ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಫ್ಘಾನ್ ಎದುರು ಗೆದ್ದು ಬೀಗಿದ ಬಾಂಗ್ಲಾದೇಶಆಫ್ಘಾನಿಸ್ತಾನ ಎದುರು 89 ರನ್ ಭರ್ಜರಿ ಜಯ ಸಾಧಿಸಿದ ಶಕೀಬ್ ಪಡೆಈ ಪಂದ್ಯ ಗೆದ್ದು ಸೂಪರ್ 4 ರೇಸ್‌ನಲ್ಲಿ ಉಳಿದ ಬಾಂಗ್ಲಾದೇಶ

ಲಾಹೋರ್‌(ಸೆ.04): ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 89 ರನ್ ಗೆಲುವು ಸಾಧಿಸಿದ ಬಾಂಗ್ಲಾದೇಶ ಏಷ್ಯಾಕಪ್‌ ಸೂಪರ್‌-4 ಹಂತದ ರೇಸ್‌ನಲ್ಲಿ ಉಳಿದುಕೊಂಡಿದೆ. ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದ ಬಾಂಗ್ಲಾ ಮೊದಲ ಜಯ ತನ್ನದಾಗಿಸಿಕೊಂಡು ಅಂಕಪಟ್ಟಿಯ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿತು. ಮಂಗಳವಾರ ನಡೆಯಲಿರುವ ಶ್ರೀಲಂಕಾ-ಆಫ್ಘನ್‌ ನಡುವಿನ ಪಂದ್ಯ ಗುಂಪಿನಿಂದ ಸೂಪರ್‌-4 ಪ್ರವೇಶಿಸುವ 2 ತಂಡಗಳ ಭವಿಷ್ಯ ನಿರ್ಧರಿಸಲಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 5 ವಿಕೆಟ್‌ ಕಳೆದುಕೊಂಡು 334 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ಆಫ್ಘನ್‌ 44.3 ಓವರ್‌ಗಳಲ್ಲಿ 245ಕ್ಕೆ ಓವರ್‌ಗಳಲ್ಲಿ ಆಲೌಟಾಯಿತು. ನಿಧಾನ ಆರಂಭ ಪಡೆದ ತಂಡಕ್ಕೆ ಇಬ್ರಾಹಿಂ ಜದ್ರಾನ್‌(75), ನಾಯಕ ಹಶ್ಮತುಲ್ಲಾ ಶಾಹಿದಿ(51) ಹೋರಾಟದ ಅರ್ಧಶತಕ ಚೇತರಿಕೆ ನೀಡಿತಾದರೂ, ಇತರರ ಕೊಡುಗೆ ಸಿಗದೆ ತಂಡಕ್ಕೆ ಸೋಲು ಎದುರಾಯಿತು. ತಸ್ಕಿನ್‌ ಅಹ್ಮದ್‌ 4 ವಿಕೆಟ್‌ ಕಿತ್ತರು.

Asia Cup 2023: ಭಾರತಕ್ಕಿಂದು ನೇಪಾಳ ಎದುರಾಳಿ; ಇಂದಿನ ಪಂದ್ಯಕ್ಕೂ ಮಳೆ ಅಡ್ಡಿ?

ಮೆಹಿದಿ, ನಜ್ಮುಲ್‌ ಶತಕ: 63ಕ್ಕೆ 2 ವಿಕೆಟ್‌ ಕಳೆದುಕೊಂಡ ಬಳಿಕ ಜೊತೆಗೂಡಿದ ಮೆಹಿದಿ ಹಸನ್‌(119 ಎಸೆತದಲ್ಲಿ 112) ಹಾಗೂ ನಜ್ಮುಲ್ ಹೊಸೈನ್‌(104) 215 ರನ್‌ ಜೊತೆಯಾಟವಾಡಿ ತಂಡ ಬೃಹತ್‌ ಮೊತ್ತ ಸೇರಿಸಲು ನೆರವಾದರು. ಶಕೀಬ್‌ 18 ಎಸೆತಗಳಲ್ಲಿ 32, ನೈಮ್‌ 28 ರನ್‌ ಕೊಡುಗೆ ನೀಡಿದರು.

ಸ್ಕೋರ್: 
ಬಾಂಗ್ಲಾ 50 ಓವರಲ್ಲಿ 334/5 (ಮೆಹಿದಿ 119, ನಜ್ಮುಲ್‌ 104, ಮುಜೀಬ್‌ 1-62)
ಆಫ್ಘನ್ 44.3 ಓವರ್‌ಗಳಲ್ಲಿ 245/10 (ಇಬ್ರಾಹಿಂ 75, ಶಾಹಿದಿ 51, ತಸ್ಕಿನ್‌ 4-44)

ಏಷ್ಯಾಕಪ್‌ ಸೂಪರ್‌-4 ಕೊಲಂಬೊದಿಂದ ಶಿಫ್ಟ್?

ಪಲ್ಲಕೆಲೆ: ಭಾರೀ ಮಳೆ ಭೀತಿ ಹಿನ್ನೆಲೆಯಲ್ಲಿ ಕೊಲಂಬೋದಲ್ಲಿ ನಡೆಯಬೇಕಿರುವ ಏಷ್ಯಾಕಪ್‌ನ ಸೂಪರ್‌-4 ಹಂತದ ಪಂದ್ಯಗಳು ದಾಂಬುಲಾಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಅಧಿಕಾರಿಗಳು ಲಂಕಾ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಜೊತೆ ಮಾತುಕತೆ ನಡೆಸುತ್ತಿದ್ದು, ಒಂದೆರಡು ದಿನದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

World Cup 2023: ವಿಶ್ವಕಪ್ ಟೂರ್ನಿಗೆ ಇಂದೇ ಭಾರತ ತಂಡ ಪ್ರಕಟ..? ರೋಹಿತ್ ಪಡೆಯಲ್ಲಿ ಯಾರಿಗೆಲ್ಲಾ ಸ್ಥಾನ?

ಸೆ.9ರಿಂದ ಕೊಲಂಬೊದಲ್ಲಿ ಸೂಪರ್‌-4 ಹಂತದ ಐದು ಹಾಗೂ ಫೈನಲ್‌ ಪಂದ್ಯ ನಿಗದಿಯಾಗಿದೆ. ಆದರೆ ಕೊಲಂಬೊದಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ ವಾರವೂ ಮುಂದುವರಿಯುವ ಮುನ್ಸೂಚನೆ ಇದೆ. ಹೀಗಾಗಿ ಪಲ್ಲಕೆಲೆ, ದಾಂಬುಲಾ ಅಥವಾ ಹಂಬನ್‌ತೋಟ ಕ್ರೀಡಾಂಗಣಗಳಿಗೆ ಸ್ಥಳಾಂತರಗೊಳಿಸುವ ಸಾಧ್ಯತೆಯಿದೆ. ಸದ್ಯ ಪಲ್ಲಕೆಲೆಯಲ್ಲೂ ಮಳೆಯಾಗುತ್ತಿದ್ದು, ದಾಂಬುಲಾ ಕ್ರೀಡಾಂಗಣ ಟೂರ್ನಿ ಆಯೋಜನೆಗೆ ಇನ್ನಷ್ಟೇ ಸಜ್ಜುಗೊಳ್ಳಬೇಕಿದೆ. ಹೀಗಾಗಿ ಬಿಸಿಲಿನ ವಾತಾವರಣವಿರುವ ಹಂಬನ್‌ತೋಟದಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.