 'ಲೀಡ್ಸ್‌ ಟೆಸ್ಟ್‌ನಿಂದ ಜೇಮ್ಸ್ ಆ್ಯಂಡರ್‌ಸನ್ ಅವರನ್ನು ಕೈಬಿಡಿ'

ಆ್ಯಷಸ್‌ ಟೆಸ್ಟ್ ಸರಣಿಯ ಎರಡನೇ ಪಂದ್ಯವು ರೋಚಕ ಘಟ್ಟದತ್ತ
ಮೂರನೇ ಟೆಸ್ಟ್‌ನಿಂದ ಜೇಮ್ಸ್ ಆ್ಯಂಡರ್‌ಸನ್ ಕೈಬಿಡಲು ಮಾಜಿ ನಾಯಕ ಸಲಹೆ
ಎರಡನೇ ಟೆಸ್ಟ್‌ನಲ್ಲಿ ಕೇವಲ ಎರಡು ವಿಕೆಟ್ ಕಬಳಿಸಿದ ಅನುಭವಿ ವೇಗಿ ಆ್ಯಂಡರ್‌ಸನ್

Michael Vaughan suggests England should drop James Anderson at Leeds kvn
Author
First Published Jul 2, 2023, 5:30 PM IST

ಲಂಡನ್‌(ಜು.02): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಆ್ಯಷಸ್‌ ಟೆಸ್ಟ್ ಸರಣಿಯ ಎರಡನೇ ಪಂದ್ಯವು ರೋಚಕ ಘಟ್ಟದತ್ತ ಸಾಗುತ್ತಿದೆ. ಹೀಗಿರುವಾಗಲೇ ಆಸ್ಟ್ರೇಲಿಯಾ ಎದುರಿನ ಲೀಡ್ಸ್ ಟೆಸ್ಟ್ ಪಂದ್ಯದಿಂದ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್ ಅವರನ್ನು ಕೈಬಿಡುವಂತೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸಲಹೆ ನೀಡಿದ್ದಾರೆ. 
 
ಜೇಮ್ಸ್ ಆ್ಯಂಡನ್‌ಸನ್(James Anderson) ಈ ಮೊದಲು ಎಜ್‌ಬಾಸ್ಟನ್‌ನಲ್ಲಿ ನಿರ್ಮಿಸಲಾಗಿದ್ದ ಪ್ಲಾಟ್‌ ಪಿಚ್ ಕುರಿತಂತೆ ಅಸಮಾಧಾನ ಹೊರಹಾಕಿದ್ದರು. ಇನ್ನು ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲೂ ಆ್ಯಂಡನ್‌ಸನ್ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಲಾರ್ಡ್ಸ್‌ ಟೆಸ್ಟ್ ಪಂದ್ಯದಲ್ಲಿ ವೇಗಿ ಆ್ಯಂಡನ್‌ಸನ್ ಎರಡು ಇನಿಂಗ್ಸ್‌ಗಳಿಂದ ಒಟ್ಟಾಗಿ ಕೇವಲ 2 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ಪರಿಣಾಮ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಇಂಗ್ಲೆಂಡ್ ಬೌಲಿಂಗ್ ಪಡೆ ವಿಫಲವಾಯಿತು. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಡೇವಿಡ್ ವಾರ್ನರ್ (David Warner) ಅರ್ಧಶತಕ ಬಾರಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ ಮತ್ತೋರ್ವ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಫಿಫ್ಟಿ ಬಾರಿಸುವಲ್ಲಿ ಯಶಸ್ವಿಯಾದರು.

ಮೊಹಮ್ಮದ್ ಕೈಫ್-ಪೂಜಾ ಯಾದವ್ ಮುದ್ದಾದ ಲವ್ ಸ್ಟೋರಿ..! ಇದು ಲವ್ ಜಿಹಾದ್ ಅಲ್ಲ..!

ಇದೀಗ ಖ್ಯಾತ ಕ್ರಿಕೆಟ್ ವೆಬ್‌ಸೈಟ್ Cricbuzz ಜತೆ ಮಾತನಾಡಿರುವ ಮೈಕೆಲ್ ವಾನ್‌, ಆಸ್ಟ್ರೇಲಿಯಾ ಎದುರಿನ ಲೀಡ್ಸ್‌ ಟೆಸ್ಟ್ ಪಂದ್ಯದಿಂದ ವೇಗಿ ಆ್ಯಂಡನ್‌ಸನ್ ಅವರನ್ನು ಕೈಬಿಡುವಂತೆ ಸಲಹೆ ನೀಡಿದ್ದಾರೆ. "ಇನ್ನೂ ಮೂರು ಟೆಸ್ಟ್ ಪಂದ್ಯಗಳು ನಡೆಯಬೇಕಿದೆ. ಎಲ್ಲಾ ಪಂದ್ಯಗಳನ್ನು ಅವರು ಆಡಲು ಸಾಧ್ಯವಿಲ್ಲ. ನಾನು ಅವರನ್ನು ಮುಂದಿನ ವಾರದ ಪಂದ್ಯದಿಂದ ಕೈಬಿಡುತ್ತಿದ್ದೆ. ಯಾಕೆಂದರೆ ಅವರಿಂದ ಪರಿಣಾಮಕಾರಿ ಪ್ರದರ್ಶನ ಮೂಡಿ ಬರುತ್ತಿಲ್ಲ. ಅವರೊಬ್ಬ ಅತ್ಯದ್ಭುತ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ, ಆದರೆ ಅವರು ಕ್ಷೇತ್ರ ರಕ್ಷಣೆಯಲ್ಲಿ ಕ್ಯಾಚ್ ಕೈಚೆಲ್ಲಿದ ರೀತಿ ಗಮನಿಸಿದರೆ, ನಾನು ಈ ಹಿಂದೆ ನೋಡಿದ ಆ್ಯಂಡನ್‌ಸನ್ ಇವರೇನಾ ಎನಿಸುತ್ತಿದೆ. ಯಾಕೆಂದರೆ ಅವರು ಕ್ಷೇತ್ರರಕ್ಷಣೆ ವೇಳೆ ಸಾಕಷ್ಟು ಚುರುಕಾಗಿದ್ದರು ಎಂದು ಮೈಕೆಲ್ ವಾನ್ (Michael Vaughan) ಹೇಳಿದ್ದಾರೆ.

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ವೇಗಿಗಳಿಗೆ ಸ್ವರ್ಗ ಎನಿಸಿರುವ ಲಾರ್ಡ್ಸ್ ಟೆಸ್ಟ್‌ನಲ್ಲಿ ಮೊದಲು ಬ್ಯಾಟ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು 416 ರನ್ ಬಾರಿಸುವಲ್ಲಿ ಯಶಸ್ವಿಯಾಯಿತು. ಲಾರ್ಡ್ಸ್‌ ಟೆಸ್ಟ್ ಪಂದ್ಯದಲ್ಲಿ ಆ್ಯಂಡನ್‌ಸನ್ ಬದಲಿಗೆ ಮಾರ್ಕ್‌ ವುಡ್ ಅವರನ್ನು ಕಣಕ್ಕಿಳಿಸಿದ್ದರೇ ತಂಡಕ್ಕೆ ಹೆಚ್ಚು ಪ್ರಯೋಜನವಾಗುವ ಸಾಧ್ಯತೆಯಿತ್ತು ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.

Ashes 2023 ಲಾರ್ಡ್ಸ್‌ ಟೆಸ್ಟ್; ಜಯದ ವಿಶ್ವಾಸದಲ್ಲಿ ಆಸ್ಟ್ರೇಲಿಯಾ..!

"ಜೇಮ್ಸ್ ಆ್ಯಂಡನ್‌ಸನ್ ಅವರ ಕ್ರಿಕೆಟ್ ಬದುಕು ಮುಗಿದೇ ಹೋಯಿತು ಎಂದು ನಾನು ಹೇಳುತ್ತಿಲ್ಲ. ಮುಂದಿನ ವಾರದಿಂದ ಆರಂಭವಾಗುವ ಟೆಸ್ಟ್‌ನಿಂದ ವಿಶ್ರಾಂತಿ ಪಡೆಯಲಿ. ಇದಾದ ಬಳಿಕ ತವರಿನ ಮೈದಾನವಾದ ಓಲ್ಡ್ ಟ್ರಾಫೋರ್ಡ್‌ನಲ್ಲಿ ಆಡುವ ಸಾಮರ್ಥ್ಯವಿದ್ದರೇ ತಂಡ ಕೂಡಿಕೊಳ್ಳಲಿ. ಹೀಗಾದಲ್ಲಿ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರಿಗೆ ಕೊಂಚ ವಿಶ್ರಾಂತಿ ಸಿಗಲಿದೆ. ಅವರಿಗೀಗ 41 ವರ್ಷ ವಯಸ್ಸು. ಸತತ ಎರಡು ಟೆಸ್ಟ್ ಪಂದ್ಯವನ್ನಾಡಿರುವ ಅವರಿಗೆ ಕೊಂಚ ವಿಶ್ರಾಂತಿಯ ಅಗತ್ಯವಿದೆ" ಎಂದು ಮೈಕೆಲ್ ವಾನ್ ಹೇಳಿದ್ದಾರೆ.

5 ಪಂದ್ಯಗಳ ಆ್ಯಷಸ್‌ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ರೋಚಕ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಇದೀಗ ಎರಡನೇ ಟೆಸ್ಟ್‌ ಪಂದ್ಯದ ಕೊನೆಯ ದಿನದಾಟ ರೋಚಕಘಟ್ಟ ತಲುಪಿದ್ದು, ಇದೀಗ ಗೆಲುವು ಯಾವ ತಂಡದ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios