ಏಕದಿನ ಕ್ರಿಕೆಟ್‌ ಬಹುತೇಕ ಸ್ಥಗಿತಕ್ಕೆ ತಜ್ಞರ ಸಲಹೆ..! ಯಾಕೆ ಹೀಗೆ?

2027ರ ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್‌ನ ಬಹುತೇಕ ಸ್ಥಗಿತಕ್ಕೆ ಐಸಿಸಿಗೆ ಸಲಹೆ
ಆ್ಯಷಸ್‌ ಸರಣಿ ವೇಳೆ ಸಭೆ ಸೇರಿರುವ 13 ಸದಸ್ಯರ ಸಮಿತಿ
 2027ರ ಏಕದಿನ ವಿಶ್ವಕಪ್‌ ಬಳಿಕ ಪಂದ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸುವಂತೆ ಸಲಹೆ

MCC Recommends Significant reduction of ODI Cricket after 2027 World Cup kvn

ಲಂಡನ್(ಜು.12): ಕ್ರಿಕೆಟ್‌ನ ಹೊಸ ನಿಯಮಗಳನ್ನು ರೂಪಿಸುವ ತಜ್ಞರ ಸಮಿತಿಯಾಗಿರುವ ಮೆರಿಲ್‌ಬೋರ್ನ್‌ ಕ್ರಿಕೆಟ್‌ ಕ್ಲಬ್‌(ಎಂಸಿಸಿ), 2027ರ ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್‌ನ ಬಹುತೇಕ ಸ್ಥಗಿತಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ)ಗೆ ಸಲಹೆ ನೀಡಿದೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಆ್ಯಷಸ್‌ ಸರಣಿ ವೇಳೆ ಸಭೆ ಸೇರಿರುವ ವಿವಿಧ ದೇಶಗಳ ಮಾಜಿ ಆಟಗಾರರು, ಅಧಿಕಾರಿಗಳನ್ನೊಳಗೊಂಡ ಎಂಸಿಸಿಯ 13 ಸದಸ್ಯರ ಸಮಿತಿಯು ಪ್ರತಿ ವಿಶ್ವಕಪ್‌ಗೆ ಹಿಂದಿನ 1 ವರ್ಷವನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡಿಸದಿರಲು ಸಲಹೆ ನೀಡಿದೆ. 

ಎಂಸಿಸಿ ಬಿಡುಗಡೆ ವರದಿಯಲ್ಲಿ ಸದ್ಯ ವಿಶ್ವಕಪ್‌ ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಏಕದಿನ ಕ್ರಿಕೆಟ್‌ನ ಮೌಲ್ಯದ ಬಗ್ಗೆ ಪ್ರಶ್ನೆ ಎತ್ತಿದ್ದು, ಹೀಗಾಗಿ 2027ರ ಏಕದಿನ ವಿಶ್ವಕಪ್‌ ಬಳಿಕ ಪಂದ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸುವಂತೆ ಸೂಚಿಸಿದೆ. ಇದರಿಂದ ಏಕದಿನ ಕ್ರಿಕೆಟ್‌ನ ಮೌಲ್ಯ ಹೆಚ್ಚಾಗುವುದರ ಜೊತೆಗೆ ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯಲ್ಲಿ ಹೆಚ್ಚಿನ ಬಿಡುವು ಸಿಗಲಿದೆ ಎಂದಿದೆ. ಅಲ್ಲದೇ ಟೆಸ್ಟ್‌ ಕ್ರಿಕೆಟ್‌ಗೆ ಹೆಚ್ಚಿನ ಮಹತ್ವ ಕೊಡಲು ತಜ್ಞರ ಸಮಿತಿ ಸಲಹೆ ನೀಡಿದ್ದು, ಮಹಿಳಾ ಕ್ರಿಕೆಟ್‌ ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುವಂತೆಯೂ ಐಸಿಸಿಗೆ ಸಲಹೆ ನೀಡಿದೆ.

ಭಾರತಕ್ಕೆ ಬಾಂಗ್ಲಾ ವಿರುದ್ಧ 8 ರನ್‌ ರೋಚಕ ಗೆಲುವು

ಢಾಕಾ: ಗೆಲುವಿಗೆ 10 ರನ್‌ ಬೇಕಿದ್ದಾಗ ಕೇವಲ 1 ರನ್‌ ನೀಡಿ 3 ವಿಕೆಟ್‌ ಕಿತ್ತ ಶಫಾಲಿ ವರ್ಮಾ ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧದ ರೋಚಕ 3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 8 ರನ್‌ ಗೆಲುವು ತಂದುಕೊಟ್ಟಿದ್ದಾರೆ. ಇದರೊಂದಿಗೆ ಭಾರತ 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದುಕೊಂಡಿದೆ.

Ind vs WI: ಇಂದಿನಿಂದ ಟೀಂ ಇಂಡಿಯಾಗೆ ವೆಸ್ಟ್ ಇಂಡೀಸ್ 'ಟೆಸ್ಟ್'..!

ಮೊದಲು ಬ್ಯಾಟ್‌ ಮಾಡಿದ ಭಾರತ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿ 8 ವಿಕೆಟ್‌ ಕಳೆದುಕೊಂಡು ಕೇವಲ 95 ರನ್‌ ಗಳಿಸಿತು. ಶಫಾಲಿ ವರ್ಮಾ ಸಿಡಿಸಿದ 19 ರನ್‌ ತಂಡದ ವೈಯಕ್ತಿಕ ಗರಿಷ್ಠ ಮೊತ್ತ. ಸುಲ್ತಾನ ಖಾತೂನ್‌(21ಕ್ಕೆ 3 ವಿಕೆಟ್‌) ಮಾರಕ ದಾಳಿ ನಡೆಸಿ ಭಾರತವನ್ನು ಕಾಡಿದರು. ಆದರೆ ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾವನ್ನು ಭಾರತೀಯ ಬೌಲರ್‌ಗಳು ಕಟ್ಟಿಹಾಕಿದರು. ನಿಗಾರ್‌ ಸುಲ್ತಾನ(38) ಏಕಾಂಗಿಯಾಗಿ ಹೋರಾಡಿದರೂ ಇತರರು ಕೈಕೊಟ್ಟರು. ದೀಪ್ತಿ ಶರ್ಮಾ 12ಕ್ಕೆ 3, ಶಫಾಲಿ 15ಕ್ಕೆ 3 ವಿಕೆಟ್‌ ಕಿತ್ತರು.

ಟಿ20: ಮತ್ತೆ ಅಗ್ರ-10ರಲ್ಲಿ ಸ್ಥಾನ ಪಡೆದ ಹರ್ಮನ್‌ಪ್ರೀತ್ ಕೌರ್

ದುಬೈ: ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಐಸಿಸಿ ಟಿ20 ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ-10ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಹರ್ಮನ್‌ 10ನೇ ಸ್ಥಾನ ಪಡೆದಿದ್ದಾರೆ. ಸ್ಮೃತಿ ಮಂಧನಾ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಬೌಲರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ 3ನೇ ಸ್ಥಾನದಲ್ಲಿದ್ದು, ರೇಣಕಾ ಸಿಂಗ್‌ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ 4ನೇ ಸ್ಥಾನದಲ್ಲಿದ್ದಾರೆ. ಇನ್ನು ಸ್ಮೃತಿ ಮಂದನಾ ಹಾಗೂ ಹರ್ಮನ್‌ಪ್ರೀತ್‌ ಕೌರ್ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿದ್ದಾರೆ.
 

Latest Videos
Follow Us:
Download App:
  • android
  • ios