ಕೊನೇ ಓವರ್‌ನಲ್ಲಿ ಮುಂಬೈ ತಂಡದ ಗೆಲುವಿಗೆ 16 ರನ್ ಬೇಕಿದ್ದವು. ಕೈಯಲ್ಲಿ ಇನ್ನೂ 6 ವಿಕೆಟ್‌ಗಳಿದ್ದವು. ಇಂಥ ಸಮಯದಲ್ಲಿ ಮನಮೋಹಕ ದಾಳಿ ನಡೆಸಿದ ಆರ್ಶ್‌ದೀಪ್ ಸಿಂಗ್ ಪಂಜಾಬ್ ಕಿಂಗ್ಸ್ ತಂಡದ ಭರ್ಜರಿ ಗೆಲುವಿಗೆ ಕಾರಣರಾಗಿದ್ದಾರೆ.
ಮುಂಬೈ (ಏ.22): ಕೊನೇ ಓವರ್‌ನಲ್ಲಿ ಎರಡು ಬಾರಿ ಮಧ್ಯದ ಸ್ಟಂಪ್‌ಅನ್ನೇ ಮುರಿದುಹಾಕಿದಂತ ಎಸೆತಗಳನ್ನು ಎಸೆಯುವ ಮೂಲಕ ಮಾರಕ ದಾಳಿ ಸಂಘಟಿಸಿದ ಆರ್ಶ್‌ದೀಪ್ ಸಿಂಗ್, 16 ರನ್‌ಗಳನ್ನು ರಕ್ಷಣೆ ಮಾಡಿಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡದ 13 ರನ್‌ಗಳ ಸ್ಮರಣೀಯ ಗೆಲುವಿಗೆ ಕಾರಣರಾದರು. ಕೊನೇ ಓವರ್‌ನಲ್ಲಿ ಮುಂಬೈ ತಂಡದ ಗೆಲುವಿಗೆ 16 ರನ್ ಬೇಕಿತ್ತಾದರೂ, ಕೇವಲ 2 ರನ್ ನೀಡಿ ಎರಡು ವಿಕೆಟ್ ಉರುಳಿಸುವ ಮೂಲಕ ಆರ್ಶ್‌ದೀಪ್ ಜಯಕ್ಕೆ ಕಾರಣರಾದರು. ಅದರಲ್ಲ ಆರ್ಶ್‌ದೀಪ್ ಕೊನೇ ಓವರ್‌ನಲ್ಲಿ ತಿಲಕ್ ವರ್ಮ ಹಾಗೂ ನೇಹಲಾ ವಧೀರಾರನ್ನು ಬೌಲ್ಡ್ ಮಾಡಿದಾಗ ಸತತ ಎರಡು ಎಸೆತಗಳಲ್ಲಿ ಮಧ್ಯದ ಸ್ಟಂಪ್ ಅಕ್ಷರಶಃ ಎರಡು ತುಂಡಾದವು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 29 ರನ್‌ಗೆ 4 ವಿಕೆಟ್ ಉರುಳಿಸಿದ ಆರ್ಶ್‌ದೀಪ್ ಲೀಗ್‌ನಲ್ಲಿ ತಂಡದ ನಾಲ್ಕನೇ ಗೆಲುವಿಗೆ ನೆರವಾದರು. ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ ಕ್ಯಾಮರೂನ್ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಆಟವಾಡುವ ಮೂಲಕ ಶ್ರಮಿಸಿದರಾದರೂ, ಪಂದ್ಯದ ಅಂತಿಮ ಹಂತದಲ್ಲಿ ಪಂಜಾಬ್ ಬಿಗಿ ಬೌಲಿಂಗ್ ದಾಳಿ ನಡೆಸಿದ್ದರಿಂದ ಆಕರ್ಷಕ ಗೆಲುವು ಕಂಡಿತು.
IPL 2023: ಒಂದೇ ಓವರ್‌ನಲ್ಲಿ 31 ರನ್ ಚಚ್ಚಿಸಿಕೊಂಡ ಅರ್ಜುನ್ ತೆಂಡುಲ್ಕರ್, ಪಂಜಾಬ್ ಬಿಗ್ ಸ್ಕೋರ್!
ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಾಯಕ ಸ್ಯಾಮ್ ಕರ್ರನ್ ಅರ್ಧಶತಕ ಸೇರಿದಂತೆ ಕೆಳಕ್ರಮಾಂಕದ ಆಟಗಾರರ ಸಂಘಟಿತ ಬ್ಯಾಟಿಂಗ್‌ನಿಂದ 8 ವಿಕೆಟ್‌ಗೆ 214 ರನ್ ಪೇರಿಸಿತ್ತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡ ಇನ್ನೇನು ಗೆಲುವಿನ ಹಾದಿಯಲ್ಲಿದೆ ಎನ್ನುವಾಗ ಬೌಲಿಂಗ್ ಬಿಗಿ ಮಾಡಿದ ಪಂಜಾಬ್ ತಂಡ 6 ವಿಕೆಟ್‌ಗೆ 201 ರನ್‌ಗಳಿಗೆ ಐಪಿಎಲ್‌ನ ಯಶಸ್ವಿ ತಂಡವನ್ನು ಕಟ್ಟಿಹಾಕುವ ಮೂಲಕ ಗೆಲುವು ಕಂಡಿತು.
'ಮೂರ್ಖತನದ ಆಟ..' ಕೆಎಲ್ ರಾಹುಲ್ ಬ್ಯಾಟಿಂಗ್‌ಗೆ ವೆಂಕಟೇಶ್ ಪ್ರಸಾದ್ ಕಿಡಿ!
